ಅಂಕೋಲಾ: 44 ಸಾವಿರ ರೂ.ಮೌಲ್ಯದ ಅಕ್ರಮ ಮದ್ಯ ವಶ

ಅಂಕೋಲಾ, ಡಿ. 25: ತಾಲೂಕಿನ ಜಮಗೋಡ ರೆಲ್ವೆ ನಿಲ್ದಾಣದ ಹಿಂಭಾಗದಲ್ಲಿ ಅಬಕಾರಿ ಇಲಾಖೆಯ ಸಿಬ್ಬಂದಿ 44,802 ಸಾವಿರ ರೂ. ಮೌಲ್ಯದ ವಿವಿಧ ಮಾದರಿಯ ಅಕ್ರಮ ಮದ್ಯವನ್ನು ವಶಪಡಿಸಿಕೊಂಡ ಘಟನೆ ರವಿವಾರ ಬೆಳಗಿನ ಜಾವ 3:40ಕ್ಕೆ ಸುಮಾರಿಗೆ ನಡೆದಿದೆ.
6 ಮೂಟೆಗಳಲ್ಲಿ ಗೋವಾ ಪೆೆನ್ನಿ ಸೇರಿದಂತೆ ಒಟ್ಟು 224 ಲೀಟರ್ ಸಾರಾಯಿ ವಶಪಡಿಸಿಕೊಂಡಿದ್ದಾರೆ. ಅಬಕಾರಿ ಉಪ ಆಯುಕ್ತ ನಾಗೇಶ್ ಅವರ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕ ಎನ್.ಯು.ಶಹಾ ನೇತೃತ್ವದಲ್ಲಿ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗಿದ್ದು, ತಂಡದಲ್ಲಿ ಸಿಬ್ಬಂದಿ ಸುರೇಶ್ ಪಿ. ಹಾರೊಗೊಪ್ಪ, ರಂಜನಾ ಡಿ. ನಾಯ್ಕ, ರಾಮಚಂದ್ರ ನಾಯ್ಕ, ವಿಠ್ಠಲ ನಾಯ್ಕ, ವೆಂಕಟೇಶ ನಾಯ್ಕ ಹಾಗೂ ಚಾಲಕ ನಾಗರಾಜ ನಾಯ್ಕ ಪಾಲ್ಗೊಂಡಿದ್ದರು.
Next Story





