ನೋಟು ಅಮಾನ್ಯ ನಿರ್ಧಾರ: ಪ್ರವಾಸೋದ್ಯಮ ಕ್ಷೇತ್ರಕ್ಕೆ ಮರ್ಮಾಘಾತ

ತಿರುವನಂತಪುರಂ, ಡಿ.25: ದೇವರ ಸ್ವಂತ ನಾಡು ಎಂದೇ ಖ್ಯಾತಿ ಪಡೆದ ಕೇರಳ ಪ್ರವಾಸಿಗರ ನೆಚ್ಚಿನ ತಾಣ. ಪ್ರತೀ ವರ್ಷ ಕೇರಳಕ್ಕೆ ಭೇಟಿ ನೀಡುವವರಲ್ಲಿ ಶೇ.70ರಷ್ಟು ಮಂದಿ ಅಕ್ಟೋಬರ್‌ನಿಂದ ಮಾರ್ಚ್‌ವರೆಗಿನ ಅವಧಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಈ ಬಾರಿ ಈ ಅವಧಿಯಲ್ಲಿ ಕೇರಳಕ್ಕೆ ಭೇಟಿ ನೀಡಿದವರ ಸಂಖ್ಯೆ ಕೇವಲ ಶೇ.40ರಷ್ಟು ಮಾತ್ರ ಎಂದು ಪ್ರವಾಸ ಸಂಯೋಜಕರ ಸಂಘದ ಅಧ್ಯಕ್ಷ ಅಬ್ರಹಾಂ ಜಾರ್ಜ್ ತಿಳಿಸಿದ್ದು, ಕೇಂದ್ರ ಸರಕಾರದ ನೋಟು ಅಮಾನ್ಯ ನಿರ್ಧಾರದ ಪರಿಣಾಮ ಇದು ಎಂದು ದೂರಿದ್ದಾರೆ.
ಪ್ರವಾಸಕ್ಕೆ ಅತ್ಯಂತ ಪ್ರಶಸ್ತವಾಗಿರುವ ಈ ಅವಧಿಯಲ್ಲೇ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿರುವುದರಿಂದ ಹೋಟೆಲ್‌ಗಳು, ಹೌಸ್‌ಬೋಟ್ ಮಾಲಕರು, ಪ್ರವಾಸ ಸಂಯೋಜಕರು ಮುಂತಾದ ಸಹ ಕ್ಷೇತ್ರಗಳ ಉದ್ಯಮಕ್ಕೂ ಬಿಸಿ ತಟ್ಟಿದೆ. ಅಳಪುಝ ಮತ್ತು ಕುಮಾರಕೋಮ್ ನಗರಗಳಲ್ಲಿ ಹೌಸ್‌ಬೋಟ್‌ಗಳಿಗೆ ಪ್ರವಾಸಿಗರ ಬೇಡಿಕೆ ಕಡಿಮೆಯಾಗಿರುವ ಕಾರಣ ಅದನ್ನೇ ನಂಬಿಕೊಂಡಿರುವ ಸುಮಾರು 900 ಬೋಟ್ ಮಾಲಕರು ಕಂಗಾಲಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ವರ್ಷಾಂತ್ಯದ ಈ ದಿನಗಳಲ್ಲಿ ಗೋವಾ ಪ್ರವಾಸಿಗರಿಂದ ತುಂಬಿ ತುಳುಕುತ್ತಿರುವುದು ಸಾಮಾನ್ಯ ನೋಟವಾಗಿತ್ತು. ಆದರೆ ಈ ವರ್ಷ ಇಲ್ಲಿ ಕೂಡಾ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಭಾರತದ ಎಟಿಎಂ ಎದುರು ಹಣಕ್ಕಾಗಿ ದಿನಗಟ್ಟಲೆ ಕ್ಯೂ ನಿಲ್ಲಲು ಬಯಸದ ವಿದೇಶಿ ಪ್ರವಾಸಿಗರು ಈ ಬಾರಿ ಗೋವಾದಿಂದ ವಿಮುಖರಾಗಿದ್ದಾರೆ. ಪ್ರವಾಸೋದ್ಯಮವನ್ನೇ ಜೀವನಾಧಾರವಾಗಿ ನಂಬಿಕೊಂಡಿರುವ ಸುಮಾರು 50 ಮಿಲಿಯನ್ ಜನರ ಬದುಕು ಇದೀಗ ನೋಟು ಅಮಾನ್ಯ ನಿರ್ಧಾರದ ಪರಿಣಾಮದಿಂದ ದುಸ್ತರವಾಗಿದೆ ಎಂದು ‘ಇಂಡಿ ಾ ಸ್ಪೆಂಡ್’ ಸಂಸ್ಥೆ ವರದಿ ಮಾಡಿದೆ.
ಕೈಮಗ್ಗ ಕಾರ್ಮಿಕರ ಪ್ರತಿಭಟನೆ: ನೋಟು ಅಮಾನ್ಯ ನಿರ್ಧಾರವನ್ನು ವಿರೋಧಿಸಿ ತಮಿಳುನಾಡಿನಲ್ಲಿ ಸಿಐಟಿಯು ವಿದ್ಯುತ್‌ಚಾಲಿತ ಕೈಮಗ್ಗ ಕಾರ್ಮಿಕರ ಯೂನಿಯನ್ ಆಶ್ರಯದಲ್ಲಿ ಪ್ರತಿಭಟನೆ ನಡೆಯಿತು. ಕೇಂದ್ರ ಸರಕಾರದ ನಿರ್ಧಾರದಿಂದ ರಾಜ್ಯದಲ್ಲಿ ವಿದ್ಯುತ್‌ಚಾಲಿತ ಕೈಮಗ್ಗ ಉದ್ದಿಮೆ ಬಹುತೇಕ ಸ್ಥಗಿತಗೊಂಡು ಹಲವಾರು ಕಾರ್ಮಿಕರು ನಿರುದ್ಯೋಗಿಗಳಾಗಿದ್ದಾರೆ. ಇವರಿಗೆ ಕೇಂದ್ರ ಸರಕಾರ ಪರಿಹಾರ ನೀಡಬೇಕೆಂದು ಆಗ್ರಹಿಸಿ ಸಿಐಟಿಯು ನೇ ೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಪಳ್ಳಿಪಾಲಯಂ ಮತ್ತು ಸುತ್ತುಮುತ್ತಲಿನ ಪ್ರದೇಶದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಮಂದಿ ವಿದ್ಯುತ್‌ಚಾಲಿತ ಕೈಮಗ್ಗ ಉದ್ದಿಮೆಯನ್ನೇ ನಂಬಿಕೊಂಡಿದ್ದಾರೆ. ನೋಟು ಅಮಾನ್ಯದ ಬಳಿಕ ಈ ಕಾರ್ಮಿಕರು ತಮ್ಮ ಜೀವನನಿರ್ವಹಣೆಗೆ ಅಗತ್ಯವಿರುವ ಹಣವನ್ನು ಲೇವಾದೇವಿದಾರರಿಂದ ಪಡೆಯುತ್ತಿದ್ದು ಅವರು ಕಾರ್ಮಿಕರ ಅಸಹಾಯಕ ಪರಿಸ್ಥಿತಿಯ ಲಾಭ ಪಡೆದುಕೊ್ಳುತ್ತಿದ್ದಾರೆ ಎಂದು ಸಿಐಟಿಯು ದೂರಿದೆ.
ಹಣಕಾಸು ಸಂಸ್ಥೆಗಳು ಸಮಸ್ಯೆಯಲ್ಲಿ: ಸಣ್ಣ ಹಣಕಾಸು ಸಂಸ್ಥೆಗಳಿಗೆ ನೋಟು ಅಮಾನ್ಯದ ಬಿಸಿ ಮಾರಣಾಂತಿಕ ಹೊಡೆತ ನೀಡಿದೆ ಎಂದು ‘ದಿ ಹಿಂದೂ’ ವರದಿ ಮಾಡಿದೆ. ಕರ್ನಾಟಕ ಧಾರವಾಡ ಜಿಲ್ಲೆಯಲ್ಲಿ 2.42 ಲಕ್ಷ ಗ್ರಾಹಕರು 375 ಕೋಟಿ ರೂ.ನಷ್ಟು ಸಾಲ ಪಡೆದಿದ್ದಾರೆ. ಇದೀಗ ನೋಟು ಅಮಾನ್ಯಗೊಂಡ ಬಳಿಕ ಗ್ರಾಹಕರು ತಮ್ಮಲ್ಲಿದ್ದ ಹಳೆಯ 500 ರೂ. ಮತ್ತು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕಿನಲ್ಲಿ ಠೇವಣಿ ಇರಿಸಿದ್ದಾರೆ. ಆದರೆ ತಮಗೆ ಬೇಕಾದಂತೆ ಹಿಂಪಡೆಯಲು ಸಾಧ್ಯವಾಗದ ಕಾರಣ ಹಣಕಾಸು ಸಂಸ್ಥೆಯ ವಹಿವಾಟು ಬಹುತೇಕ ಸ್ಥಗಿತಗೊಂಡಿದೆ ಎಂದು ವರದಿ ತಿಳಿಸಿದೆ. ಅತ್ಯಂತ ಅಧಿಕ ಬಳಕೆಯಾಗುವ ಗ್ರಾಹಕ ಉತ್ಪನ್ನಗಳ ಉದ್ಯಮ ಕೂಡಾ ತತ್ತರಿಸಿ ಹೋಗಿದೆ. ನ.8ರ ಬಳಿಕ ಈ ಉದ್ಯಮದ ವ್ಯವಹಾರದಲ್ಲಿ 3.8 ಸಾವಿರ ಕೋಟಿ ರೂ. ಕುಸಿತವಾಗಿದೆ . ಗ್ರಾಹಕರು ಹಣ ಖರ್ಚು ಮಾಡುವ ಪ್ರಕ್ರಿಯೆ ನಿಯಂತ್ರಣಗೊಂಡಿರುವ ಕಾರಣ ರಖಂ ವ್ಯಾಪಾರ ಕೂಡಾ ಕುಸಿದಿದೆ ಎಂದು ‘ಟೆಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.
ಜಾರ್ಖಂಡ್‌ನ ಲತೆಹಾರ್ ಜಿಲ್ಲೆಯ ನಿವೃತ್ತ ಸರಕಾರಿ ಉದ್ಯೋಗಿ ಜುಯೆಲ್ ಕುಜೂರ್ ಎಂಬವರ ಪತ್ನಿ ಮೃತಪಟ್ಟ ಹಿನ್ನೆಲೆಯಲ್ಲಿ ಎಸ್‌ಬಿಐ ಬ್ಯಾಂಕ್‌ನಿಂದ 10 ಸಾವಿರ ರೂ. ಪಡೆಯಲು ಮುಂದಾಗಿದ್ದರು. ಆದರೆ ಹಣವಿಲ್ಲದ ಕಾರಣ 4 ಸಾವಿರ ಮಾತ್ರ ನೀಡುವುದಾಗಿ ಬ್ಯಾಂಕ್‌ನವರು ತಿಳಿಸಿದ್ದು ಇದರಿಂದ ಪತ್ನಿಯ ಅಂತ್ಯಕ್ರಿಯೆಗೆ ತೊಂದರೆಯಾ ಯಿತು ಎಂದು ಕುಜೂರ್ ಹೇಳಿದ್ದಾರೆ.







