ಮುಲ್ಕಿ : ಎಸ್ಸೆಸ್ಸೆಫ್ ಪಕ್ಷಿಕೆರೆ ಶಾಖೆಯ ಪದಾಧಿಕಾರಿಗಳ ಆಯ್ಕೆ

ಮುಲ್ಕಿ, ಡಿ.25: ಇಲ್ಲಿನ ಪಕ್ಷಿಕೆರೆಯ ಎಸ್ಸೆಸ್ಸೆಫ್ ಶಾಖೆಯ ನೂತನ ಅಧ್ಯಕ್ಷರಾಗಿ ಅಬ್ದುಲ್ ಸಮದ್ ಆಯ್ಕೆಯಾಗಿದ್ದಾರೆ.
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷ ಅಶ್ರಫ್ ಅಂಜದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಶಾಖೆಯ ಪ್ರ. ಕಾರ್ಯದರ್ಶಿಯಾಗಿ ಅಬ್ದುಲ್ ಸಾಹಿಲ್, ಉಪಾಧ್ಯಕ್ಷರಾಗಿ ಸುಶಾನ್,ಬಿ.ಎಮ್. ಮುಸ್ತಾಫ, ಕೋಶಾಧಿಕಾರಿ ತೌಸಿಫ್,ಜೊತೆ ಕಾರ್ಯದರ್ಶಿಗಳಾಗಿ ನವಾಝ್, ಅಯಾಝ್ ಹಾಗೂ ಸ್ವಲಾತ್ ಸಮಿತಿಯ ಮುಖಂಡರಾಗಿ ಸುಹೈಲ್, ಸರ್ಫರಾಝ್, ಅಝರುದ್ದೀನ್ ಸೇರಿದಂತೆ 21 ಕಾರ್ಯಕಾರಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಸೆಕ್ಟರ್ ಕೌನ್ಸಿಲರ್‌ಗಳಾಗಿ ಕೆ.ಎಮ್. ಇರ್ಶಾದ್, ಕೆ.ಪಿ ಕಲಂದರ್, ಸವಾದ್, ಸಫ್ವಾನ್, ಸರ್ಫರಾಝ್, ಬಿ.ಎಂ ಸುಲೈಮಾನ್, ಸುಶಾನ್, ಸುಹೈಲ್,ಅಶಿಕ್, ಕೆ.ಪಿ ಸಾಹಿಲ್, ಝಿಯಾನ್ ಅವರನ್ನು ಆಯ್ಕೆ ಮಾಡಲಾಯಿತು.
ಆಯ್ಕೆಗೂ ಮೊದಲು ಸಮಿತಿಯ ಕಳೆದ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕಮಂಡನೆ ಮಾಡಿ, ಬಳಿಕ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಲಾಯಿತು.
Next Story





