ಈಜಿಪ್ಟ್: ಅಲ್-ಜಝೀರ ಪತ್ರಕರ್ತನ ಬಂಧನ

ಕೈರೊ (ಈಜಿಪ್ಟ್), ಡಿ. 24: ಕತಾರ್‌ನ ಟಿವಿ ಚಾನೆಲ್ ಅಲ್-ಜಝೀರದ ಪತ್ರಕರ್ತ ಈಜಿಪ್ಟ್ ಪ್ರಜೆ ಮಹ್ಮೂದ್ ಹುಸೈನ್‌ರನ್ನು ಈಜಿಪ್ಟ್ ಶುಕ್ರವಾರ ಅವರ ಮನೆಯಿಂದ ಬಂಧಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಶನಿವಾರ ತಿಳಿಸಿದರು.
ಟಿವಿ ಚಾನೆಲ್ ಪ್ರತಿಪಕ್ಷಗಳಿಗೆ ಬೆಂಬಲ ನೀಡುತ್ತಿದೆ ಎಂಬ ಆರೋಪದಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಅವರು ನುಡಿದರು. ಮಹ್ಮೂದ್ ರಜೆಯಲ್ಲಿ ಇಟಲಿಯ ತನ್ನ ಮನೆಗೆ ಬಂದ ಬಳಿಕ ಅವರನ್ನು ಬಂಧಿಸಲಾಗಿದೆ.
ಹುಸೈನ್ ಹಿಂಸಾಚಾರಕ್ಕೆ ಬೆಂಬಲ ನೀಡುತ್ತಿದ್ದಾರೆ ಹಾಗೂ ಸುಳ್ಳು ಸುದ್ದಿ ಹರಡುತ್ತಿದ್ದಾರೆ ಹಾಗೂ ನಿಷೇಧಿತ ಮುಸ್ಲಿಮ್ ಬ್ರದರ್‌ಹುಡ್ ಸಂಘಟನೆಗೆ ಸೇರಿದ್ದಾರೆ ಎಂಬ ಆರೋಪಗಳನ್ನು ಎದುರಿಸುತ್ತಿದ್ದಾರೆ.
Next Story





