ಸೌದಿಅರೇಬಿಯ: ಸಂಬಳಕ್ಕಾಗಿ ಕೋರ್ಟಿಗೆ ಹೋದ ಭಾರತೀಯರ ಪರ ತೀರ್ಪು

ರಿಯಾದ್,ಡಿ.25: ಒಂದೂವರೆ ವರ್ಷ ಸಂಬಳಕ್ಕಾಗಿ ಹೋರಾಡಿ ಇಬ್ಬರು ತಮಿಳರು ಸೌದಿ ಕೋರ್ಟು ಆದೇಶದಂತೆ ಸ್ಪೋನ್ಸರ್‌ನಿಂದ ಸಂಬಳ, ಇತರ ಸೌಕರ್ಯಗಳನ್ನು ಪಡೆದು ಊರಿಗೆ ಮರಳಿದ್ದಾರೆ. ಇವರಿಬ್ಬರ ಪರ ಕೋರ್ಟು ತೀರ್ಪುಒಂದು ತಿಂಗಳ ಹಿಂದೆ ಬಂದಿತ್ತು. ಅದನ್ನು ಸಮ್ಮತಿಲು ಸ್ಪೋನ್ಸರ್ ನಿರಾಕರಿಸಿದ್ದ. ಆದ್ದರಿಂದ ಇವರು ಊರಿಗೆ ಮರಳುವುದು ಅನಿಶ್ಚಿತವೆನಿಸಿದಾಗ ಭಾರತೀಯ ಸಾಮಾಜಿಕ ಕಾರ್ಯಕರ್ತರು ನೆರವಾದರು ಎಂದು ವರದಿಯಾಗಿದೆ.
ಸ್ಪೋನ್ಸರ್ ತನ್ನ ಅಂಗಡಿಗೆ ಕೆಲಸಕ್ಕೆ ತಮಿಳ್ನಾಡಿನಿಂದ ಇಬ್ಬರನ್ನು ಕರೆಸಿಕೊಂಡಿದ್ದ. ವ್ಯಾಪಾರ ಇಲ್ಲದೆ ಅಂಗಡಿ ಒಂದೂವರೆವರ್ಷ ಹಿಂದೆ ಮುಚ್ಚಲ್ಪಟ್ಟಿತ್ತು. ಅಂಗಡಿಯನ್ನು ಬಾಡಿಗೆಗೆ ನಿರ್ವಹಿಸುವ ಕೊಡುಗೆ ಸ್ಪೋನ್ಸರ್ ಮುಂದಿಟ್ಟಾಗ ಅವರಿಬ್ಬರೂ ನಿರಾಕರಿಸಿದ್ದರು. ನಂತರ ಆವರೆಗೆ ದುಡಿದ ಸಂಬಳ ಕೂಡಾ ಕೊಡದೆ ಇಬ್ಬರನ್ನು ಸ್ಪೋನ್ಸರ್ ಹೊರದಬ್ಬಿದ್ದ. ಅವರಿಬ್ಬರು ಸಾಮಾಜಿಕ ಕಾರ್ಯಕರ್ತರ ನೆರವಿನಲ್ಲಿ ಕೋರ್ಟಿಗೆ ದೂರುನೀಡಿದ್ದರು. ಕೋರ್ಟು ಇಬ್ಬರಿಗೂ ಸಂಬಳ, ಸೌಕರ್ಯಗಳನ್ನು ನೀಡಿ ಊರಿಗೆ ಕಳುಹಿಸಲು ಆದೇಶಿಸಿತ್ತು. ಮೊದಲು ಕೋರ್ಟು ತೀರ್ಪನ್ನು ಪಾಲಿಸಲು ಒಪ್ಪಿಕೊಂಡಿರಲಿಲ್ಲ. ನಂತರ ಆತನ ಬ್ಯಾಂಕ್ ಖಾತೆಯಿಂದ ಸಂಬಳದ ಮೊತ್ತ ಮತ್ತು ಕೋರ್ಟು ವೆಚ್ಚವನ್ನು ಪಡೆಯಬೇಕೆಂದು ಕೋರ್ಟು ಆದೇಶಿಸಿತು. ಇದಕ್ಕೆ ಮಣಿದ ಸ್ಪೋನ್ಸರ್ ಎಕ್ಸಿಟ್ ವೀಸಾ ಪಾಸ್‌ಪೋರ್ಟ್ ಹಾಗೂ ಸಂಬಳದೊಂದಿಗೆ ಕೋರ್ಟಿಗೆ ಹಾಜರಾಗಿ ತಮಿಳು ಕಾರ್ಮಿಕರನ್ನು ಊರಿಗೆ ಕಳುಹಿಸಲು ಸಿದ್ಧನಾದ ಎಂದು ವರದಿ ತಿಳಿಸಿದೆ.





