Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ಓದುವಾಗ ಇರಲಿ ಎಚ್ಚರ

ಓದುವಾಗ ಇರಲಿ ಎಚ್ಚರ

ಯೋಗೇಶ್  ಮಾಸ್ಟರ್ಯೋಗೇಶ್ ಮಾಸ್ಟರ್25 Dec 2016 11:10 PM IST
share
ಓದುವಾಗ ಇರಲಿ  ಎಚ್ಚರ

¨ವಾರ್ತಾಪತ್ರಿಕೆಗಳನ್ನು ಮಕ್ಕಳಿಗೆ ಓದಿಸುವ ಅಭ್ಯಾಸ ಮಾಡಿಸುವಾಗ ಕಾಲಂಗಳ ನಡುವೆ ಪೆನ್ಸಿಲ್‌ನಿಂದ ತೆಳುವಾಗಿ ಗೆರೆಗಳನ್ನು ಹಾಕಬೇಕು. ಅದನ್ನು ಅನುಸರಿಸಿಕೊಂಡು ಓದಲು ಮಕ್ಕಳಿಗೆ ಹೇಳಿಕೊಡಬೇಕು.

ವಾರ್ತಾಪತ್ರಿಕೆ ಮತ್ತು ವಾರಪತ್ರಿಕೆ ಹಾಗೂ ಪತ್ರಿಕೆಗಳಲ್ಲಿರುವ ಮಕ್ಕಳ ವಿಶೇಷ ಪುರವಣಿ ಇತ್ಯಾದಿಗಳನ್ನು ಮಕ್ಕಳಿಗೆ ಓದಿಸುವ ಮೂಲಕ ಓದುವ ಅಭಿರುಚಿಯನ್ನು ಬೆಳೆಸುವುದರ ಜೊತೆಗೆ ಓದುವಿಕೆಯ ತಂತ್ರವನ್ನು ಉತ್ತಮಗೊಳಿಸುವ ಮತ್ತು ವೇಗಗೊಳಿಸುವ ವಿಧಾನವನ್ನು ಕೂಡ ಅಳವಡಿಸುತ್ತಿದ್ದೇವೆಂದೇ ಅರ್ಥ.

ಅವರೊಬ್ಬ ಕರ್ನಾಟಕದ ಧ್ವನಿ ಸುರುಳಿಯ ಕಂಪೆನಿಯ ಮಾಲಕ. ಬಹಳ ಯಶಸ್ವಿಯಾದ ಉದ್ಯಮಿ. ಅವರು ಎಷ್ಟು ಹೊತ್ತಾದರೂ ಕೂಡ ತಮ್ಮ ಕೆಲಸದಲ್ಲಿ ಲೀಲಾಜಾಲವಾಗಿ ಶ್ರಮವಿಲ್ಲದೇ ತೊಡಗಿಸಿಕೊಳ್ಳಬಲ್ಲರು. ಆದರೆ ಅವರನ್ನು ಆಯಾಸಗೊಳಿಸಲೇಬೇಕೆಂದರೆ ಅವರಿಗೆ ಓದಿಸಲು ತೊಡಗಿದರೆ ಸಾಕು. ಸುಸ್ತಾಗಿಬಿಡುತ್ತಾರೆ. ಯಾಕೆ ಹೀಗೆ ಎಂದರೆ ‘‘ಅದೇನೋ ಮೊಲಿನಿಂದಲೂ ರೂಢಿ ಇಲ್ಲ’’ ಎನ್ನುತ್ತಾರೆ.

ಮತ್ತೆ ಕೆಲವರು ಪುಸ್ತಕ ಹಿಡಿದರೆ ಸಾಕು ಮೆಲ್ಲನೆ ನಿದ್ರೆಗೇ ಜಾರಿಬಿಡುತ್ತಾರೆ.

ಮತ್ತೂ ಕೆಲವರು ವಾರ್ತಾಪತ್ರಿಕೆಗಳನ್ನು ಗಂಟೆಗಟ್ಟಳೆ ಓದುತ್ತಾರೆ. ಪುಸ್ತಕಗಳು ಕೈಗೆಟಕಿದರೆ ಮಂಕಾಗುತ್ತಾರೆ. ಅದರಲ್ಲಿರುವುದು ಅವರಿಗೆ ಗ್ರಹಿಸಲು ಕಷ್ಟವಾಗುವುದಿರಲಿ, ಓದಲೂ ಆಗುವುದಿಲ್ಲ.

ಮತ್ತೆ ಕೆಲವರು ಪುಸ್ತಕ ಕೈಗೆ ಎಟಕುವವರೆಗೂ ಅದನ್ನು ಓದುವ ಇರಾದೆ ಹೊಂದಿರುತ್ತಾರೆ. ಅದು ಕೈಗೆ ಎಟಕಿದ ತಕ್ಷಣವೇ ಮನಸ್ಸು ಅಸ್ತವ್ಯಸ್ತವಾಗುತ್ತದೆ. ಪದಗಳ ಮೇಲೆ ಕಣ್ಣಾಡಿಸುವಾಗ ಮನಸ್ಸು ಬೇರೇನೋ ಯೋಚಿಸಲು ತೊಡಗುತ್ತದೆ.

ಕಣ್ಣುಗಳು ಪದಗಳ ಮೇಲೆ ಚಲಿಸುತ್ತಿರುತ್ತದೆ. ಆದರೆ ಏನನ್ನೂ ಮನಸ್ಸು ಗ್ರಹಿಸಿರುವುದೇ ಇಲ್ಲ. ಒಂದಷ್ಟು ಕಣ್ಣಾಡಿಸುವಿಕೆಯ ನಂತರ ಅವರಿಗೆ ಅರಿವಾಗುತ್ತದೆ ತಾವು ಏನನ್ನೂ ಓದಿಯೇ ಇಲ್ಲ ಮತ್ತು ಗ್ರಹಿಸಿಯೇ ಇಲ್ಲ ಎಂದು. ಸರಿ, ಈಗ ಮತ್ತೆ ಮೊದಲಿನಿಂದ ಓದೋಣವೆಂದು ನಿರ್ಧರಿಸಿಕೊಂಡು ವಾಕ್ಯಾರಂಭದ ಕಡೆಗೆ ಕಣ್ಣು ಹಾಯುತ್ತದೆ.

ಮತ್ತದೇ ರೀತಿಯಲ್ಲಿ ಮನಸ್ಸಿನ ಗಮನ ಎತ್ತೆತ್ತಲೋ ಹೋಗಿ ಅಸ್ತವ್ಯಸ್ತವಾಗುತ್ತದೆ. ಹಾಗಾಗಿಯೇ ಪುಸ್ತಕ ಪ್ರೀತಿಯಿಂದ ತರುವ ಪುಸ್ತಕಗಳು ಕಪಾಟುಗಳನ್ನು ತುಂಬುತ್ತವೆ. ಓದುವ ಮನಸ್ಥಿತಿ ಪಕ್ವವಿಲ್ಲದ ಕಾರಣ ಎಷ್ಟೋ ಜನ ಆ ಪುಸ್ತಕಗಳನ್ನು ತೆಗೆದುಕೂಡ ನೋಡಿರುವುದಿಲ್ಲ.

ದೊಡ್ಡ ತಮಾಷೆ ಎಂದರೆ ಒಂದು ಪುಸ್ತಕವನ್ನು ತಂದಾದ ಮೇಲೆ ಅದನ್ನು ಪದೇ ಪದೇ ನೋಡುತ್ತಾ ಅಥವಾ ಕಣ್ಣಿಗೆ ಬೀಳುವ ಸ್ಥಳದಲ್ಲಿರಿಸಿಕೊಂಡು ಓದಿದ್ದೇವೆ ಎಂದೋ ಅಥವಾ ಅದರ ವಿಷಯ ತಿಳಿದಿದೆ ಎಂದೋ ಭ್ರಮಿಸಲು ತೊಡಗುತ್ತಾರೆ. ಇನ್ನೂ ಕೆಲವೊಮ್ಮೆ ಆ ಪುಸ್ತಕದ ಕುರಿತು ಇತರರು ಆಡುವ ಮಾತುಗಳನ್ನು ಕೇಳುತ್ತಾ, ವರದಿಗಳನ್ನು ಓದುತ್ತಾ ಆ ಪುಸ್ತಕವನ್ನು ತಿಳಿದಿರುವಂತೆ ಭಾವಿಸಿಬಿಟ್ಟಿರುತ್ತಾರೆ.

ಅಷ್ಟೇ ಅಲ್ಲದೇ ಆ ಪುಸ್ತಕದ ಬಗ್ಗೆ ಬೇರೆಯವರ ಜೊತೆಗೆ ತಿಳಿದಿರುವಂತೆ ಮಾತಾಡುವಷ್ಟು ತಿಳುವಳಿಕೆಯನ್ನೂ ಸಂಪಾದಿಸಿಬಿಟ್ಟಿರುತ್ತಾರೆ. ಮತ್ತೆ ಅದನ್ನು ಓದಲು ಹೋದರೆ ಈಗಾಗಲೇ ತಿಳಿದಿರುವ ಪುಸ್ತಕವನ್ನು ಮತ್ತೇಕೆ ಓದುವುದು ಎಂಬ ಭಾವ ಮೂಡಿ ಕೊನೆಗೂ ಅದರಲ್ಲಿರುವಂತಹ ವಿಷಯವನ್ನು ನೇರವಾಗಿ ಗ್ರಹಿಸಲು ಹೋಗುವುದೇ ಇಲ್ಲ.

ಆ ಪುಸ್ತಕದ ಕುರಿತು ಅವರ ಓದುವಿಕೆ ಒಂದು ಕೃತಕವಾದ ಗ್ರಹಿಸುವಿಕೆಯ ಭಾಗವಾಗಿಹೋಗುತ್ತದೆ. ಅಧ್ಯಯನ ಮತ್ತು ಆಳವಾಗಿ ಗ್ರಹಿಸುವ ಲಕ್ಷಣ ಇದಲ್ಲ. ಇವಕ್ಕೆಲ್ಲಾ ಮುಖ್ಯ ಕಾರಣ ಬಾಲ್ಯದಲ್ಲಿ ಓದಿಸುವಿಕೆಯನ್ನು ಸರಿಯಾಗಿ ರೂಢಿಸದಿರುವುದು. ಪ್ರತಿಯೊಂದೂ ವಿಷಯವೂ ರೂಢಿಯಿಂದಲೇ ಅಂತರ್ಗತವಾಗಿರುವುದೇ ಹೊರತು ಬೇರೇನೂ ಅಲ್ಲ.

ಸಮಯದ ಅಭಾವವನ್ನು ಮುಂದಿಡುವವರು ವೇಗವಾಗಿ ಓದುವ ಕ್ರಮವನ್ನು ಮತ್ತು ಅದರ ಸ್ವರೂಪವನ್ನು ತಿಳಿದರೆ ಹೆಚ್ಚು ಉಪಯೋಗ. ಮಕ್ಕಳಿಗೆ ಓದಿಸುವಾಗ ಕೆಲವು ಅಂಶಗಳನ್ನು ಪೋಷಕರು ಮತ್ತು ಶಿಕ್ಷಕರು ಗಮನದಲ್ಲಿಡಬೇಕು.

1.ಅಧ್ಯಯನಕ್ಕೆಂದು ಆರಿಸಿರುವ ಗದ್ಯವಾದಲಿ ಅಥವಾ ಪದ್ಯವಾಗಲಿ ಸಾಮಾನ್ಯವಾಗಿ ಓದುವಾಗ ನಿಮಿಷಕ್ಕೆ 80 ರಿಂದ 100 ಪದಗಳನ್ನು ಓದಲಾಗುವುದು.

ಕೆಲವೊಮ್ಮೆ ಇನ್ನೂ ಕಡಿಮೆಯೂ ಆಗಬಹುದು. ಆದ್ದರಿಂದ ಮಕ್ಕಳಿಗೆ ಎಷ್ಟು ಓದಲು ನೀಡುತ್ತೇವೆಂದು ಗಮನಿಸುವಾಗ ಪಠ್ಯವನ್ನೂ ಮತ್ತು ಸಮಯವನ್ನೂ ಗಣನೆಗೆ ತೆಗೆದುಕೊಂಡೇ ಇಷ್ಟು ಓದೆಂದು ನಿರ್ದಿಷ್ಟಗೊಳಿಸಬೇಕು. ಅನಗತ್ಯವಾಗಿ ಹೆಚ್ಚಿಗೆ ಹೇರಬಾರದು.

2.ಕತೆ, ಕಾದಂಬರಿ ಅಥವಾ ಲಘು ಲೇಖನಗಳಂತಹ, ತಮಗೆ ತಾವೇ ಓದಬೇಕೆಂದು ಆಯ್ದುಕೊಳ್ಳುವ ಸಾಹಿತ್ಯವಾದಲ್ಲಿ ಹೈಸ್ಕೂಲು ಮಕ್ಕಳಿಗೆ ಓದುವ ವೇಗ ನಿಮಿಷಕ್ಕೆ ನೂರರಿಂದ ಇನ್ನೂರೈವತ್ತು ಪದಗಳಾಗುತ್ತವೆ.

ಇನ್ನು ಮಾಧ್ಯಮಿಕ ಶಾಲೆಯ ಮಕ್ಕಳಾದರೆ ಸರಿ ಸುಮಾರು ನೂರಕ್ಕೆ ಇಳಿಯುತ್ತದೆ. ಪ್ರಾಥಮಿಕ ಶಾಲೆಯ ಮಕ್ಕಳಾದರೆ ವುೂವತ್ತರಿಂದ ಐವತ್ತಿಗೆ ಇಳಿಯುತ್ತದೆ.

3.ಸೃಜನಾತ್ಮಕ ಸಾಹಿತ್ಯವಾಗಿದ್ದು ಮಕ್ಕಳಿಗೆ ಪದೇ ಪದೇ ಕೇಳಿಸಿಯೋ ಓದಿಸಿಯೋ ಆಗಿರುವಂತಹದ್ದಾಗಿದ್ದರೆ 200 ರಿಂದ 300 ಪದಗಳನ್ನು ಮಕ್ಕಳು ನಿಮಿಷಕ್ಕೆ ಓದುತ್ತಾರೆ.

ಶಾಲೆಯ ಪಠ್ಯವನ್ನು ಚೆನ್ನಾಗಿ ಓದಿಸಬೇಕೆಂದು ಬಯಸಿದ್ದಲ್ಲಿ ಮಕ್ಕಳಿಗೆ ಇತರ ಸೃಜನಶೀಲ ಸಾಹಿತ್ಯಗಳನ್ನು ಓದಿಸುವ ಅಭ್ಯಾಸವನ್ನು ಮಾಡಿಸಿ. ಯಾವಾಗಲೋ ಓದಿದರೂ ಪರೀಕ್ಷೆಗೋಸ್ಕರ, ಅಂಕೆಗಳಿಗೋಸ್ಕರ ಎಂಬುದನ್ನು ಮೊದಲು ಬಿಡಬೇಕು.

4.ಪುಸ್ತಕದಲ್ಲಿ ಸಾಹಿತ್ಯದ ಜೊತೆಗೆ ಚಿತ್ರಗಳೂ ಇದ್ದಾಗ, ಉದಾಹರಣೆಗೆ ವಾರ್ತಾಪತ್ರಿಕೆಗಳು, ಅಮರ ಚಿತ್ರ ಕಥಾ ಪುಸ್ತಕಗಳಂತವು; ಬೆಳೆದ ಮಕ್ಕಳ ಓದುವ ವೇಗ ಇನ್ನಷ್ಟು ಹೆಚ್ಚಿರುತ್ತದೆ. ನಿಮಿಷಕ್ಕೆ 300 ರಿಂದ 500ರವರೆಗೂ ಹೋಗುತ್ತದೆ.

 5.ದೊಡ್ಡವರಿಗೇ ಆಗಲಿ ಮಕ್ಕಳಿಗೇ ಆಗಲಿ, ವಿಶ್ರಾಂತವಾದ ಮನಸ್ಥಿತಿ ಇರುವುದಾದರೆ ನಿಮಿಷಕ್ಕೆ 300 ರಿಂದ 800 ಪದಗಳವರೆಗೂ ಓದುವ ವೇಗ ಇರುತ್ತದೆ.

ಕಣ್ಣಾಡಿಸಿ ಹೆಕ್ಕು

ಇನ್ನು ನಿಮಿಷಕ್ಕೆ ಸುಮಾರು 800 ಪದಗಳಿಂದ 1,500 ಪದಗಳವರೆಗೂ ಓದಿಕೊಂಡು ಹೋಗುವುದೂ ಉಂಟು. ಅದಕ್ಕೆ ಕಣ್ಣಾಡಿಸುವುದು ಎನ್ನಬಹುದು. ಪರಿಚಿತವಾಗಿರುವಂತಹ ಪಠ್ಯದ ಮೇಲೆ ಪದಗಳನ್ನು ಅನುಸರಿಸುವುದಕ್ಕಿಂತ ಸಾಲುಸಾಲುಗಳ ಮೇಲೆ ಕಣ್ಣಾಡಿಸಿ ಪ್ರಧಾನವಾಗಿ ಕಾಣುವ ಪದಗಳ ಮತ್ತು ವಾಕ್ಯಗಳನ್ನು ಸ್ಮರಣೆಗೆ ತಂದುಕೊಂಡು ಗ್ರಹಿಸುವಂತಹ ಓದುವಿಕೆಯ ಕಲೆ.

ಇದನ್ನು ಇಂಗ್ಲಿಷ್‌ನಲ್ಲಿ ಸ್ಕಾನಿಂಗ್ ಆ್ಯಂಡ್ ಸ್ಕಿಮ್ಮಿಂಗ್ ಎನ್ನುತ್ತೇವೆ. ಇದಕ್ಕೆ ಪಠ್ಯದ ಬಗ್ಗೆ ಪೂರ್ವಜ್ಞಾನ ಇರಬೇಕಾಗುತ್ತದೆ. ಮೊದಲೇ ವಿಷಯದ ಅರಿವಿದ್ದು ಅದನ್ನು ಪ್ರಸ್ತುತ ಪಠ್ಯದಲ್ಲಿ ಏನನ್ನು ಹೇಳಿದ್ದಾರೆ ಎಂದು ಗ್ರಹಿಸಲು ಕಣ್ಣಾಡಿಸುತ್ತೇವೆ. ಕೆಲವೊಮ್ಮೆ ನಿಮಿಷಕ್ಕೆ 2,000 ಪದಗಳೂ ಕೂಡ ಹೋಗುವುದುಂಟು. ಕೆಲವೊಮ್ಮೆ ಜ್ಯುಡಿಶಿಯಸ್ ಸ್ಕಿಪ್ಪಿಂಗ್ ಮಾಡುತ್ತೇವೆ.

ಅಲ್ಲಲ್ಲಿ ನಮಗೇನೂ ಅಗತ್ಯವಿಲ್ಲ ಎನಿಸುವುದನ್ನು ಗ್ರಹಿಸುತ್ತಾ ಎಗರಿಸಿಕೊಂಡು ಹೋಗುವುದರಿಂದ ನಮಗೆ ಅನಗತ್ಯವಾಗಿ ಪಠ್ಯ ಎಲ್ಲವನ್ನೂ ಓದುವಷ್ಟಿರುವುದಿಲ್ಲ. ಇದರಿಂದ ಸಮಯ ಮತ್ತು ಶ್ರಮ ಎರಡೂ ಕೂಡ ಉಳಿತಾಯವಾಗುತ್ತದೆ.

ಕಣ್ಣಾಡಿಸುವಾಗ ಪಠ್ಯದಲ್ಲಿ ನಮಗೆ ಸದ್ಯಕ್ಕೆ ಅಗತ್ಯವಿರುವ ನಿರ್ದಿಷ್ಟ ಪದಗಳನ್ನು ಮತ್ತು ವಾಕ್ಯಗಳನ್ನು ಹೆಕ್ಕಿಕೊಳ್ಳುತ್ತಾ ಹೋಗುತ್ತೇವೆ. ಓದುವಿಕೆಯಲ್ಲಿ ಇದು ಒಂದು ಅಸಾಧಾರಣ ಕಲೆ ಮತ್ತು ಆವಶ್ಯಕವಿರು ತಂತ್ರವೂ ಕೂಡ.

ಎಂತಹ ಸಮಯದಲ್ಲಿ ಕಣ್ಣಾಡಿಸುವಿಕೆ ಮತ್ತು ಹೆಕ್ಕುವಿಕೆ ಬೇಕಾಗುತ್ತದೆ ಎಂಬುದನ್ನು ಮಕ್ಕಳಿಗೆ ನಾವು ಕಲಿಸಿಕೊಡಬೇಕಾಗುತ್ತದೆ.

1.ನಿರ್ದಿಷ್ಟವಾದ ವಿಷಯದಲ್ಲಿ ತಿಳಿದಿರುವ ಪದಗಳ ಆಧಾರದಲ್ಲಿ ಸಾಲುಗಳ ಮೇಲೆ ಕಣ್ಣಾಡಿಸಬೇಕು. ಆಗ ಬೇಕಾದ ವಿಷಯವು ಅಥವಾ ಪದಗಳ ಗುಚ್ಛ ಅಥವಾ ವಾಕ್ಯ ಕಾಣಿಸಿದಾಗ, ಅಲ್ಲಿಗೆ ಕ್ಣಾಡಿಸುವುದನ್ನು ನಿಲ್ಲಿಸಿ ಓದಬೇಕು.

2.ಕೆಲವೊಮ್ಮೆ ನಿರ್ದಿಷ್ಟವಾದ ಪದಗಳನ್ನು ಹುಡುಕುತ್ತಿರುತ್ತೇವೆ. ಅದಕ್ಕೆ ಸಂಬಂಸಿದ ಅಥವಾ ಅದರದೇ ವಿವರಣೆಗಾಗಿ ಹುಡುಕುವಾಗ ಕಣ್ಣಾಡಿಸುತಲಿದ್ದು ಆ ಪದ ಕಂಡ ಒಡನೆಯೇ ಅಲ್ಲಿ ಕಣ್ಣಾಡಿಸುವುದನ್ನು ನಿಲ್ಲಿಸಿ ಮನಕೊಟ್ಟು ಓದುತ್ತೇವೆ.

3.ಕಣ್ಣಾಡಿಸುವಾಗ ಸಾಮಾನ್ಯವಾಗಿ ಅಡ್ಡಗಲವೇ ಕಣ್ಣೋಡುತ್ತದೆ. ಹಾಗೆಯೇ ಆಗಲೂ ಕೂಡ ಗಮನ ಕೇಂದ್ರೀಕೃತವಾಗಿರಬೇಕು. ಗಮನವಿದ್ದು ನೋಡುವುದಾದನಂತರ ಸಾವಧಾನವಾಗಿ ಅವಲೋಕಿಸುವುದು.

4.ಯಾವ ಬಗೆಯ ಓದುವಿಕೆಯೇ ಆಗಲಿ, ಓದುವ ಉದ್ದೇಶ ಸ್ಪಷ್ಟವಾಗಿದ್ದರೆ ಮಾತ್ರ ಕಣ್ಣಾಡಿುವುಕೆಯು ಲಪ್ರದವಾಗುವುದು.

5.ಕೆಲವು ಲೇಖನಗಳನ್ನು ಪಠ್ಯಗಳಲ್ಲಿ ಕಣ್ಣಾಡಿಸುವಾಗ ಇಡೀ ಪಠ್ಯದ ಸಾರಾಂಶವನ್ನು ಗ್ರಹಿಸುವುದಾಗಿರುತ್ತದೆ. ಆದ್ದರಿಂದ ಇಡೀ ಪಠ್ಯವನ್ನು ಪದದಿಂದ ಪದಕ್ಕೆ ಓದುವಷ್ಟಿರುವುದಿಲ್ಲ.

ಆದರೂ ಪದದಿಂದ ಪದಕ್ಕೆ ಕಣ್ಣಾಡಿಸಿರುತ್ತದೆ. ನಿಜಕ್ಕೂ ಇದೊಂದು ಓದುವಿಕೆಯಲ್ಲಿ ಒಂದು ಉತ್ತಮವಾದ ಕಲೆ. ಇದನ್ನೂ ದೊಡ್ಡವರೂ ರೂಢಿಸಿಕೊಳ್ಳಬೇಕು. ಅಂತೆಯೇ ಮಕ್ಕಳಿಗೂ ಕಲಿಸಬೇಕು.

6.ನೆನಪಿಡಿ. ಗಮನವಿಟ್ಟು ಪದದಿಂದ ಪದಕ್ಕೆ ಓದಿರುವ ಗಾಢವಾದ ಅನುಭವವಿದ್ದರೆ ಮಾತ್ರ ಕಣ್ಣಾಡಿಸುವಿಕೆ ಮತ್ತು ಹೆಕ್ಕುವಿಕೆ ಸರಾಗವಾಗುತ್ತದೆ ಮತ್ತು ಈ ಬಗೆಯ ಓದುವಿಕೆಯ ವಿಧಾನ ಯಶಸ್ವಿಯಾಗುತ್ತದೆ.

ಓದಿನ ಗಾಢ ಅನುಭವವಿಲ್ಲದೇ ಇದ್ದರೆ ಇದು ಅಷ್ಟರಮಟ್ಟಿಗೆ ಯಶಸ್ವಿಯಾಗಲಾರದು. ಆದ್ದರಿಂದ ಓದುವಿಕೆಯ ಗಂಭೀರ ಕಲಿಕೆ ಅನಿವಾರ್ಯ.

ಓದುವಿಕೆಯ ತಪ್ಪುಗಳು

ಮಕ್ಕಳು ಓದುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಆಗ ಪ್ರಾರಂಭದಲ್ಲಿಯೇ ಅವುಗಳನ್ನು ಗುರುತಿಸಿ ಸರಿಪಡಿಸಬೇಕು. ಇಲ್ಲವಾದರೆ ಓದುವಿಕೆಯು ಆಯಾಸದ ಕೆಲಸವಾಗಿ ಮುಂದೆ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ.

1.ಓದಿಕೊಳ್ಳುವಾಗ ತುಟಿಯಲುಗಿಸುವುದು. ಜೋರಾಗಿ ವಾಚನ ಮಾಡುವಾಗ ತುಟಿಗಳನ್ನು ಅಲುಗಿಸುವ ಹಾಗೆ ತಮಗೆ ತಾವೇ ಓದುವಾಗಲೂ ಓದುವುದನ್ನು ಗೊಣಗಿಕೊಳ್ಳುತ್ತಲೋ ಅಥವಾ ಸದ್ದಾಗದಿದ್ದರೂ ತುಟಿಗಳನ್ನು ಪದಗಳನ್ನು ಓದುತ್ತಿರುವಂತೆಯೇ ಅಲುಗಿಸುತ್ತಾ ಓದುವುದು ಒಂದು ದೋಷ. ಇದು ಮಕ್ಕಳಲ್ಲಿ ತಲೆದೋರದಂತೆ ನೋಡಿಕೊಳ್ಳಬೇಕು.

2.ಓದುವಾಗ ಕಣ್ಣುಗಳು ವಾಕ್ಯಗಳ ಮೇಲೆ ಅಡ್ಡಗಲ ಹೋದಂತೆ ತಲೆಯನ್ನೂ ಅಡ್ಡಗಲ ಆಡಿಸುವುದು ಮ್ತೊಂದು ದೋಷ.

3.ಅನಗತ್ಯವಾಗಿ ಇತರರಿಗೆ ಕೇಳುವಂತೆ ಅಥವಾ ಕೇಳಿಸುವಂತೆ ಗಟ್ಟಿಯಾಗಿ ಓದುವುದು. ಇನ್ನೂ ಕೆಲವರು ಅಸ್ಪಷ್ಟವಾಗಿ ಕನವರಿಸುವಂತೆ, ಬೈದುಕೊಳ್ಳುತ್ತಾ ಗೊಣಗಿಕೊಳ್ಳುವಂತೆ ಸದ್ದು ಮಾಡುತ್ತಾರೆ. ಅದು ಪಕ್ಕದಲ್ಲಿರುವವರಿಗೂ ಹಿಂಸೆ, ಜೊತೆಗೆ ಓದುವಿಕೆಯ ಕೆಟ್ಟ ಪದ್ಧತಿ.

4.ಗಂಟಲಲ್ಲಿ ಸದ್ದು ಮಾಡಿಕೊಂಡು ಓದಿಕೊಳ್ಳುವುದು.

5.ಪದೇ ಪದೇ ಹಿಂದಕ್ಕೆ ಹೋಗಿ ಓದಿರುವುದನ್ನೇ ಮತ್ತೆ ಮತ್ತೆ ಓದಿ, ಓದುವುದನ್ನು ಮುಂದುವರಿಸುವುದು.

6.ಪದ ಪದವನ್ನು ಓದುತ್ತಾ ಹೋಗುತ್ತಾ ಅರ್ಥವನ್ನು ಗ್ರಹಿಸದಿರುವುದು. ಪದಗಳನ್ನು ಒಂದೊಂದೇ ಓದುವುದು ವಾಸ್ತವ. ಆದರೆ ಪದ ಪದಗಳು ಒಂದಕ್ಕೊಂದು ಪೂರಕವಾಗಿದ್ದು ಒಂದು ಸಮಗ್ರ ಅರ್ಥವನ್ನು ಕೊಡುತ್ತವೆ. ಅದನ್ನು ಗ್ರಹಿಸದೇ ಬರೀ ಪದಗಳನ್ನು ಓದುವುದು ದೋಷ.

7.ನಿರ್ದಿಷ್ಟ ಗುರಿ ಮತ್ತು ಉದ್ದೇಶವಿಲ್ಲದೇ ಓದುವುದು ಕೂಡ ಒಂದು ದೋಷವೇ ಆಗಿದ್ದರೂ, ಎಲ್ಲಾ ಸಮಯದಲ್ಲಿ ಅದನ್ನು ಗಮನಕ್ಕೆ ತೆಗೆದುಕೊಳ್ಳುವಷ್ಟಿಲ್ಲ.

ಏಕೆಂದರೆ ನಿರ್ದಿಷ್ಟ ಉದ್ದೇಶವಿಲ್ಲದೇ ಕಣ್ಣಾಡಿಸುವಾಗಲೂ ಕೂಡಾ ಗಮನ ಸೆಳೆದು ಆ ಪಠ್ಯ ವಿಷಯದ ಮೇಲೆ ಹೊಸ ಗಮನವನ್ನು ಹೊಂದುತ್ತೇವೆ.

8.ಓದುವಾಗ ಕುಂಯ್ ಗುಡುತ್ತಲೋ ಅಥವಾ ವಿಚಿತ್ರ ಶಬ್ದಗಳನ್ನು ಮಾಡುತ್ತಲೋ, ಉಡಾೆಯಿಂದ ಸಂಗೀತದಂತೆ ಸ್ವರಗಳನ್ನು ಹೊರಡಿಸುವುದು ತಪ್ಪು.

9.ಅನಗತ್ಯವಾದಂತಹ ಆಂಗಿಕ ಚಲನೆಗಳನ್ನು ಹೊಂದಿರುವುದು. ಕೆಲವರು ಓಡಾಡಿಕೊಂಡು ಓದುವುದು, ಹೆಣ್ಣು ಮಕ್ಕಳು ತಮ್ಮ ಉದ್ದ ಕೂದಲಿನಲ್ಲಿ ಕೈ ಬೆರಳುಗಳನ್ನಾಡಿಸಿಕೊಂಡು ಓದುವುದು, ಬಟ್ಟೆಯ ತುದಿಯನ್ನುತಿರುಗಿಸುತ್ತಾ ಓದುವುದು, ಓದುವಾಗ ಬೆರಳುಗಳನ್ನು ಕುಣಿಸುತ್ತಾ, ಕಾಲುಗಳನ್ನು ಅಲ್ಲಾಡಿಸುತ್ತಾ ಅಥವಾ ಯಾವುದೇ ಅಂಗಚೇಷ್ಟೆಗಳನ್ನು ಮಾಡುತ್ತಾ ಓದುವ ಅಭ್ಯಾಸ ಕೆಟ್ಟದ್ದು. ಮಕ್ಕಳಲ್ಲಿ ಅದನ್ನು ಕಂಡ ಕೂಡಲೇ ನಿಲ್ಲಿಸಲು ಹೇಳಬೇಕು.

 ಉತ್ತಮ ಓದುವಿಕೆಯ ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳ ಬೇಕೆಂದರೆ, ಕಾಲಂಗಳು ಇದ್ದ ಪಕ್ಷದಲ್ಲಿ ಎಡದಿಂದ ಬಲಕ್ಕೆ ಓದುವ ಬದಲು ಮೇಲಿಂದ ಕೆಳಕ್ಕೆ ಓದುವ ಅಭ್ಯಾಸ ಒಳ್ಳೆಯದು ಎಂದು ಹೇಳುತ್ತಾರೆ. ವಿಷಯಾಧಾರಿತವಾಗಿ ವಾರ್ತಾ ಪತ್ರಿಕೆಗಳಲ್ಲಿ ಓದುತ್ತೇವೆ.

ಆದರೆ ಕಲಿಕಾ ಸಾಮಗ್ರಿಗಳನ್ನು ಒದಗಿಸಿರುವಾಗ, ಅವುಗಳು ದೊಡ್ಡ ದೊಡ್ಡ ಪುಟಗಳಲ್ಲಿದ್ದರೆ ಎಡದಿಂದ ಬಲಕ್ಕೆ ಓದುವುದಕ್ಕಿಂತ ಮೇಲಿಂದ ಕೆಳಕ್ಕೆ ಅವಲೋಕಿಸುವುದು ಒಳ್ಳೆಯದು. ಇದರಿಂದ ಓದುವ ವೇಗ ಇಮ್ಮಡಿಸುತ್ತದೆ. ವಾರ್ತಾಪತ್ರಿಕೆಗಳನ್ನು ಮಕ್ಕಳಿಗೆ ಓದಿಸುವ ಅಭ್ಯಾಸ ಮಾಡಿಸುವಾಗ ಕಾಲಂಗಳ ನಡುವೆ ಪೆನ್ಸಿಲ್‌ನಿಂದ ತೆಳುವಾಗಿ ಗೆರೆಗಳನ್ನು ಹಾಕಬೇಕು. ಅದನ್ನು ಅನುಸರಿಸಿಕೊಂಡು ಓದಲು ಮಕ್ಕಳಿಗೆ ಹೇಳಿಕೊಡಬೇಕು.

ವಾರ್ತಾಪತ್ರಿಕೆ ಮತ್ತು ವಾರಪತ್ರಿಕೆ ಹಾಗೂ ಪತ್ರಿಕೆಗಳಲ್ಲಿರುವ ಮಕ್ಕಳ ವಿಶೇಷ ಪುರವಣಿ ಇತ್ಯಾದಿಗಳನ್ನು ಮಕ್ಕಳಿಗೆ ಓದಿಸುವ ಮೂಲಕ ಓದುವ ಅಭಿರುಚಿಯನ್ನು ಬೆಳೆಸುವುದರ ಜೊತೆಗೆ ಓದುವಿಕೆಯ ತಂತ್ರವನ್ನು ಉತ್ತಮಗೊಳಿಸುವ ಮತ್ತು ವೇಗಗೊಳಿಸುವ ವಿಧಾನವನ್ನು ಕೂಡ ಅಳವಡಿಸುತ್ತಿದ್ದೇವೆಂದೆ ಅರ್ಥ.

ಮಕ್ಕಳಿಗೆಂದೇ ಬರುವ ಅಂಕಣಗಳಲ್ಲಿ ಪ್ರಕಟಗೊಳಿಸುವ ಒಗಟುಗಳು, ರೇಖಾಚಿತ್ರಗಳು ಮತ್ತು ಪುಟ್ಟ ಪುಟ್ಟ ಮಾಹಿತಿಗಳನ್ನು ಕೂಡ ಕಥೆಗಳನ್ನು ಓದುವಷ್ಟೇ ಆಸಕ್ತಿ ವಹಿಸಿ ಗಮನಿಸುವಂತೆ ಪ್ರೇರೇಪಿಸಬೇಕು. ಇವೆಲ್ಲವೂ ಕೂಡ ಓದುವಿಕೆಯ ವೇಗ ಮತ್ತು ಗಾಢತೆಯನ್ನು ಹೆಚ್ಚಿಸುತ್ತದೆ.

share
ಯೋಗೇಶ್  ಮಾಸ್ಟರ್
ಯೋಗೇಶ್ ಮಾಸ್ಟರ್
Next Story
X