ನೀರಿನಲ್ಲಿ ಮುಳುಗಿ ಅಸ್ವಸ್ಥಗೊಂಡ ಮಹಿಳೆ ಸಾವು
ಹೊನ್ನಾವರ , ಡಿ.26 : ನದಿಯ ನೀರಿನಲ್ಲಿ ಮುಳುಗಿ ತೀವ್ರ ಅಸ್ವಸ್ಥಗೊಂಡಿದ್ದ ವಿವಾಹಿತ ಮಹಿಳೆಯೋರ್ವಳು ನಂತರ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ಹಡಿನಬಾಳ ಸಮೀಪದ ದೊಡ್ಡಕಾವೂರಿನ ಸರಸ್ವತಿ ಈಶ್ವರ ನಾಯ್ಕ(26) ಎಂದು ಗುರುತಿಸಲಾಗಿದ್ದು ಘಟನೆಗೆ ಸಂಬಂಧಿಸಿದಂತೆ ಇಲ್ಲಿನ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತೋಟದಲ್ಲಿನ ತೆಂಗಿನ ಮರಗಳಿಗೆ ಸಮೀಪದ ಶರಾವತಿ ನದಿಯಿಂದ ನೀರು ತರುತ್ತಿರುವಾಗ ಕಾಲು ಕೆಸರಲ್ಲಿ ಸಿಲುಕಿ ನೀರಲ್ಲಿ ಮುಳುಗಿದ ಈಕೆ ತೀವ್ರ ಅಸ್ವಸ್ಥಳಾದರು. ನಂತರ ಇವರನ್ನು ಚಿಕಿತ್ಸೆಗೆಂದು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವೈದ್ಯರು ಈಕೆ ಮೃತಪಟ್ಟಿರುವುದನ್ನು ಧೃಢಪಡಿಸಿದರು ಎಂದು ಪೋಲಿಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.
Next Story





