ನೂತನ ಐಎಂಎ ಕಮಾಂಡಂಟ್ ಆಗಿ ಲೆ|ಜ|ಸಂತೋಷ ಕುಮಾರ್ ನೇಮಕ

ಡೆಹ್ರಾಡೂನ್,ಡಿ.25: ಪ್ರತಿಷ್ಠಿತ ಇಂಡಿಯನ್ ಮಿಲಿಟರಿ ಅಕಾಡಮಿ(ಐಎನ್‌ಎ)ಯ ನೂತನ ಕಮಾಂಡಂಟ್ ಆಗಿ ಲೆಜಸಂತೋಷ ಕುಮಾರ್ ಉಪಾಧ್ಯಾಯ ಅವರು ನೇಮಕಗೊಂಡಿದ್ದಾರೆ.
ಹಲವಾರು ಪದಕ ಪುರಸ್ಕೃತ ಉಪಾಧ್ಯಾಯ ಅವರು ನ್ಯಾಷನಲ್ ಡಿಫೆನ್ಸ್ ಅಕಾಡಮಿಯ ಹಳೆಯ ವಿದ್ಯಾರ್ಥಿಯಾಗಿದ್ದಾರೆ.
1981ರಲ್ಲಿ ಗಡ್ವಾಲ್ ರೈಫಲ್ಸ್‌ನ 13ನೇ ಬಟಾಲಿಯನ್‌ಗೆ ಸೇರ್ಪಡೆಗೊಳ್ಳುವ ಮೂಲಕ ಸೇವೆಯನ್ನು ಆರಂಭಿಸಿದ್ದ ಅವರು,ತನ್ನ ಮೂರು ದಶಕಗಳಿಗೂ ಹೆಚ್ಚಿನ ವೃತ್ತಿ ಜೀವನದಲ್ಲಿ ಶ್ರೀಲಂಕಾ,ಈಶಾನ್ಯ ಭಾರತ,ಜಮ್ಮು-ಕಾಶ್ಮೀರ ಮತ್ತು ಪಂಜಾಬಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ.
Next Story





