ಶಿವಮೊಗ್ಗ: ಬ್ಯಾಂಕ್ ಗೋಡೆ ಕೊರೆದು ಕಳ್ಳತನಕ್ಕೆ ವಿಫಲ ಯತ್ನ
ಶಿವಮೊಗ್ಗ, ಡಿ. 26: ಕಳ್ಳರ ತಂಡವೊಂದು ಪ್ರಗತಿ ಗ್ರಾಮೀಣ ಬ್ಯಾಂಕ್ ಕಟ್ಟಡದ ಗೋಡೆ ಒಡೆದು ಕಳವಿಗೆ ವಿಫಲ ಯತ್ನ ನಡೆಸಿದ ಘಟನೆ ಶಿವಮೊಗ್ಗ ತಾಲೂಕಿನ ಗಾಜನೂರಿನಲ್ಲಿ ಶನಿವಾರ ರಾತ್ರಿ ನಡೆದಿದೆ.
ತಡರಾತ್ರಿ 2:30ರ ವೇಳೆಗೆ ನಾಲ್ವರಿದ್ದ ಕಳ್ಳರ ತಂಡವು ಈ ಕೃತ್ಯ ಎಸಗಿದೆ ಎಂದು ಹೇಳಲಾಗುತ್ತಿದೆ.
ಬ್ಯಾಂಕಿನ ಹೊರಗೋಡೆ ಒಡೆದು ಒಳನುಗ್ಗಿದ ಕಳ್ಳರು,ಲಾಕರ್ ರೂಮ್‌ಪ್ರವೇಶಿಸಲು ಗೋಡೆ ಒಡೆಯುವಾಗ ಅಕ್ಕಪಕ್ಕದವರಿಗೆ ಸದ್ದು ಕೇಳಿಸಿ ಧಾವಿಸಿದರೆನ್ನಲಾಗಿದೆ. ಇದರಿಂದ ಎಚ್ಚೆತ್ತ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
ಬ್ಯಾಂಕ್‌ಗೆ ಸಿಸಿಟಿವಿ. ವ್ಯವಸ್ಥೆ, ಕಾವಲುಗಾರ ಇರಲಿಲ್ಲ ಎಂಬ ಅಂಶ ಬೆಳಕಿಗೆ ಬಂದಿದೆ. ಕಳ್ಳರು ಬಾಗಿಲು ಮುರಿಯದೇ ಗೋಡೆ ಒಡೆದಿದ್ದರಿಂದ ಅಲಾರಂ ಸದ್ದು ಮಾಡಿಲ್ಲ. ಈ ಸಂಬಂಧ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Next Story





