ಕ್ರಿಸ್‌ಮಸ್, ಹೊಸ ವರ್ಷದ ಪ್ರಯುಕ್ತ ‘ಟ್ರೂ ವ್ಯಾಲ್ಯೂ ಕಾರ್ಸ್’ ಮೆಗಾ ಸೇಲ್ಸ್ ಮೇಳ
ಮಾಂಡೋವಿ ಮೋಟಾರ್ಸ್

ುಂಗಳೂರು, ಡಿ.24: ನಗರದ ಪ್ರಸಿದ್ಧ ಮಾರುತಿಕಾರುಗಳ ಮಾರಾಟ ಗಾರ ಸಂಸ್ಥೆ ಮಾಂಡೋವಿ ಮೋಟಾರ್ಸ್ ಆಯೋಜಿ ಸಿರುವ ‘ಮಾರುತಿ ಟ್ರೂ ವ್ಯಾಲ್ಯೂ ಕಾರುಗಳ ಮೆಗಾ ಸೇಲ್ಸ್‌ಮೇಳ’ವು ಡಿ.26ರಂದು ಕೊನೆಗೊಳ್ಳ ಲಿದೆ.
ಮೇಳದಲ್ಲಿ ವಿವಿಧ ಬಗೆಯ ರೂ.50 ಸಾವಿರದಿಂದ ರೂ.6 ಲಕ್ಷದ ವರೆಗಿನ ವಿಭಿನ್ನ ಶ್ರೇಣಿಯ ಸುಮಾರು 80 ಕಾರುಗಳು ಪ್ರದರ್ಶನ ದಲ್ಲಿವೆ. ಬಲ್ಮಠ ಸರ್ಕಲ್ ಹತ್ತಿರ, ಎಸ್.ಸಿ.ಎಸ್. ಆಸ್ಪತ್ರೆಯ ರಸ್ತೆಯಲ್ಲಿ ರುವ ‘ಟ್ರೂ ವ್ಯಾಲ್ಯೂ ಕಾರ್ಸ್’ ಶೋರೂಂನಲ್ಲಿ ಹಮ್ಮಿಕೊಳ್ಳಲಾಗಿರುವ ಈ ಮೇಳದಲ್ಲಿ ವಿಶೇಷವಾಗಿ ಪ್ರಮಾಣೀಕರಿಸಿದ ಕಾರುಗಳಿಗೆ 1 ವರ್ಷದವರೆಗಿನ ವಾರಂಟಿ, 3 ಉಚಿತ ಸರ್ವಿಸ್ ಹಾಗೂ ವಿನಿಮಯ ಬೋನಸ್ ಕೂಡಾ ಲಭ್ಯವಾಗಲಿದೆ. ಗ್ರಾಹಕರ ಹಿತದೃಷ್ಟಿಯಿಂದ ಸ್ಥಳದಲ್ಲೇ ಸಾಲ ಸೌಲಭ್ಯವನ್ನು ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಗ್ರಾಹಕರು ನಗರದ ಬಲ್ಮಠ ರಸ್ತೆಯಲ್ಲಿರುವ ಮಾಂಡೋವಿ ಶೋರೂಮ್ ಅಥವಾ ಎಸ್.ಸಿ.ಎಸ್. ಆಸ್ಪತ್ರೆಯ ರಸ್ತೆಯಲ್ಲಿರುವ ಮಾಂಡೋವಿ ಮೋಟಾರ್ಸ್ ‘ಪ್ರೀ-ಓನ್ಡ್ ಕಾರ್ಸ್’ ಶೋರೂಮನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.
Next Story





