Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಓ ಮೆಣಸೇ
  4. ಓ ಮೆಣಸೇ...

ಓ ಮೆಣಸೇ...

ಓ ಮೆಣಸೇ...ಓ ಮೆಣಸೇ...26 Dec 2016 12:09 AM IST
share

  *ನೋಟು ಅಮಾನ್ಯಗೊಳಿಸಿದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸಿದೆ.

- ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ
  
ಮತ್ತು ದೇಶದ ಉಳಿದೆಲ್ಲೆಡೆ ಅಶಾಂತಿ ಸ್ಫೋಟಗೊಂಡಿದೆ.

---------------------  

ವೈ.ಎಸ್.ಮೇಟಿ ರಾಸಲೀಲೆ ಪ್ರಕರಣ ಇಡೀ ರಾಜ್ಯದ ಜನತೆ ತಲೆ ತಗ್ಗಿಸುವಂತೆ ಮಾಡಿದೆ.

- ಶೋಭಾ ಕರಂದ್ಲಾಜೆ, ಸಂಸದೆ
  
ಬಹುಶಃ ತಮ್ಮ ಹಳೆಯದು ನೆನಪಾಗಿ ಬಿಜೆಪಿಯ ನಾಯಕರು ನಾಚಿ ತಲೆತಗ್ಗಿಸಿರಬೇಕು.

---------------------

ಸಿದ್ದರಾಮಯ್ಯ ಸದ್ದಾಂ ಹುಸೈನ್ ಆಡಳಿತ ಜಾರಿ ಮಾಡುತ್ತಿದ್ದಾರೆ.

- ನಳಿನ್ ಕುಮಾರ್ ಕಟೀಲು, ಸಂಸದ
  
ರಾಸಾಯನಿಕ ಅಸ್ತ್ರ ಬಚ್ಚಿಟ್ಟಿದ್ದಾರೆ ಎಂಬ ಆರೋಪ ಒಂದು ಬಾಕಿ ಇದೆ.

---------------------
  

ದೇಶಕ್ಕೆ ಕೊಡುಗೆ ನೀಡುವುದೇ ನಿಜವಾದ ದೇಶಪ್ರೇಮ.

- ಯು.ಟಿ.ಖಾದರ್, ಸಚಿವ

ಹೋಗಿ ಎಟಿಎಂ ಮುಂದೆ ಕ್ಯೂ ನಿಂತರಾಯಿತು. 

--------------------

  ಸಿದ್ದು ಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿ.
 
  -ಜಗದೀಶ್ ಶೆಟ್ಟರ್, ವಿ.ಸಭೆ, ವಿ.ನಾಯಕ

ಅಂದರೆ ಮುಂದಿನ ಎಲ್ಲ ಸಾಲಲ್ಲೂ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆಯೇ?
---------------------

 ಕೇಂದ್ರ ಸಚಿವ ಅನಂತ್ ಕುಮಾರ್, ಸಂಸದ ಪ್ರಹ್ಲಾದ್ ಜೋಷಿ ಬ್ರಾಹ್ಮಣರ ಹಾಗೂ ಯಡಿಯೂರಪ್ಪ ಲಿಂಗಾಯತರ ಸಮಾವೇಶ ಮಾಡಬಹುದು. ಆದರೆ ನಾನೇಕೆ ‘ಹಿಂದ’ ಸಮಾವೇಶ ಮಾಡಬಾರದು.

- ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
  
ಯಾಕೆಂದರೆ, ಅವರು ಬ್ರಾಹ್ಮಣರು. ನೀವು ಕುರುಬರು. ಅದಕ್ಕೆ.

---------------------

ಪುತ್ರ ಕುಮಾರಸ್ವಾಮಿಯನ್ನು ಸಿಎಂ ಮಾಡುವ ಉದ್ದೇಶವಿಲ್ಲ.

- ದೇವೇಗೌಡ,ಮಾಜಿ ಪ್ರಧಾನಿ
  ಜನರಿಗೂ ಇದ್ದಂತಿಲ್ಲ.
---------------------

  ಕೆಲವೊಂದು ವಿಕೃತಿಯಲ್ಲೇ ನಾವು ಆನಂದ ಪಡುತ್ತಿದ್ದೇವೆ.
 - ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ನಾಯಕ
  
ಹೌದು. ನಿಮ್ಮ ಆನಂದಕ್ಕಾಗಿ ಹಲವರ ಬದುಕು ನುಚ್ಚು ನೂರಾಗಿರುವುದು ದುಃಖದ ಸಂಗತಿ.

---------------------
 
ರಾಜ್ಯದ ಅಥವಾ ದೇಶದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮ ಜಿಲ್ಲೆ ಸ್ವರ್ಗ.

- ಯು.ಟಿ.ಖಾದರ್, ಸಚಿವ
  
ಸಂಘಪರಿವಾರದ ಪಾಲಿನ ಸ್ವರ್ಗ.

---------------------

ನೋಟು ಅಮಾನ್ಯ ನಿರ್ಧಾರವನ್ನು ಇಡೀ ದೇಶದ ಹಿತದೃಷ್ಟಿಯಿಂದ ಮಾಡಲಾಗಿದೆ.

- ರಾಜನಾಥ್‌ಸಿಂಗ್, ಕೇಂದ್ರ ಸಚಿವ
  
ದೃಷ್ಟಿ ದೋಷ ಹೊಂದಿದವರ ಮಾತು.

---------------------

ಬಿಜೆಪಿ ಆಳ್ವಿಕೆಯಡಿ ಬದುಕಲು ದಲಿತ ಸಮುದಾಯದ ಜನ ಹೆದರುತ್ತಿದ್ದಾರೆ.

- ಅಶೋಕ್ ಗೆಹ್ಲೋಟ್,ರಾಜಸ್ಥಾನ ಮಾಜಿ ಸಿಎಂ
  
ಕಾಂಗ್ರೆಸ್‌ನವರು ಬಿಜೆಪಿಗೆ ಹೆದರಿ ಪಕ್ಷವನ್ನೇ ತೊರೆಯುತ್ತಿರುವ ಸುದ್ದಿಯಿದೆ.

---------------------

  ಡಿ.30 ರ ನಂತರ ನೋಟಿನ ಸಮಸ್ಯೆ ಇರದು.

- ಅರುಣ್ ಜೇಟ್ಲಿ, ಕೇಂದ್ರ ಸಚಿವ
  ರಾಜಕೀಯ ಪಕ್ಷಗಳಿಗೆ ಸಮಸ್ಯೆ ಇಲ್ಲ ಬಿಡಿ, ಜನಸಾಮಾನ್ಯರ ಕತೆ ಏನು?
---------------------

  ಮೋದಿ ಗಂಗೆಯಷ್ಟೇ ಪವಿತ್ರ.
-ರವಿಶಂಕರ್ ಪ್ರಸಾದ್,ಕೇಂದ್ರ ಸಚಿವ
  ಮೋದಿಯ ಶುಚಿತ್ವಕ್ಕೆ ಇನ್ನೆಷ್ಟು ಕೋಟಿ ಸುರಿಯಬೇಕು?
---------------------

  ಇಂದು ಪ್ರಶಸ್ತಿಗಾಗಿ ಒತ್ತಡಗಳು ಹೆಚ್ಚುತ್ತಿವೆ
- ಉಮಾಶ್ರೀ, ಸಚಿವೆ
  ನಟಿಯಾಗಿದ್ದಾಗ ತಾವು ಹಾಕಿದ ಒತ್ತಡಗಳು ಕಡಿಮೆಯೇ?
---------------------

 ಅಲ್ಪಸಂಖ್ಯಾತರಲ್ಲಿ ಬಹಳಷ್ಟು ಜನ ಬಿಜೆಪಿ ಪರವಾಗಿದ್ದಾರೆ.

- ಎಸ್.ರವಿಕುಮಾರ್, ಬಿಜೆಪಿ ರಾಜ್ಯ ಪ್ರ.ಕಾರ್ಯದರ್ಶಿ
ದಲಿತರೇನು ಕಡಿಮೆ ಸಂಖ್ಯೆಯಲ್ಲಿದ್ದಾರೆಯೇ? ಶೋಷಿತರು ಶೋಷಕನನ್ನು ಹುಡುಕಿಕೊಂಡು ಹೋಗುವುದು ಇಂದು ನಿನ್ನೆಯ ವ್ಯಥೆಯೇನೂ ಅಲ್ಲ.
---------------------

ನಾನು ಯಡಿಯೂರಪ್ಪ ಅಭಿಮಾನಿ.

- ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
  ಹಾಗಾದರೆ ಯಡಿಯೂರಪ್ಪ ಹೆಸರಲ್ಲೇ ಬ್ರಿಗೇಡ್ ಕಟ್ಟಬಾರದೇ?
---------------------

  ಮೋದಿ ಭ್ರಷ್ಟಾಚಾರದ ಆಪಾದನೆ ಹೊತ್ತಿರುವ ಪ್ರಥಮ ಪ್ರಧಾನಿ.
 - ಅರವಿಂದ್ ಕೇಜ್ರಿವಾಲ್, ದಿಲ್ಲಿ ಮುಖ್ಯಮಂತ್ರಿ
  ಅಸೂಯೆಯೇ?
---------------------

ದರ ನಿಯಂತ್ರಣ ಮೀರಿ ಬಿಟ್ಟಿರುವುದರಿಂದ ಪಣಜಿಯಲ್ಲಿ ಒಂದು ಫ್ಲಾಟ್ ಕೊಳ್ಳಲು ನನ್ನಿಂದ ಸಾಧ್ಯವೇ ಆಗುತ್ತಿಲ್ಲ.

- ಮನೋಹರ್ ಪಾರಿಕ್ಕರ್, ಕೇಂದ್ರ ಸಚಿವ
  ಛೆ, ಫ್ಲಾಟ್ ಇಲ್ಲದೆ ಸದ್ಯಕ್ಕೆ ಬೀದಿಯಲ್ಲೇ ಮಲಗುತ್ತಿರಬೇಕಲ್ಲ ತಾವು?
---------------------

  ನನ್ನ ರಕ್ತದಲ್ಲಿ ಇರುವ ಕಾಂಗ್ರೆಸನ್ನು ಕಿತ್ತೆಸೆಯಲು ಯಾರಿಂದಲೂ ಸಾಧ್ಯವಿಲ್ಲ.

- ಜನಾರ್ದನ ಪೂಜಾರಿ, ಮಾಜಿ ಕೇಂದ್ರ ಸಚಿವ
  ಡಯಾಲಿಸಿಸ್ ಮಾಡಿದರೆ ಹೇಗೆ?
---------------------

ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಮೂಢ ನಂಬಿಕೆ ನಿಷೇಧಿಸುವ ಧೈರ್ಯ ಇಲ್ಲ.

- ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
  
ಮೊದಲು ನೀವು ಬೆದರಿಕೆ ಹಾಕುವುದನ್ನು ನಿಲ್ಲಿಸಿ.

---------------------

  ಜನರ ಬಳಿ ಹೋಗಿ ಜೆಡಿಎಸ್ ಉಳಿಸಿ ಎಂದು ಭಿಕ್ಷೆ ಬೇಡುತ್ತೇನೆ

- ದೇವೇಗೌಡ, ಮಾಜಿ ಪ್ರಧಾನಿ
  
ಈ ಹಿಂದೆ ಸನ್ಯಾಸಿಯ ವೇಷದಲ್ಲಿ ರಾವಣ ಭಿಕ್ಷೆ ಕೇಳಿ ಮಾಡಿದ್ದೇನು ಎನ್ನುವುದು ನಾಡಿನ ಜನತೆಗೆ ಇನ್ನೂ ನೆನಪಿದೆ.

---------------------

  ಯಡಿಯೂರಪ್ಪ ಭವಿಷ್ಯ ಹೇಳುವುದರಲ್ಲಿ ನಿಸ್ಸೀಮರು.
 - ಕಾಗೋಡು ತಿಮ್ಮಪ್ಪ, ಸಚಿವ
  
ಅವರು ಹೇಳಿದ ಭವಿಷ್ಯದಂತೆ ನೀವು ಸಚಿವರಾಗಿದ್ದಿರಬೇಕು.

---------------------

  ನಾವು ಬೇರೆಯಲ್ಲ, ನಮ್ಮ ವ್ಯಕ್ತಿತ್ವ ಬೇರೆಯಲ್ಲ.

- ಬಾಬಾ ರಾಮ್‌ದೇವ್, ಯೋಗಗುರು.
 ಅವೆರಡೂ ನಿಮ್ಮ ಪತಂಜಲಿ ಔಷಧಿಯ ಹಾಗೆ, ನಕಲಿ.

share
ಓ ಮೆಣಸೇ...
ಓ ಮೆಣಸೇ...
Next Story
X