ನೂತನ ಗ್ರಾಂಡ್ ಪ್ಲಾಝಾ ಹೊಟೇಲ್ ಶುಭಾರಂಭ

ಮಂಗಳೂರು, ಡಿ.25: ನಗರದ ಲೈಟ್‌ಹೌಸ್ ಹಿಲ್ ರಸ್ತೆಯಲ್ಲಿ ನೂತನ ಗ್ರಾಂಡ್ ಪ್ಲಾಝಾ ಹೊಟೇಲ್ ಇಂದು ಶುಭಾರಂಭಗೊಂಡಿತು.
ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಅವರು ಗ್ರಾಂಡ್ ಪ್ಲಾಝಾ ಹೊಟೇಲ್‌ನ ಉದ್ಘಾಟನೆಯನ್ನು ನೆರವೇರಿಸಿದರು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊದಿನ್ ಬಾವ ಅವರು ಗ್ರಾಂಡ್ ಕೆಫೆ ಕಾಫಿ ಶಾಪ್‌ನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮೊದಿನ್ ಬಾವ ಅವರು, ಇಂದು ಉದ್ಘಾಟನೆಗೊಂಡಿರುವ ಗ್ರಾಂಡ್ ಪ್ಲಾಝಾ ಹೊಟೇಲ್ ಅಭಿವೃದ್ಧಿ ಹೊಂದುತ್ತಿರುವ ಮಂಗಳೂರು ನಗರದ ಹೃದಯಭಾಗದಲ್ಲಿರುವುದರಿಂದ ನಾಗರಿಕರಿಗೆ ಪೂರಕವಾಗಲಿದೆ. ರಸ್ತೆ ಸಾರಿಗೆ ವ್ಯವಸ್ಥೆ, ಶಾಪಿಂಗ್ ಮಾಲ್‌ಗಳ ಸಹಿತ ವಿವಿಧ ಸೌಲಭ್ಯಗಳು ಹೊಟೇಲ್‌ನ ಸನಿಹದಲ್ಲೇ ಇರುವುದರಿಂದ ದೇಶ, ವಿದೇಶಿಗಳಿಗೆ ಗ್ರಾಂಡ್ ಪ್ಲಾಝಾದಲ್ಲಿ ವಸತಿ ಪಡೆಯಲು ಅನುಕೂಲವಾಗಲಿದೆ ಎಂದರು.ಗ್ರಾಂಡ್ ಪ್ಲಾಝಾ ಹೊಟೇಲ್‌ನ ವ್ಯವಸ್ಥಾಪಕ ನಿರ್ದೇಶಕ ಎಸ್.ಎ.ಶರೀಫ್, ಪಾಲುದಾರ ರಿಝ್ವಾನ್, ಹೊಟೇಲ್‌ನ ವ್ಯವಸ್ಥಾಪಕ ಮೊದಿನ್ ಎ.ಕೆ., ಅಲ್ ಮುಝೈನ್‌ನ ಝಕರಿಯ್ಯಾ ಜೋಕಟ್ಟೆ, ಉದ್ಯಮಿಗಳಾದ ಬದ್ರುದ್ದೀನ್, ಮುಮ್ತಾಝ್ ಅಲಿ, ಶರೀಫ್ ಅವರ ಸಹೋದರ ಎಸ್.ಎ.ಅಶ್ರಫ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.





