ದುಬೈನ ಶೇ.98ರಷ್ಟು ನಿವಾಸಿಗಳಿಗೆ ಆರೋಗ್ಯ ವಿಮೆ
.jpg)
ದುಬೈ,ಡಿ.25: ದುಬೈನಲ್ಲಿ ನೆಲೆಸಿರುವ ಶೇ.98ರಷ್ಟು ಮಂದಿ, ಅಂದರೆ 40 ಲಕ್ಷಕ್ಕೂ ಅಧಿಕ ಮಂದಿ ಈಗ ಆರೋಗ್ಯವಿಮೆಯನ್ನು ಹೊಂದಿದ್ದಾರೆಂದು ದುಬೈ ಆರೋಗ್ಯ ಪ್ರಾಧಿಕಾರ ರವಿವಾರ ಪ್ರಕಟಿಸಿದೆ.
ಈ ಮಹತ್ಸಾಧನೆಯು ದುಬೈನ ಹಲವಾರು ದಾಖಲೆೆಗಳ ಪಟ್ಟಿಗೆ ಇನ್ನೊಂದು ಸೇರ್ಪಡೆಯಾಗಿದೆಯೆಂದು ದುಬೈ ಆರೋಗ್ಯ ಮಂಡಳಿಯ ಅಧ್ಯಕ್ಷ ಹುಮೈದ್ ಅಲ್ ಖತಾಮಿ ತಿಳಿಸಿದ್ದಾರೆ.
ಆರೋಗ್ಯ ವಿಮೆ ಪಡೆದಿರುವವರ ಸಂಖ್ಯೆ 40 ಲಕ್ಷವನ್ನು ದಾಟಿರುವುದು ಆರೋಗ್ಯ ಹಾಗೂ ಸುರಕ್ಷತೆಯನ್ನು ಕಾಪಾಡುವ ಬಗ್ಗೆ ದುಬೈ ನಾಗರಿಕರಲ್ಲಿ ಜಾಗೃತಿ ಉಂಟಾಗಿರುವುದನ್ನು ತೋರಿಸುತ್ತದೆ ಎಂದರು. ಆರೋಗ್ಯ ಸೇವೆಗಳು, ಕಾರ್ಯಕ್ರಮಗಳು ಹಾಗೂ ಆರೋಗ್ಯ ಪ್ರಾಧಿಕಾರದ ಮೇಲೆ ಜನತೆಗಿರುವ ವಿಶ್ವಾಸವನ್ನು ಕೂಡಾ ಇದು ದೃಢಪಡಿಸುತ್ತದೆಯೆಂದವರು ಹೇಳಿದ್ದಾರೆ.
Next Story





