ಉಪಗ್ರಹ ಫೋನ್ ಹೊಂದಿದ್ದ ಅಮೆರಿಕನ್ ಪ್ರವಾಸಿ ಬಂಧನ
ತಿರುವನಂತಪುರ,ಡಿ.25: ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ಉಪಗ್ರಹ ಫೋನ್ ಹೊಂದಿದ್ದ ಅಮೆರಿಕದ ಪ್ರವಾಸಿಯೋರ್ವನನ್ನು ಇಲ್ಲಿಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ನಿನ್ನೆ ತಾಯ್ನೆಡಿಗೆ ಮರಳಲು ವಿಮಾನವನ್ನೇರಲು ಬಂದಿದ್ದ ಮಾರ್ಕ್ಸ್ ಜೋರ್ಡಾನ್ ಆ್ಯಂಡ್ರೂ(31)ನನ್ನು ಸಿಐಎಸ್‌ಎಫ್ ಸಿಬ್ಬಂದಿ ತಪಾಸಣೆಗೊಳಪಡಿಸಿದಾಗ ಆತನ ಬ್ಯಾಗಿನಲ್ಲಿ ಉಪಗ್ರಹ ಫೋನ್ ಪತ್ತೆಯಾಗಿದ್ದು, ಆತನನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.
ಆ್ಯಂಡ್ರೂನನ್ನು ಬಂಧಿಸಿ ವೈರ್‌ಲೆಸ್ ಮತ್ತು ಟೆಲಿಗ್ರಾಫ್ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಆತನನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧಿನ ವಿಧಿಸಲಾಗಿದೆ.
ಕ್ಯಾಲಿಫೋರ್ನಿಯಾ ನಿವಾಸಿಯಾಗಿರುವ ಆ್ಯಂಡ್ರೂ ಭಾರತದಲ್ಲಿ ಉಪಗ್ರಹ ಪೋನ್‌ಗಳು ನಿಷೇಧಿಸಲ್ಪಟ್ಟಿರುವ ವಿಷಯ ತನಗೆ ಗೊತ್ತಿರಲಿಲ್ಲ ಎಂದು ವಿಚಾರಣೆ ಸಂದರ್ಭ ತಿಳಿಸಿದ್ದಾನೆ.
Next Story





