ಅಶೋಕ ಚಕ್ರವನ್ನು ವಿನ್ಯಾಸಗೊಳಿಸಿದ್ದ ಕಲಾವಿದ ದೀನನಾಥ ಭಾರ್ಗವ ನಿಧನ

ಇಂದೋರ್, ಡಿ.26: ರಾಷ್ಟ್ರ ಲಾಂಛನವಾಗಿ ಸಾರನಾಥನ ಸಿಂಹ ಬೋದಿಗೆ ಅಶೋಕ ಚಕ್ರವನ್ನು ವಿನ್ಯಾಸಗೊಳಿಸಿದ್ದ ಕಲಾವಿದ ದೀನನಾಥ ಭಾರ್ಗವ (89) ಅವರು ಇಂದೋರ್ ನಲ್ಲಿ ಇಂದು ನಿಧನರಾದರು.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಕಲಾವಿದ ದೀನನಾಥ ಭಾರ್ಗವ ಅವರು ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ದೀನನಾಥ ಭಾರ್ಗವ ಅವರು ರಚಿಸಿದ್ದ ರಾಷ್ಟ್ರೀಯ ಲಾಂಛನವನ್ನು ಸರಕಾರ 1950ರ ಜನವರಿ 2ರಂದು ಅಳವಡಿಸಿಕೊಂಡಿತ್ತು.
Next Story





