ಶರೀಫ್ ಹುಟ್ಟುಹಬ್ಬಕ್ಕೆ ಪಿಎಂ ಮೋದಿ ಶುಭಾಶಯ

ಹೊಸದಿಲ್ಲಿ, ಡಿ.25: ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿರುವ ಹೊರತಾಗಿಯೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ಪ್ರಧಾನಮಂತ್ರಿ ನವಾಝ್ ಶರೀಫ್‌ಗೆ ರವಿವಾರ ಹುಟ್ಟುಹಬ್ಬದ ಶುಭಾಶಯ ಕೋರಿ ಅಚ್ಚರಿ ಮೂಡಿಸಿದ್ದಾರೆ.
‘‘ಪಾಕಿಸ್ತಾನ ಪ್ರಧಾನಿ ನವಾಝ್ ಶರೀಫ್‌ಗೆ ಹುಟ್ಟುಹಬ್ಬದ ಶುಭಾಶಯಗಳು. ನಾನು ಅವರಿಗೆ ದೀರ್ಘಾಯುಷ್ಯ ಹಾಗೂ ಉತ್ತಮ ಆರೋಗ್ಯ ಸಿಗಲೆಂದು ಹಾರೈಸುವೆ’’ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನ ಸತತವಾಗಿ ಭಾರತದ ಮೇಲೆ ಭಯೋತ್ಪಾದಕ ದಾಳಿ ನಡೆಸುತ್ತಿರುವ ಹೊರತಾಗಿಯೂ ಮೋದಿ ಅವರು ಪಾಕ್ ಪ್ರಧಾನಿ ಶರೀಫ್‌ಗೆ ಜನ್ಮದಿನ ಶುಭಾಶಯ ಕೋರಿದ್ದಾರೆ.
ಕಳೆದ ವರ್ಷ ಇದೇ ದಿನ ಮೋದಿ ಅವರು ದಿಢೀರನೆ ಲಾಹೋರ್‌ಗೆ ಭೇಟಿ ನೀಡಿ ಶರೀಫ್ ಅವರ ಕುಟುಂಬ ಸದಸ್ಯರ ಮದುವೆ ಸಮಾರಂಭದಲ್ಲಿ ಹಾಜರಾಗಿ ಅಚ್ಚರಿ ಮೂಡಿಸಿದ್ದರು.
Next Story





