ಅಪಘಾತ: ಇಬ್ಬರು ಬೈಕ್ ಸವಾರರ ಮೃತ್ಯು
ಸಾಗರ, ಡಿ.24: ತಾಲೂಕಿನ ಹೆಗ್ಗೋಡು ಸಮೀಪದ ಹೊನ್ನೇಸರ ವೃತ್ತದ ಬಳಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಢಿಕ್ಕಿ ಸಂಭವಿಸಿ ದ್ವಿಚಕ್ರ ಸವಾರರಿಬ್ಬರು ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ಮಣಿಪಾಲದಿಂದ ಸಾಗರಕ್ಕೆ ಬರುತ್ತಿದ್ದ ಖಾಸಗಿ ಬಸ್ (ಕೆಎ15 7882) ಹಾಗೂ ಎದುರಿನಿಂದ ಬರುತ್ತಿದ್ದ ಟಿ.ವಿ.ಎಸ್. ಎಕ್ಸೆಲ್ (ಕೆಎ15 ಎ6286) ನಡುವೆ ಸಂಭವಿಸಿದ ಅಪಘಾತದಲ್ಲಿ ಟಿವಿಎಸ್‌ನಲ್ಲಿದ್ದ ನಾಗರಾಜ ತೆಂಕೋಡು(40) ಹಾಗೂ ಮಂಜುನಾಥ ಶೆಡ್ತಿಕೆರೆ(30) ಎಂಬವರು ಸ್ಥಳದಲ್ಲಿಯೆ ಮೃತಪಟ್ಟಿದ್ದಾರೆ. ಈ ಸಂಬಂಧ ಮೃತ ನಾಗರಾಜ್ ಪುತ್ರ ನವೀನ್ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Next Story





