12ರಂದು ಎಪಿಎಂಸಿ ಚುನಾವಣೆ
ಮಂಗಳೂರು, ಡಿ.26: ಮಂಗಳೂರು ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯ ಬಗ್ಗೆ ದ.ಕ. ಜಿಲ್ಲಾಧಿಕಾರಿಯವರು ಈ ಕೆಳಗಿನ ವೇಳಾ ಪಟ್ಟಿಯನ್ನು ಹೊರಡಿಸಿದ್ದಾರೆ.
ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಡಿ.29. ನಾಮಪತ್ರಗಳ ಪರಿಶೀಲನೆ ಡಿ.30. ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಜ.2 ಕೊನೆಯ ದಿನಾಂಕ. ಚುನಾವಣೆ ನಡೆಸಬೇಕಾದ ದಿನಾಂಕ ಜ.12. ಮತಗಳ ಎಣಿಕೆ ಜ.14 ರಂದು ನಡೆಯಲಿದೆ ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣಾಧಿಕಾರಿ ಹಾಗೂ ಸಹಾಯಕ ಆಯುಕ್ತರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story





