ಯುವ ನಿರ್ಮಾಣಕ್ಕಾಗಿ ವಿವೇಕಮಾಲೆ ಅಭಿಯಾನ

ಮುಂಡಗೋಡ, ಡಿ.25 : ವಿವೇಕಮಾಲೆ ಅಭಿಯಾನವನ್ನು ಡಿ. 25 ರಿಂದ ರಾಕಡೇ ಯಿಂದ ಜ.12 ರವರೆಗೆ ವಿವೇಕಾನಂದರ ಜಯಂತಿಯವರೆಗೂ 18 ದಿನಗಳ ಕಾಲ ಕರ್ನಾಟಕದ್ಯಾಂತ ಆರಂಭಿಸಿದೆ ಎಂದು ಯುವ ಬ್ರಿಗೇಡ ಉತ್ತರ ಕನ್ನಡ ಜಿಲ್ಲಾ ಸಂಚಾಲಕ ಶ್ರೀಧರ ಉಪ್ಪಾರ ಹೇಳಿದ್ದಾರೆ.
ದೇಶದ ನಿರ್ಮಾಣಕ್ಕೆ ಸ್ವಾಮಿ ವಿವೇಕಾನಂದ ಕೊಟ್ಟ ಮಾರ್ಗದಲ್ಲಿಯೇ ಚಕ್ರವರ್ತಿ ಸೂಲಿಬೆಲೆಯವರು ಯುವಕರ ಪಡೆ ಕಟ್ಟುತ್ತಿದ್ದಾರೆ. ಸ್ವಾಮಿ ವಿವೇಕಾನಂದರ ಕನಸಾದ ಯುವಕರು ಸದೃಡ ಮನಸ್ಸು ಮಿಂಚಿನಂತ ಬುದ್ದಿ ಬಲಿಷ್ಠ ದೇಹ ಹೊಂದಿದಲ್ಲಿ ಮಾತ್ರ ದೇಶದ ನಿರ್ಮಾಣ ಹಾಗೂ ಶ್ರೇಷ್ಠ ಕಾರ್ಯವನ್ನು ಸಾಧಿಸಲು ಸಾಧ್ಯ ಎಂಬುದನ್ನು ಸೂಲಿಬೆಲೆಯವರು ವಿವೇಕಾನಂದರ ಕನಸನ್ನು ನನಸಾಗಿಸಲು ಅವಿರತ ಪ್ರಯತ್ನ ದಲ್ಲಿ ತೊಡಗಿದ್ದಾರೆ. ಯುವಕರ ನಿರ್ಮಾಣಕ್ಕಾಗಿಯೆ ಯುವ ಬ್ರಿಗೇಡ ಮೊದಲನೆ ಭಾಗವಾದ ವಿವೇಕಮಾಲೆ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ವಿವೇಕಮಾಲೆ ಧರಿಸುವವರು ಮೊದಲು ಯುವ ಬ್ರಿಗೇಡ ತಂಡದ ಜಿಲ್ಲಾ ಸಂಚಾಲಕರ ಬಳಿ ಹೆಸರು ಮತ್ತು ವಾಟ್ಸಪ ನಂಬರನ್ನು ನಮೂದಿಸಬೇಕು. ನಂತರ ಅವರ ಬಳಿ ವಿವೇಕಾನಂದರ ಲಾಕೇಟನ್ನು ಪಡೆದುಕೊಂಡ ಮೇಲೆ ಜಿಲ್ಲಾ ಗ್ರುಪಿನಲ್ಲಿ ನಿಮ್ಮನ್ನು ಸೇರಿಸಿಕೊಳ್ಳಲಾಗುತ್ತೆದೆ. ಡಿ. 25 ದಿನದಂದು ಶ್ರದ್ದಾ ಕೇಂದ್ರದಲ್ಲಿ ನದಿ ತೀರದಲ್ಲಿ ಅಥವಾ ದೇವಸ್ಥಾನದಲ್ಲಿ ತುಳಸಿ ರುದ್ರಾಕ್ಷಿ ಅಥವಾ ಸ್ಪಟಿಕ ಸರಗಳಲ್ಲಿ ವಿವೇಕಾನಂದರ ಲಾಕೇಟ ಹಾಕಿಕೊಂಡು ಮಾಲೆಯನ್ನು ಕೊರಳಲ್ಲಿ ಧರಿಸಬೇಕು.
18 ದಿನಗಳ ಕಾಲ ಮಾಡಬೇಕಾದ ವಿವೇಕಮಾಲೆಯ ಅಭಿಯಾನದ ಈ ವೃತವನ್ನು ಪೂಜೆಯ ವಿಧಾನ ಹಾಗು ವ್ಯಾಯಾಮವನ್ನು ಯುವಾ ಬ್ರಿಗೇಡ ತಂಡ ಭಾವಚಿತ್ರ ಸಮೇತ ತಮ್ಮ ತಂಡಕ್ಕೆ ರವಾನೆ ಮಾಡುತ್ತದೆ. ನಂತರ ಜ.12 ರಂದು ಹತ್ತಿರ ವಿರುವ ವಿವಿಧ ಶಾಲಾ ಕಾಲೇಜುಗಳಿಗೆ ತೆರಳಿ ಸ್ವಾಮಿ ವಿವೇಕಾನಂದರ ಬಗ್ಗೆ ಅರಿವು ಮೂಡಿಸಬೇಕು.
ಯುವ ಬ್ರಿಗೇಡ ಮಾರ್ಗದರ್ಶಕರಾದ ಚಕ್ರವರ್ತಿ ಸೂಲಿಬೆಲೆಯವರ ನೇತ್ರತ್ವದಲ್ಲಿ ಸಾಮೂಹಿಕವಾಗಿ ಕನ್ಯಾಕುಮಾರಿಗೆ ತೆರಳಿ ಸಮುದ್ರದಲ್ಲಿರುವ ವಿವೇಕಾನಂದರ ಬಂಡೆಯಲ್ಲಿನ ಮಂದಿರದಲ್ಲಿ ಮಾಲೆಯನ್ನು ಜ.14-15 ರಂದು ವಿಸರ್ಜನೆ ಮಾಡಲಾಗುತ್ತದೆ. ವಿವೇಕಮಾಲೆಯ ಈ ವೃತ ಯುವಕರನ್ನು ಒಟ್ಟುಗೂಡಿಸುವ ಹಾಗು ಸದೃಡಗೊಳಿಸುವ ವೃತವಾಗಿದೆ. ಇಂತಹ ಅಭಿಯಾನ ಮಾಡುವುದರಿಂದ ದೇಶದ ಯುವ ಜನಾಂಗವನ್ನು ಬಲಿಷ್ಟಪಡಿಸಬಹುದು ಈಗಾಗಲೆ ಉತ್ತರ ಕನ್ನಡ ಜಿಲ್ಲೆಯಲ್ಲಿನ ತಾಲೂಕುಗಳಲ್ಲಿ ಅಭಿಯಾನವನ್ನು ಆರಂಭಿಸಲಾಗಿದೆ. ಸಂಪೂರ್ಣವಾಗಿ ಸಾರ್ವಜನಿಕರಿಂದ ಬೆಂಬಲ ದೊರೆತಿದೆ.ಈಗಾಗಲೆ ಈ ವೃತವನ್ನುಕರ್ನಾಟಕದ್ಯಾಂತ ಹಮ್ಮಿಕೊಳ್ಳಲಾಗಿದೆ ಎಂದು ಉಪ್ಪಾರ ಹೇಳಿದರು







