ಸುಂಕದಕಟ್ಟೆ: ಬೊಲೆರೋ-ಪಿಕಪ್ ಢಿಕ್ಕಿ
ಮೂವರು ಗಂಭೀರ, ಹಲವರಿಗೆ ಗಾಯ

ಕಡಬ, ಡಿ.25: ಸುಂಕದಕಟ್ಟೆ ಎಂಬಲ್ಲಿ ಬೊಲೆರೊ ಹಾಗೂ ಪಿಕಪ್ ಮಧ್ಯೆ ಢಿಕ್ಕಿ ಸಂಭವಿಸಿ ಮೂವರು ಗಂಭೀರ ಗಾಯಗೊಂಡ ಘಟನೆ ರವಿವಾರ ಮಧ್ಯಾಹ್ನ ನಡೆದಿದೆ.
ಸುಂಕದಕಟ್ಟೆಯಿಂದ ಮರ್ಧಾಳಕ್ಕೆ ತೆರಳುತ್ತಿದ್ದ ಪಿಕಪ್ ವಾಹನಕ್ಕೆ ವಿರುದ್ಧ ದಿಕ್ಕಿನಿಂದ ಬಂದ ಹಾಸನ ಮೂಲದ ಕುಟುಂಬವೊಂದು ಇದ್ದ ಬೊಲೆರೋ ವಾಹನವು ಢಿಕ್ಕಿಯಾಗಿ ಮರಕ್ಕೆ ಅಪ್ಪಳಿಸಿದ ಪರಿಣಾಮ ಬೊಲೆರೋದಲ್ಲಿದ್ದ ಮಹಿಳೆಯರು ಸೇರಿದಂತೆ ಮೂವರು ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Next Story





