ಎಸ್ಕೆಎಸ್ಸೆಸೆಫ್ ಹಳೆಯಂಗಡಿ ಯೂನಿಟ್‌ನಿಂದ ವಾರ್ಷಿಕ ಮೌಲಿದ್ ಕಾರ್ಯಕ್ರಮ

ಮುಲ್ಕಿ, ಡಿ.25: ಎಸ್ಕೆಎಸ್ಸೆಸೆಫ್ ಹಳೆಯಂಗಡಿ ಯೂನಿಟ್‌ನ ವತಿಯಿಂದ ಮಿಲಾದುನ್ನಬೀ ಪ್ರಯುಕ್ತ ವಾರ್ಷಿಕ ಮೌಲಿದ್ ಕಾರ್ಯಕ್ರಮವು ಬೊಳ್ಳೂರು ಶಂಸುಲ್ ಉಲಮಾ ಮೆಮೊರಿಯಲ್ ಸೆಂಟರ್‌ನಲ್ಲಿ ಜರಗಿತು.
ಕಾರ್ಯಕ್ರಮದ ನೇತೃತ್ವವನ್ನು ಎಸ್ಕೆಎಸ್ಸೆಸೆಫ್‌ನ ಗೌರವಾಧ್ಯಕ್ಷ ಶೈಖುನಾ ಬೊಳ್ಳೂರು ಉಸ್ತಾದ್ ಅಲ್‌ಹಾಜ್ ಅಝ್‌ಹರ್ ಫೈಝಿ ವಹಿಸಿದ್ದರು.
ಈ ಸಂದರ್ಭ ಎಸ್ಕೆಎಸ್ಸೆಸ್ಸೆಫ್ ಹಳೆಯಂಗಡಿ ಯೂನಿಟ್‌ನ ಉಪಾಧ್ಯಕ್ಷ ಬಿ.ಎಮ್. ಇಬ್ರಾಹೀಂ, ಕಾರ್ಯದರ್ಶಿ ಉಸ್ಮಾನ್ ಮೂಡುತೋಟ ಸಾಗ್, ಶಂಸುಲ್ ಉಲಮಾ ಮೆಮೊರಿಯಲ್ ಸೆಂಟರ್‌ನ ಅಧ್ಯಕ್ಷ ಬಿ.ಇ ಮಹಮ್ಮದ್, ಕಾರ್ಯದರ್ಶಿ ಹುಸೈನಬ್ಬ ಬೊಳ್ಳೂರು, ಬೊಳ್ಳೂರು ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಎ.ಕೆ. ಜಿಲಾನಿ, ಉಪಾಧ್ಯಕ್ಷ ಎಮ್. ಅಬ್ದುಲ್ ಖಾದರ್, ಕಾರ್ಯದರ್ಶಿ ಬಿ.ಎಮ್. ಸುಲೈಮಾನ್, ಮಾಜಿ ಕಾರ್ಯದರ್ಶಿ ಐ.ಎ.ಕೆ. ಹಾಜಿ ಮತ್ತಿತರರು ಉಪಸ್ಥಿತರಿದ್ದರು.
Next Story





