ಅಜೇಯ 413 ರನ್ ಗಳಿಸಿದ ಬಂಗಾಳದ ಬ್ಯಾಟ್ಸ್‌ಮನ್ ಪಂಕಜ್

ಕೋಲ್ಕತಾ, ಡಿ.25: ಬಂಗಾಳದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಪಂಕಜ್ ಷಾ ರವಿವಾರ ಇಲ್ಲಿ ನಡೆದ ಬಂಗಾಳ ಕ್ರಿಕೆಟ್ ಸಂಸ್ಥೆಯ ತ್ರಿದಿನ ಕ್ಲಬ್ ಲೀಗ್ ಪಂದ್ಯದಲ್ಲಿ ಅಜೇಯ 413 ರನ್ ಗಳಿಸಿ ಕ್ರಿಸ್‌ಮಸ್ ಹಬ್ಬದಂದು ಹೊಸ ದಾಖಲೆ ಬರೆದರು.
ಬಾರಿಶಾ ಸ್ಪೋರ್ಟಿಂಗ್ ಕ್ಲಬ್‌ನ್ನು ಪ್ರತಿನಿಧಿಸಿದ 28ರ ಹರೆಯದ ಪಂಕಜ್ ಚೊಚ್ಚಲ 400 ಪ್ಲಸ್ ಸ್ಕೋರ್‌ನಲ್ಲಿ 44 ಬೌಂಡರಿ, 23 ಸಿಕ್ಸರ್‌ಗಳಿದ್ದವು. ಅಜ್ಮೆರ್ ಸಿಂಗ್‌ರೊಂದಿಗೆ 6ನೆ ವಿಕೆಟ್‌ಗೆ 203 ರನ್ ಹಾಗೂ ಶ್ರೇಯನ್ ಅವರೊಂದಿಗೆ 8ನೆ ವಿಕೆಟ್‌ಗೆ 191 ರನ್ ಜೊತೆಯಾಟ ನಡೆಸಿದ ಪಂಕಜ್ ಬಾರಿಶಾ ತಂಡ 8 ವಿಕೆಟ್ ನಷ್ಟಕ್ಕೆ 708 ರನ್ ಗಳಿಸಲು ನೆರವಾದರು.
ಕಳೆದ ಋತುವಿನಲ್ಲಿ ರಾಜಸ್ಥಾನ ವಿರುದ್ಧ ಚೊಚ್ಚಲ ರಣಜಿ ಪಂದ್ಯ ಆಡಿದ್ದ ಪಂಕಜ್ ಬಂಗಾಳದ ಪರ 12 ಪ್ರಥಮ ದರ್ಜೆ, 12 ಟ್ವೆಂಟಿ-20 ಪಂದ್ಯ ಆಡಿದ್ದಾರೆ.
Next Story





