ಮೊದಲ ಟೆಸ್ಟ್: ದ.ಆಫ್ರಿಕ 267/6

ಪೋರ್ಟ್ ಎಲಿಜಬೆತ್, ಡಿ.26: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕ ತಂಡ 6 ವಿಕೆಟ್‌ಗಳ ನಷ್ಟಕ್ಕೆ 267 ರನ್ ಗಳಿಸಿದೆ.
ಸೋಮವಾರ ಇಲ್ಲಿ ಆರಂಭವಾದ ಪಂದ್ಯದಲ್ಲಿ ಎಸ್‌ಸಿ ಕುಕ್(59) ಹಾಗೂ ಎಲ್ಗರ್(25) ಮೊದಲ ವಿಕೆಟ್‌ಗೆ 104 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ಮಧ್ಯಮ ಸರದಿಯಲ್ಲಿ ಡುಮಿನಿ 63 ರನ್ ಗಳಿಸಿದರು.
ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 104 ರನ್ ಗಳಿಸಿದ್ದ ಆಫ್ರಿಕ ತಂಡ ಲಂಚ್ ವಿರಾಮದ ಬಳಿಕ 2 ಹಾಗೂ ಟೀ ವಿರಾಮದ ಬಳಿಕ ನಾಲ್ಕು ವಿಕೆಟ್ ಕಳೆದುಕೊಂಡಿತು. ಲಂಕೆಯ ಪರ ಲಕ್ಮಲ್(4-62) ಯಶಸ್ವಿ ಬೌಲರ್ ಎನಿಸಿಕೊಂಡರು. ಸ್ಪಿನ್ನರ್ ರಂಗನ ಹೆರಾತ್ 2 ವಿಕೆಟ್ ಪಡೆದರು.
Next Story





