ಮೂಡಿಗೆರೆ: ಅರ್ಷಿಯಾಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಶಸ್ತಿ

ಮೂಡಿಗೆರೆ, ಡಿ.26: ಕಳೆದ ಬಾರಿ ದ್ವಿತೀಯ ಪಿಯುಸಿಯಲ್ಲಿ ಕನ್ನಡ ಪಠ್ಯ ವಿಷಯದಲ್ಲಿ ತಾಲೂಕಿನಲ್ಲಿ ಪ್ರಥಮ ಸ್ಥಾನಗಳಿಸಿದ್ದ ವಿದ್ಯಾರ್ಥಿನಿ ಅರ್ಷಿಯಾ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಪ್ರಶಸ್ತಿ ಲಭಿಸಿದೆ.
ಇತ್ತೀಚೆಗೆ ಹಾಸನದಲ್ಲಿ ನಡೆದ ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ನಡೆದ ಸಮಾರಂಭವೊಂದರಲ್ಲಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಿದರು.
ಇವರು ಪಟ್ಟಣದ ಬಾಪುನಗರದ ಐಸಾಬಿ ಹಾಗೂ ಫಯಾಝ್ ದಂಪತಿ ಪುತ್ರಿಯಾಗಿದ್ದಾರೆ.
Next Story





