ಸಾಲಬಾಧೆ: ಗುಡಿಸಲಿಗೆ ಬೆಂಕಿ ಹಚ್ಚಿ ಸಜೀವ ದಹನಗೊಂಡ ರೈತ
ಕಡೂರು, ಡಿ.26: ಸಾಲಬಾಧೆಯಿಂದ ರೈತನೋರ್ವ ಗುಡಿಸಲಿಗೆ ಬೆಂಕಿ ಹಚ್ಚಿಕೊಂಡು ಸಜೀವ ದಹನಗೊಂಡ ಘಟನೆ ಮಾಚಗೊಂಡನಹಳ್ಳಿ ಎಂಬಲ್ಲಿ ನಡೆದಿದೆ.
ಕಡೂರು ತಾಲೂಕಿನ ಮಾಚಗೊಂಡನಹಳ್ಳಿಯ ಈರಪ್ಪ(68)ಎಂಬವರು ಮೃತಪಟ್ಟ ವ್ಯಕ್ತಿಯಾಗಿದ್ದಾರೆ.
ತಮ್ಮ ಪುತ್ರ ಎಂ.ಇ. ಈಶ್ವರಪ್ಪರೊಂದಿಗೆ ಡಿ.ಕಾರೇಹಳ್ಳಿ ಗ್ರಾಮದ ಸ.ನಂ.101 ರಲ್ಲಿ ಹಾಗೂ ಇತರ ಜಮೀನಿನಲ್ಲಿ 5 ಬೋರ್‌ವೆಲ್‌ಗಳನ್ನು ಕೊರೆಸಲು 1,80,000 ರೂ. ಸಾಲವನ್ನು ಮಾಡಿದ್ದರು.
ಕೇವಲ ಒಂದು ಬೋರ್‌ವೆಲ್‌ನಲ್ಲಿ ನೀರು ಬಂದಿದ್ದು, ಉಳಿದ 4 ಬೋರ್‌ವೆಲ್‌ನಲ್ಲಿ ನೀರು ಬಾರದ ಕಾರಣ ಜಮೀನಿಗೆ ಹಾಕಿದ್ದ ಕಲ್ಲಂಗಡಿ ಹಾಗೂ ಟೊಮಟೊ ಬೆಳೆ ಒಣಗಿ ಹೋಗಿವೆ. ಇದರಿಂದ ಮನನೊಂದು ಈರಪ್ಪಜಮೀನಿನಲ್ಲಿದ್ದ ಗುಡಿಸಲಿನಲ್ಲಿ ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾರೆ.
ಈ ಬಗ್ಗೆ ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.
Next Story





