ಐಒಬಿ ಬ್ಯಾಂಕಿನಿಂದ 27 ಲ.ರೂ. ಕಳ್ಳತನ
ತಿರುವಳ್ಳ,ಡಿ,26: ಇಲ್ಲಿಗೆ ಸಮೀಪದ ತೋಳಶ್ಶೇರಿಯ ಇಂಡಿಯನ್ ಓವರ್‌ಸೀಸ್ ಬ್ಯಾಂಕಿಗೆ ನುಗ್ಗಿದ ಕಳ್ಳರು ತಿಜೋರಿಯನ್ನು ಒಡೆದು ಹಳೆಯ ಮತ್ತು ಹೊಸ ನೋಟುಗಳು ಸೇರಿದಂತೆ 27 ಲ.ರೂ.ಗಳನ್ನು ದೋಚಿದ್ದಾರೆ.
ಕ್ರಿಸ್‌ಮಸ್ ರಜೆಯ ಬಳಿಕ ಸೋಮವಾರ ಬೆಳಗ್ಗೆ ಬ್ಯಾಂಕನ್ನು ತೆರೆದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. 16 ಲ.ರೂ. ಹಳೆಯ ನೋಟುಗಳು ಮತ್ತು 11 ಲ.ರೂ ಹೊಸನೋಟುಗಳು ಕಳ್ಳತನವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





