Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುಗ್ಗಿ
  3. ದೇಶದ ಜನತೆಯ ನೀರಿನ ದಾಹಕ್ಕೆ...

ದೇಶದ ಜನತೆಯ ನೀರಿನ ದಾಹಕ್ಕೆ ಕೊನೆಯೆಲ್ಲಿ?

ಟಿ.ಸಿ.ಎ.ರಂಗನಾಥನ್ಟಿ.ಸಿ.ಎ.ರಂಗನಾಥನ್25 Dec 2016 11:33 PM IST
share
ದೇಶದ ಜನತೆಯ ನೀರಿನ ದಾಹಕ್ಕೆ ಕೊನೆಯೆಲ್ಲಿ?

ಅಂಬೇಡ್ಕರ್ ಜಯಂತಿಯನ್ನು ಜಲದಿನವಾಗಿ ಆಚರಿಸುವ ಕೇಂದ್ರ ಸರಕಾರದ ಇತ್ತೀಚಿನ ಘೋಷಣೆಯು ಕುತೂಹಲಕಾರಿಯಾಗಿದೆ. ಕಾವೇರಿ ಜಲವಿವಾದ ಹಂಚಿಕೆಗೆ ಸಂಬಂಧಿಸಿ ಇತ್ತೀಚೆಗೆ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಭುಗಿಲೆದ್ದ ಸಂಘರ್ಷ ಹಾಗೂ ಸಟ್ಲೇಜ್ ನದಿ ವಿವಾದದ ಹಿನ್ನೆಲೆಯಲ್ಲಿ ಪಂಜಾಬ್-ಹರ್ಯಾಣ-ದಿಲ್ಲಿ ಸರಕಾರಗಳ ನಡುವೆ ಉದ್ಭವಿಸಿದ ಬಿಕ್ಕಟ್ಟನ್ನು ನೋಡಿದರೆ ಸರಕಾರದ ಈ ನಿರ್ಧಾರವು ಗಮನಾರ್ಹವಾಗಿದೆ. ಅಂಬೇಡ್ಕರ್ ಅವರು ಭಾರತೀಯ ಸಂವಿಧಾನದ ಶಿಲ್ಪಿ ಮಾತ್ರವಲ್ಲ ಜಲಸಂಪನ್ಮೂಲಗಳ ನಿರ್ವಹಣೆಗೆ ಸಂಬಂಧಿಸಿ ಅಖಿಲ ಭಾರತ ಮಟ್ಟದ ನೀತಿ ನಿರೂಪಣೆಗೂ ಕಾರಣರಾಗಿದ್ದಾರೆ.

ಜಲ ಲಭ್ಯತೆಗೆ ಸಂಬಂಧಿಸಿ ಭಾರತದ ಎದುರಿಸುತ್ತಿರುವ ಸಮಸ್ಯೆಗಳು ಹೊಸತೇನೂ ಅಲ್ಲ. ಭಾರತವು ಸರಾಸರಿಗಿಂತ ಅಧಿಕ ಮಳೆಯನ್ನು ಪಡೆಯುವುದಾದರೂ ರಾಷ್ಟ್ರವ್ಯಾಪಿಯಾಗಿ ಅದರ ಹಂಚಿಕೆಯು ಅಸಮತೋಲನದಿಂದ ಕೂಡಿದೆ. ತಲಾವಾರು ಜಲಲಭ್ಯತೆಯ ಕೊರತೆಯ ಸವಾಲನ್ನು ಅದು ಎದುರಿಸುತ್ತಿದೆ. ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸುರಕ್ಷಿತ ಕುಡಿಯುವ ನೀರಿನ ಪೂರೈಕೆಯ ಸವಾಲನ್ನು ಎದುರಿಸುವ ಜೊತೆಗೆ ಕೃಷಿಗೂ ಸಮರ್ಪಕ ಜಲವಿತರಣೆಯ ಸವಾಲುಗಳನ್ನು ಅದು ಎದುರಿಸುತ್ತಿದೆ.

ನಗರಪ್ರದೇಶಗಳಲ್ಲಿ ಪೌರಾಡಳಿತ ಸಂಸ್ಥೆಗಳ ನೀರಿನ ಪೂರೈಕೆಯಲ್ಲಿನ ದಾರುಣ ಸ್ಥಿತಿಯು ಎಲ್ಲರಿಗೂ ತಿಳಿದೇ ಇದೆ. ಹಾಗೆಯೇ ಗ್ರಾಮೀಣ ಪ್ರದೇಶಗಳಲ್ಲಿ ಸುರಕ್ಷಿತ ನೀರಿನ ಪೂರೈಕೆ ಲಭ್ಯವಾಗುತ್ತಿಲ್ಲ. ಭಾರತವು ಜಗತ್ತಿನಲ್ಲೇ ಅತಿ ದೊಡ್ಡ ನೀರಾವರಿ ವ್ಯವಸ್ಥೆಯನ್ನು ಹೊಂದಿರುವ ಹೊರತಾಗಿಯೂ, ಮುಂಗಾರು ಒಂದು ರಾಷ್ಟ್ರೀಯ ಆತಂಕದ ವಿಷಯವಾಗಿ ಉಳಿದಿದೆ. ದೇಶದ ನೀರಾವರಿ ವ್ಯವಸ್ಥೆಯಲ್ಲಿ ಸರಕಾರವು ಕ್ರಾಂತಿಕಾರಿಯಾದ ಸುಧಾರಣೆಗಳನ್ನು ಜಾರಿಗೆ ತರಲಿದೆಯೆಂದು ಎನ್‌ಡಿಎ ಸರಕಾರ ಪ್ರಕಟಿಸಿದೆ.

ಜಲಸಮಸ್ಯೆಗಳನ್ನು ನಿಭಾಯಿಸುವಲ್ಲಿ ಈ ಹಿಂದಿನ ಅನುದಾನಕ್ಕಿಂತ ಶೇ.20ರಷ್ಟು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಸರಕಾರವು ಹಾಲಿ ವರ್ಷದ ಬಜೆಟ್‌ನಲ್ಲಿ ಹಲವಾರು ಹೆಚ್ಚುವರಿ ಕ್ರಮಗಳನ್ನು ಕೈಗೊಂಡಿದೆ. ಮೂರು ದಶಲಕ್ಷ ಗ್ರಾಮೀಣ ಮಳೆ ಕೊಯ್ಲು ಹಾಗೂ ಜಲ ವ್ಯವಸ್ಥೆಗಳನ್ನು ಸೃಷ್ಟಿಸುವ ಹಾಗೂ ಮರುಸ್ಥಾಪಿಸುವ ಉದ್ದೇಶಗಳನ್ನು ಹೊಂದಿದೆ.

ಜಲಬಳಕೆಯ ನಮೂನೆಗಳು ಹಾಗೂ ಜಲಸಂರಕ್ಷಣೆಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತಪಡಿಸುವ ಕಾಳಜಿಗಳು ಈವರೆಗೆ ಕೇವಲ ವಾಗಾಡಂಬರಗಳಿಗಷ್ಟೇ ಸೀಮಿತವಾಗಿವೆ. ನೀರಿನ ಬಳಕೆಯ ವಿಷಯದಲ್ಲಿ ವಿವಿಧ ದೇಶಗಳ ನಡುವೆ ಪರಸ್ಪರ ಹೋಲಿಕೆ ಮಾಡುವುದು ತಪ್ಪುಅಭಿಪ್ರಾಯಕ್ಕೆ ಕಾರಣವಾಗಲಿದೆಯೆಂದು ಅದು ಹೇಳಿದೆ. ನೀರಿನ ಬಳಕೆಯು ಹವಾಮಾನ ಹಾಗೂ ಸಾಂಸ್ಕೃತಿಕ ಪದ್ಧತಿಗಳು, ಕೃಷಿ ಗಾತ್ರ, ಬೆಳೆ ಸಂರಚನೆ, ನೀರಾವರಿ ಹಾಗೂ ನಗರೀಕರಣವನ್ನು ಆಧರಿಸಿದೆ.

ಜಲಬಳಕೆ ಬಗ್ಗೆ ಅಮೆರಿಕ ಹಾಗೂ ಚೀನಾ ನಡುವೆ ಹೋಲಿಕೆ ಮಾಡಿ, ಆಹಾರ ಹಾಗೂ ಕೃಷಿ ಸಂಸ್ಥೆಯ ದತ್ತಾಂಶ ಸಂಗ್ರಹ ಸಂಸ್ಥೆಯಾದ ಅಕ್ವಾಸ್ಟಾಟ್ ಬಿಡುಗಡೆಗೊಳಿಸಿರುವ ಅಂಕಿಅಂಶಗಳನ್ನು ಇದಕ್ಕೆ ಉದಾಹರಣೆಯಾಗಿ ತೆಗೆದು ಕೊಳ್ಳಬಹುದಾಗಿದೆ.

ಅಮೆರಿಕ ಹಾಗೂ ಚೀನಾ ಇವರೆಡೂ ಬೃಹತ್ ರಾಷ್ಟ್ರಗಳಾಗಿದ್ದು, ಅಪಾರವಾದ ಭೌಗೋಳಿಕ ವೈವಿಧ್ಯತೆಗಳನ್ನು ಹೊಂದಿವೆ. ಜಲಬಳಕೆಯಲ್ಲಿ ಅಮೆರಿಕವು ಅತ್ಯಂತ ಧಾರಾಳತನದಿಂದ ವರ್ತಿಸುವ ರಾಷ್ಟ್ರವಾಗಿದೆ. ಅದೇ ರೀತಿ ಚೀನಾವು ಅಭಿವೃದ್ಧಿಯ ಧಾವಂತದಲ್ಲಿ ತನ್ನ ಸಂಪನ್ಮೂಲಗಳ ಬಳಕೆಯಲ್ಲಿ ಸ್ವೇಚ್ಛಾಚಾರಿಯಾಗಿದೆಯೆಂದು ಅಕ್ವಾಸ್ಟಾಟ್ ವರದಿ ಹೇಳಿದೆ.

ಎಲ್ಲಾ ದೇಶಗಳಲ್ಲಿಯೂ ನೀರಿನ ಬಳಕೆಯನ್ನು ಕ್ಯೂಬಿಕ್ ಕಿಲೋ ಮೀಟರ್‌ಗಳಲ್ಲಿ ಅಳೆಯಲಾಗುತ್ತಿದೆ. ಭಾರತದಲ್ಲಿ ವಾರ್ಷಿಕ ಜಲಬಳಕೆಯು 1990ರಲ್ಲಿ 500 ಯೂನಿಟ್‌ಗಳಾಗಿದ್ದು, ಪ್ರಸ್ತುತ 761 ಯೂನಿಟ್‌ಗೆ ಏರಿಕೆ ಯಾಗಿದೆ. ಆದರೆ ಇದೇ ಅವಧಿಯಲ್ಲಿ ಚೀನಾದಲ್ಲಿ ಜಲಬಳಕೆಯು 500 ಯೂನಿಟ್‌ಗಳಿಂದ 608 ಯೂನಿಟ್‌ಗಳಿಗೇರಿದ್ದು, ಕೇವಲ ಶೇ.29ರಷ್ಟು ಬೆಳವಣಿಗೆ ದಾಖಿಲಿಸಿದೆ. ಅಮೆರಿಕದ ಈ ಅಂಕಿಸಂಖ್ಯೆಗಳು ಕ್ರಮವಾಗಿ 559/485 ಆಗಿದ್ದು, ನಿಚ್ಚಳವಾದ ಕುಸಿತವನ್ನು ದಾಖಲಿಸಿದೆ.

ಆದರೆ ಭಾರತದ ಈ ಹಾದಿತಪ್ಪಿದ ಪ್ರವೃತ್ತಿಗೆ ಕಾರಣವಾದರೂ ಏನು?. ಕೃಷಿ ಕ್ಷೇತ್ರದಲ್ಲಿ ಜಲಬಳಕೆಯ ಕುರಿತಾದ ದತ್ತಾಂಶಗಳನ್ನು ಬಳಸಿಕೊಂಡು ಈ ಪ್ರಶ್ನೆಗೆ ಉತ್ತರ ಹುಡುಕಬೇಕಾಗಿದೆ. ಕೃಷಿ, ಕೈಗಾರಿಕೆ ಹಾಗೂ ಪೌರಾಡಳಿತ ಕೇಂದ್ರಗಳಿಗಾಗಿನ ವರ್ಗೀಯ ಬಳಕೆ ದತ್ತಾಂಶವನ್ನು ಉಪಯೋಗಿಸಿಕೊಂಡು ಈ ಅಂಶವನ್ನು ಪರಿಶೀಲಿಸಬೇಕಾಗಿದೆ. ನೀರಿನ ಕೈಗಾರಿಕಾ ಬಳಕೆಯು ಅತ್ಯಂತ ಕಡಿಮೆ ಪಾಲನ್ನು (ಶೇ.2) ಹೊಂದಿರುವುದನ್ನು ಈ ದತ್ತಾಂಶಗಳು ಸೂಚಿಸುತ್ತವೆ. ಇದಕ್ಕೆ ಹೋಲಿಸಿದರೆ, ಅಮೆರಿಕ ಹಾಗೂ ಚೀನಾಗಳಲ್ಲಿ ನೀರಿನ ಕೈಗಾರಿಕಾ ಬಳಕೆ ತುಂಬಾ ಅಧಿಕವಿದ್ದು, ಶೇ.25ನ್ನು ಮೀರಿದೆ. ಆದರೆ ಭಾರತೀಯ ಮುನ್ಸಿಪಲ್ ಹಾಗೂ ಕೃಷಿ ಬಳಕೆ ಪದ್ಧತಿಗಳನ್ನು ಪರಿಶೀಲಿಸುವ ಅಗತ್ಯವಿದೆ.

ನೀರಿನ ಮುನ್ಸಿಪಲ್ ಬಳಕೆಯ ವಿಷಯದಲ್ಲಿ ಭಾರತೀಯ ಬಳಕೆಯು 25ರಿಂದ 56 ಯೂನಿಟ್‌ಗಳಿಗೇರಿತು. ಚೀನಾದ ಪೌರಾಡಳಿತಗಳಲ್ಲೂ ನೀರಿನ ಬಳಕೆ ಕೂಡಾ ದುಪ್ಪಟ್ಟಾಗಿದ್ದು 75 ಜಲಯೂನಿಟ್‌ಗಳಿಗೇರಿತ್ತು. ಹೀಗಾಗಿ ನೀರಿನ ಬಳಕೆಯಲ್ಲಿ ನಗರ ಪ್ರದೇಶದ ಭಾರತೀಯನ ಪ್ರವೃತ್ತಿಯು ಮೊಂಡುತನದಿಂದ ಕೂಡಿದೆ ಎಂದು ಹೇಳಲು ಸಾಧ್ಯವಿಲ್ಲ. ಆದಾಗ್ಯೂ ಇದೇ ಅವಧಿಯಲ್ಲಿ ಭಾರತದಲ್ಲಿ ಮುನ್ಸಿಪಲ್ ತ್ಯಾಜ್ಯ ನೀರಿನ ಸಂಸ್ಕರಣೆಯ ಪ್ರಮಾಣವು 0.91 ಯೂನಿಟ್‌ಗಳಿಂದ 4.41 ಯೂನಿಟ್‌ಗಳಿಗೇರಿತು.

ನಗರಪ್ರದೇಶಗಳ ತ್ಯಾಜ್ಯ ನೀರು ನಿರ್ವಹಣೆಯಲ್ಲಿ ಅತ್ಯಂತ ಕಳಪೆ ಸಾಧನೆಯನ್ನು ಪ್ರದರ್ಶಿಸುತ್ತಿದ್ದ ಚೀನದಲ್ಲಿ ಶೇ.49.3 ಯೂನಿಟ್‌ಗಳಷ್ಟು ತ್ಯಾಜ್ಯ ನೀರು ಸಂಸ್ಕರಣೆಯಾಗುತ್ತಿದೆ. ಆದರೆ ತ್ಯಾಜ್ಯ ನೀರು ಬಳಕೆ ಹಾಗೂ ಸಂಸ್ಕರಣೆಯಲ್ಲಿ ಅಮೆರಿಕದ ಅಂಕಿಸಂಖ್ಯೆಗಳು ಉನ್ನತ ಮಟ್ಟದಲ್ಲಿವೆ. ಈ ಎರಡೂ ದೇಶಗಳಲ್ಲಿ ಪ್ರತಿ ಪ್ರಜೆಗೂ ತಲಾವಾರು ನೀರಿನ ಲಭ್ಯತೆಯ ಪ್ರಮಾಣವು ಅತ್ಯಧಿಕವಾಗಿದೆ.

ಕೃಷಿ ಬಳಕೆ

ಇದೇ ಅವಧಿಗೆ ಕೃಷಿ ಕ್ಷೇತ್ರದಲ್ಲಿ ನೀರಿನ ಬಳಕೆಯು 460ರಿಂದ 688 ಯೂನಿಟ್‌ಗಳಿಗೇರಿದ್ದು, ಶೇ.50ರಷ್ಟು ಪ್ರಗತಿಯನ್ನು ಸಾಧಿಸಿತ್ತು. ಚೀನಾದ ಬಳಕೆಯು 419 ಯೂನಿಟ್‌ಗಳಿಂದ 392 ಯೂನಿಟ್‌ಗಳಿಗೆ ಇಳಿಯುವ ಮೂಲಕ ನಿಚ್ಚಳವಾದ ಕುಸಿತವನ್ನು ದಾಖಲಿಸಿದೆ. ಅದೇ ರೀತಿ ಅಮೆರಿಕದಲ್ಲಿ ಕೃಷಿ ಕ್ಷೇತ್ರದಲ್ಲಿ ನೀರಿನ ಬಳಕೆಯು 197 ಯೂನಿಟ್‌ಗಳಿಂದ 175 ಯೂನಿಟ್‌ಗಳಿಗೆ ಇಳಿದಿತ್ತು.

ಭಾರತದಲ್ಲಿ ಭೌತಿಕ ಉತ್ಪಾದನೆ ಕುರಿತ ಸಂಯೋಜಿತ ವಾರ್ಷಿಕ ಬೆಳವಣಿಗೆ ದರ (ಸಿಎಜಿಆರ್)ವು 2.2 ಶೇಕಡವೆಂದು ಅಂದಾಜಿಸಲಾಗಿದೆ. ಇದು ಚೀನಿ ದರಗಳಿಗಿಂತಲೂ ಕಡಿಮೆಯದ್ದಾಗಿದೆ. ಈ ಅಂಕಿಅಂಶಗಳು ಕೃಷಿಯ ಬಗ್ಗೆ ಗಂಬೀರವಾದ ಗಮನ ಹರಿಸಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತವೆ. ಅತ್ಯಧಿಕ ಪ್ರಮಾಣದ ನೀರನ್ನು ಬಯಸುವ ಬೆಳೆಗಳನ್ನು ರೈತರು ಆಯ್ಕೆ ಮಾಡಿಕೊಳ್ಳುತ್ತಿರುವುದು ಇದಕ್ಕೆ ಕಾರಣವಾಗಿದೆ.

ಕೃಷಿ ಕ್ಷೇತ್ರದಲ್ಲಿ ನೀರಿನ ಅವಶ್ಯಕತೆಗೆ ದೊರೆಯುತ್ತಿದ್ದ ಪ್ರಾಮುಖ್ಯತೆ ಕಡಿಮೆಯಾಗಿರುವುದು ಕೂಡಾ ಇನ್ನೊಂದು ಕಾರಣವಾಗಿದೆ. ಯಾಕೆಂದರೆ ಕೊರತೆಯ ಹೊರತಾಗಿಯೂ ಅಲ್ಪಕಾಲಿಕ ಚುನಾವಣಾ ಜನಪ್ರಿಯತೆಗಾಗಿ ವಿವಿಧ ರಾಜ್ಯಗಳು ಉಚಿತ ಅಥವಾ ಅಗ್ಗದ ದರದಲ್ಲಿ ನೀರು ಹಾಗೂ ವಿದ್ಯುತ್ ಪೂರೈಕೆ ಮಾಡುತ್ತಿವೆ. ಆದಾಗ್ಯೂ ವಿವಿಧ ರಾಜ್ಯಗಳ ನಡುವೆ ಉದ್ಭವಿಸುತ್ತಿರುವ ಜಲ ಜಗಳಗಳನ್ನು ತಡೆಯಲು ಅತ್ಯಂತ ಹಾಲಿ ಕಾನೂನುಗಳಲ್ಲಿ ಅತ್ಯಂತ ಹರಿತವಾದ ತಿದ್ದುಪಡಿಗಳನ್ನು ತರುವುದು ಅತ್ಯಗತ್ಯವಾಗಿದೆ.

ಭವಿಷ್ಯದಲ್ಲಿ ನೀರಿನ ಬೇಡಿಕೆ ಹಾಗೂ ನೀರಿನ ಲಭ್ಯತೆ ಕುರಿತು ಕೇಂದ್ರ ಜಲ ಆಯೋಗದ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಭವಿಷ್ಯವು ಅತ್ಯಂತ ಕಳವಳಕಾರಿ ಯಾಗಿದೆ. ಆದಾಗ್ಯೂ, ಇವು ರಾಜಕೀಯವಾಗಿ ಈ ಕ್ಷೇತ್ರಗಳ ಸುಧಾರಣೆ ಅತ್ಯಂತ ಕ್ಲಿಷ್ಟಕರವಾದುದಾಗಿದೆ.

ಇದೇ ಅವಧಿಯಲ್ಲಿ, ನಾವೀಗ ನಗದು ಅಮಾನ್ಯತೆಯ ಆನಂತರದ ಯುಗದಲ್ಲಿ ಬದುಕುತ್ತಿದ್ದೇವೆ. ದೇಶದ ಉತ್ತಮ ಭವಿಷ್ಯಕ್ಕಾಗಿ ಸರಕಾರವು ವ್ಯಾಪಕವಾದ ಒತ್ತಡವನ್ನು ಎದುರಿಸಲು ಸಿದ್ಧವಿರುವ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದೆ. ನೀರಿನ ಅದಕ್ಷ ಬಳಕೆ ಅಥವಾ ನೀರಿನ ಕೊರತೆಯಿರುವ ಸಮಾಜದಲ್ಲಿ ನೀರಿನ ಬೇಕಾಬಿಟ್ಟಿ ಬಳಕೆಗೆ ಅವಕಾಶ ನೀಡುವುದು, ಬಡತನದಿಂದ ತತ್ತರಿಸಿರುವ ದೇಶದಲ್ಲಿ ಕಪ್ಪುಹಣದ ಚಲಾವಣೆಗೆ ಅನುಮತಿ ನೀಡುವುದಕ್ಕೆ ಸರಿಸಮಾನವಾದುದಾಗಿದೆ.

ಅಂಬೇಡ್ಕರ್ ಜಯಂತಿಯನ್ನು ಜಲದಿನವಾಗಿ ಆಚರಿಸಲಾಗುವುದೆಂಬ ಕೇಂದ್ರ ಸರಕಾರದ ಘೋಷಣೆಯು ಜಲನಿರ್ವಹಣೆ ಕುರಿತು ಪರಿಣಾಮಕಾರಿ ಹಾಗೂ ತ್ವರಿತಗತಿಯ ತಳಮಟ್ಟದ ಸುಧಾರಣಾ ಕ್ರಮಗಳು ಜಾರಿಗೊಳ್ಳಲಿವೆಯೆಂಬ ಬಗ್ಗೆ ಸುಳಿವನ್ನು ನೀಡುತ್ತದೆ. ಒಟ್ಟಾರೆಯಾಗಿ, ಅಧುನಿಕ ಸಮಾಜದ ನಿರ್ಮಾಣದ ಕನಸುಕಂಡಿದ್ದ ಅಂಬೇಡ್ಕರ್ ಪಟ್ಟಭದ್ರ ಹಿತಾಸಕ್ತಿಗಳಿಗೆ ಅಥವಾ ಕಂದಾಚಾರದ ಸಂಪ್ರದಾಯಗಳಿಗೆ ಮಣಿಯದ ನಾಯಕನೆಂಬುದನ್ನು ಇಡೀ ಜಗತ್ತೇ ಒಪ್ಪಿಕೊಳ್ಳುತ್ತದೆ. ನಾವು ಅಭಿವೃದ್ಧಿಯನ್ನು ಎದುರುಗೊಳ್ಳಬೇಕಿದೆ.

(ಈ ಲೇಖನದ ಬರಹಗಾರರು ಎಕ್ಸಿಮ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಅಧ್ಯಕ್ಷರು).ಕೃಪೆ: ಡೆಕ್ಕನ್ ಹೆರಾಲ್ಡ್.

share
ಟಿ.ಸಿ.ಎ.ರಂಗನಾಥನ್
ಟಿ.ಸಿ.ಎ.ರಂಗನಾಥನ್
Next Story
X