ಗೋವಾ ರಾಜ್ಯದ ಮದ್ಯ ವಶ
ಹೊನ್ನಾವರ, ಡಿ.26: ತಾಲೂಕಿನ ಕಾಸರಕೋಡಿನ ಚೆಕ್ ಪೋಸ್ಟ್ ಬಳಿ ಕುಮಟಾದಿಂದ ಹೊನ್ನಾವರ ಮಾರ್ಗವಾಗಿ ಹುಂಡೈ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1.07 ಲಕ್ಷ ರೂ. ಮೌಲ್ಯದ ಗೋವಾ ಮದ್ಯವನ್ನು ಇಲ್ಲಿಯ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.
ಕಾರಿನಲ್ಲಿದ್ದ 22 ಬ್ಯಾಗ್‌ಗಳಲಿದ್ದ 750 ಮಿ.ಲೀ. ಹನಿಗೈಡ್ 620 ಬಾಟಲಿ, 180 ಮಿ.ಲೀ., ಗ್ರೀನ್‌ಲ್ಯಾಂಡ್ 180 ಬಾಟಲಿಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ನಾಪತ್ತೆಯಾಗಿದ್ದು, ಪತ್ತೆಗೆ ತನಿಖೆ ಮುಂದುವರಿದಿದೆ.
ಸಿಬಿಐ ಕುಮಾರಸ್ವಾಮಿ, ಪಿಎಸ್ಸೈ ಆನಂದಮೂರ್ತಿ ನೇತೃತ್ವದ ತಂಡ ದಾಳಿ ನಡೆಸಿತು. ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





