ಝಿಂಬಾಬ್ವೆೆ ವೇಗದ ಬೌಲರ್ ಬ್ರಿಯಾನ್ ವಿಟೋರಿ ಅಮಾನತು

ದುಬೈ, ಡಿ.26: ಝಿಂಬಾಬ್ವೆೆ ವೇಗದ ಬೌಲರ್ ಬ್ರಿಯಾನ್ ವಿಟೋರಿ ಅವರನ್ನು 12 ತಿಂಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ನಡೆಸದಂತೆ ನಿರ್ಬಂಧ ಹೇರಿ ಐಸಿಸಿ ಸೋಮವಾರ ಅಮಾನತುಗೊಳಿಸಿದೆ.
ನ.27 ರಂದು ಬುಲಾವಯೊದಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆ ವಿಟೋರಿ ಬೌಲಿಂಗ್ ಶೈಲಿಯ ಬಗ್ಗೆ ಸಂಶಯ ವ್ಯಕ್ತವಾಗಿತ್ತು. ಅವರು ಬೌಲಿಂಗ್‌ನ ವೇಳೆ ಐಸಿಸಿ ನಿಗದಿಪಡಿಸಿರುವ 15 ಡಿಗ್ರಿಗಿಂತ ಹೆಚ್ಚು ಪ್ರಮಾಣದಲ್ಲಿ ಕೈಯನ್ನು ಬಾಗಿಸಿದ್ದರು.
ವಿಟೋರಿಗೆ ಅಮಾನತು ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶವಿದೆ. ಅಮಾನತು ಅವಧಿ ಮುಗಿದ ಬಳಿಕವಷ್ಟೇ ತನ್ನ ಬೌಲಿಂಗ್ ಶೈಲಿಯ ಬಗ್ಗೆ ಮರು ಪರೀಕ್ಷೆಗೆ ಒಳಗಾಗಬೇಕಾಗುತ್ತದೆ.
ವಿಟೋರಿ ಝಿಂಬಾಬ್ವೆ ಪರ ನಾಲ್ಕು ಟೆಸ್ಟ್, 20 ಏಕದಿನ ಹಾಗೂ 11 ಟ್ವೆಂಟಿ-20 ಇಂಟರ್‌ನ್ಯಾಶನಲ್ ಪಂದ್ಯಗಳನ್ನು ಆಡಿದ್ದು, 45 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
Next Story





