ಪಾಕಿಸ್ತಾನದಿಂದ ಸದ್ಭಾವನೆಯ ನಡೆ : 220 ಭಾರತೀಯ ಬೆಸ್ತರ ಬಿಡುಗಡೆ

ಕರಾಚಿ,ಡಿ.25: ಗಡಿಯಾಚೆಗಿನ ಭಯೋತ್ಪಾದನೆ ಘಟನೆಗಳ ಹಿನ್ನೆಲೆಯಲ್ಲಿ ಇತ್ತೀಚೆಗೆ ಉಭಯದೇಶಗಳ ನಡುವಿನ ಬಾಂಧವ್ಯದಲ್ಲಿ ಬಿರುಕು ಮೂಡಿರುವ ನಡುವೆಯೇ ಸದ್ಭಾವನೆಯ ಕ್ರಮವಾಗಿ ಪಾಕಿಸ್ತಾನವು ರವಿವಾರ 220 ಮಂದಿ ಭಾರತೀಯ ಮೀನುಗಾರರನ್ನು ಬಿಡುಗಡೆಗೊಳಿಸಿದೆ.
ಮೀನುಗಾರಿಕೆಗಾಗಿ ಅಕ್ರಮವಾಗಿ ಪಾಕ್ ಜಲಸೀಮೆಯನ್ನು ಪ್ರವೇಶಿಸಿದ ಆರೋಪದಲ್ಲಿ ಇವರನ್ನು ಬಂಧಿಸಲಾಗಿತ್ತು. ಮಾಲಿರ್ ಜೈಲಿನಲ್ಲಿದ್ದ ಮೀನುಗಾರರು ಇಂದು ಬೆಳಗ್ಗೆ ಲಾಹೋರ್‌ಗೆ ರೈಲಿನಲ್ಲಿ ಪ್ರಯಾಣಿಸಿದರು. ಅವರನ್ನು ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದೆಂದು ಜೈಲಿನ ಅಧೀಕ್ಷಕ ಹಸ್ಸನ್ ಸೆಹ್ತೊ ತಿಳಿಸಿದ್ದಾರೆ.
Next Story





