Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕ್ರೀಡೆ
  4. ರಣಜಿ ಟ್ರೋಫಿ: ಜಾರ್ಖಂಡ್ ಸೆಮಿಫೈನಲ್‌ಗೆ...

ರಣಜಿ ಟ್ರೋಫಿ: ಜಾರ್ಖಂಡ್ ಸೆಮಿಫೈನಲ್‌ಗೆ ಲಗ್ಗೆ

ವಾರ್ತಾಭಾರತಿವಾರ್ತಾಭಾರತಿ26 Dec 2016 11:06 PM IST
share
ರಣಜಿ ಟ್ರೋಫಿ: ಜಾರ್ಖಂಡ್ ಸೆಮಿಫೈನಲ್‌ಗೆ ಲಗ್ಗೆ

ಬರೋಡಾ, ಡಿ.26: ಹರ್ಯಾಣ ವಿರುದ್ಧ ಐದು ವಿಕೆಟ್‌ಗಳ ಅಂತರದಿಂದ ಜಯ ಸಾಧಿಸಿರುವ ಜಾರ್ಖಂಡ್ ತಂಡ ಈ ವರ್ಷದ ರಣಜಿ ಟ್ರೋಫಿ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತಲುಪಿದ ಎರಡನೆ ತಂಡ ಎನಿಸಿಕೊಂಡಿತು. ಕರ್ನಾಟಕವನ್ನು ಮಣಿಸಿರುವ ತಮಿಳುನಾಡು ತಂಡ ಸೆಮಿಫೈನಲ್ ತಲುಪಿರುವ ಮೊದಲ ತಂಡವಾಗಿದೆ.

ನಾಲ್ಕನೆ ದಿನವಾದ ಸೋಮವಾರ ಗೆಲ್ಲಲು 176 ರನ್ ಗುರಿ ಪಡೆದಿದ್ದ ಜಾರ್ಖಂಡ್ ತಂಡ ಇಶಾನ್ ಕಿಶನ್‌ಗೆ ಭಡ್ತಿ ನೀಡಿತು. ಆನಂದ್ ಸಿಂಗ್(27) ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಕಿಶನ್(86 ರನ್, 61 ಎಸೆತ, 9 ಬೌಂಡರಿ, 6 ಸಿಕ್ಸರ್) ಮೊದಲ ವಿಕೆಟ್‌ಗೆ 95 ರನ್ ಸೇರಿಸಿ ಜಾರ್ಖಂಡ್‌ಗೆ ಭದ್ರ ಬುನಾದಿ ಹಾಕಿಕೊಟ್ಟರು. ಭಡ್ತಿ ನೀಡಿದ ನಾಯಕ ಸೌರಭ್ ತಿವಾರಿ ನಿರ್ಧಾರವನ್ನು ಸಮರ್ಥಿಸಿಕೊಂಡರು.

ವಿರಾಟ್ ಸಿಂಗ್(21) ಅವರೊಂದಿಗೆ 44 ರನ್ ಜೊತೆಯಾಟ ನಡೆಸಿದ ಕಿಶನ್ ಮೊತ್ತ ಮೊದಲ ಬಾರಿ ಜಾರ್ಖಂಡ್ ತಂಡ ರಣಜಿ ಸೆಮಿಫೈನಲ್‌ಗೆ ತಲುಪಲು ಕಾರಣರಾದರು. ಹರ್ಯಾಣದ ಪರ ಎಸ್‌ಎಂ ಪಟೇಲ್ ಹಾಗೂ ಯುರ್ವೆುಂದ್ರ ಸಿಂಗ್ ತಲಾ 2 ವಿಕೆಟ್ ಪಡೆದರು.

ಇದಕ್ಕೆ ಮೊದಲು 2 ವಿಕೆಟ್ ನಷ್ಟಕ್ಕೆ 146 ರನ್‌ನಿಂದ 2ನೆ ಇನಿಂಗ್ಸ್ ಮುಂದುವರಿಸಿದ ಹರ್ಯಾಣ ಒಂದು ಹಂತದಲ್ಲಿ 195 ರನ್‌ಗೆ 7 ವಿಕೆಟ್ ಕಳೆದುಕೊಂಡಿತ್ತು. ಬಾಲಂಗೋಚಿಗಳ ನೆರವಿನಿಂದ 262 ರನ್ ಗಳಿಸಲು ಸಮರ್ಥವಾಯಿತು.

2ನೆ ಇನಿಂಗ್ಸ್‌ನಲ್ಲಿ 4 ವಿಕೆಟ್ ಕಬಳಿಸಿದ ನದೀಮ್(4-78) ಪಂದ್ಯದಲ್ಲಿ 10 ವಿಕೆಟ್ ಗೊಂಚಲು ಪಡೆದರು. ಚಾಹಲ್‌ರನ್ನು ಔಟ್ ಮಾಡುವ ಮೂಲಕ ಈ ವರ್ಷದ ರಣಜಿಯಲ್ಲಿ 50ನೆ ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್

ಹರ್ಯಾಣ 258,262(ಬಿಶ್ನಾಯ್ 52, ಶುಭಂ 43, ನಿತಿನ್ 41, ನದೀಮ 4-78, ಸಮರ್ ಖಾದ್ರಿ 3-75)

 ಜಾರ್ಖಂಡ್ 345, 178/5(ಇಶಾನ್ 86, ವಿರಾಟ್ ಸಿಂಗ್ 21, ಹರ್ಷಲ್ ಪಹಲ್ 2-36, ಚಾಹಲ್ 2-43).

ಮುಂಬೈ ಬಿಗಿ ಹಿಡಿತ: ವಿಜಯ್ ಗೊಹಿಲ್  5 ವಿಕೆಟ್ ಗೊಂಚಲು ನೆರವಿನಿಂದ ರಾಯ್‌ಪುರದಲ್ಲಿ ನಡೆಯುತ್ತಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬೈ ತಂಡ ಹೈದರಾಬಾದ್‌ನ ವಿರುದ್ಧ ಬಿಗಿ ಹಿಡಿತ ಸಾಧಿಸಿದೆ.

 3 ವಿಕೆಟ್ ನಷ್ಟಕ್ಕೆ 102 ರನ್‌ನಿಂದ 4ನೆ ದಿನದಾಟ ಆರಂಭಿಸಿದ ಮುಂಬೈ ಆದಿತ್ಯ ತಾರೆ(57) ಹಾಗೂ ಸಿದ್ದೇಶ್ ಲಾಡ್(46) ಹೋರಾಟದ ನೆರವಿನಿಂದ 2ನೆ ಇನಿಂಗ್ಸ್‌ನಲ್ಲಿ 217 ರನ್ ಗಳಿಸಿತು. ಮೊದಲ ಇನಿಂಗ್ಸ್‌ನಲ್ಲಿ 14 ರನ್ ಮುನ್ನಡೆ ಪಡೆದಿದ್ದ ಮುಂಬೈ ತಂಡ ಹೈದರಾಬಾದ್‌ಗೆ 232 ರನ್ ಗುರಿ ನೀಡಿತು. ದಿನದಾಟದಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿರುವ ಹೈದರಾಬಾದ್ ಸೋಲಿನ ಸುಳಿಯಲ್ಲಿದೆ.

ಹೈದರಾಬಾದ್‌ಗೆ ಸೆಮಿಫೈನಲ್ ತಲುಪಲು ಅಂತಿಮ ದಿನವಾದ ಮಂಗಳವಾರ 3 ವಿಕೆಟ್ ನೆರವಿನಿಂದ ಇನ್ನೂ 111 ರನ್ ಗಳಿಸಬೇಕಾಗಿದೆ. ಬಿ. ಅನಿರುದ್ಧ(ಅಜೇಯ 40) ತಂಡಕ್ಕೆ ಆಸರೆಯಾಗಿದ್ದಾರೆ.

ಸಂಕ್ಷಿಪ್ತ ಸ್ಕೋರ್

ಮುಂಬೈ 293 ಹಾಗೂ 217(ತಾರೆ 57, ಸಿದ್ದೇಶ್ 46, ಮುಹಮ್ಮದ್ ಸಿರಾಜ್ 5-52, ಮಿಲಿಂದ್ 2-25)

ಹೈದರಾಬಾದ್: 280, 121/7(ಅನಿರುದ್ಧ ಅಜೇಯ 40, ತನ್ಮಯ್ ಅಗರವಾಲ್ 29, ವಿಜಯ್ ಗೊಹಿಲ್ 5-28, ನಾಯರ್ 2-27)

ಸಮಿತ್ ಗೊಹೆಲ್ ಅಜೇಯ ದ್ವಿಶತಕ, ಗುಜರಾತ್ 514/8: ಜೈಪುರದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿಯ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ ಗುಜರಾತ್ ತಂಡ ಒಡಿಶಾದ ವಿರುದ್ಧ ಬ್ಯಾಟಿಂಗ್ ಪ್ರಾಬಲ್ಯ ಮೆರೆದಿದೆ.

ಅಜೇಯ 110 ರನ್‌ನಿಂದ 4ನೆ ದಿನದಾಟವನ್ನು ಆರಂಭಿಸಿರುವ ಸಮಿತ್ ಗೊಹೆಲ್ ಅಜೇಯ ದ್ವಿಶತಕ(261) ಬಾರಿಸಿ ಗುಜರಾತ್ ತಂಡ 8 ವಿಕೆಟ್ ನಷ್ಟಕ್ಕೆ 514ರನ್ ಗಳಿಸಲು ನೆರವಾಗಿದ್ದಾರೆ. ಗುಜರಾತ್ ಒಟ್ಟಾರೆ 578 ರನ್ ಮುನ್ನಡೆ ಸಾಧಿಸಿದೆ.

ಗೊಹೆಲ್‌ಗೆ ನಾಯಕ ಪಾರ್ಥಿವ್ ಪಟೇಲ್(40) ಉತ್ತಮ ಸಾಥ್ ನೀಡಿದರು. ಚೊಚ್ಚಲ ದ್ವಿಶತಕ ಬಾರಿಸಿರುವ ಗೊಹೆಲ್ ಸವಾಯ್ ಮಾನ್ ಸಿಂಗ್ ಸ್ಟೇಡಿಯಂನ ಎಲ್ಲ ದಿಕ್ಕಿಗೆ ಸೆಲ್ಯೂಟ್ ಹೊಡೆದು ಸಂಭ್ರಮಾಚರಣೆ ಮಾಡಿದರು. ಗೊಹೆಲ್ ದ್ವಿಶತಕದ ಸಹಾಯದಿಂದ ಸೆಮಿ ಫೈನಲ್‌ಗೆ ತಲುಪುವ ಹಂತದಲ್ಲಿರುವ ಗುಜರಾತ್ ಜ.1 ರಿಂದ ಆರಂಭವಾಗಲಿರುವ ಸೆಮಿ ಫೈನಲ್‌ನಲ್ಲಿ ಜಾರ್ಖಂಡ್ ತಂಡವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರ್

ಗುಜರಾತ್ 263, 514/8(ಸಮಿತ್ ಗೊಹೆಲ್ ಅಜೇಯ 261, ಪ್ರಿಯಾಂಕ್ ಪಾಂಚಾಲ್ 81)

ಒಡಿಶಾ: 199(ಸೂರ್ಯಕಾಂತ್ 47, ಜಸ್‌ಪ್ರೀತ್ ಬುಮ್ರಾ 5-41)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X