ರಾಜ್ಯಸಭಾ ಸದಸ್ಯತ್ವಕ್ಕೆ ಮಿಥುನ್ ಚಕ್ರವರ್ತಿ ರಾಜೀನಾಮೆ
ಹೊಸದಿಲ್ಲಿ,ಡಿ.26: ಹಿರಿಯ ನಟ ಹಾಗೂ ತೃಣಮೂಲ ಕಾಂಗ್ರೆಸ್ ಸದಸ್ಯ ಮಿಥುನ್ ಚಕ್ರವರ್ತಿ ಅವರು ತನ್ನ ರಾಜ್ಯಸಭಾ ಸದಸ್ಯತ್ವಕ್ಕೆ ಸೋಮವಾರ ರಾಜೀನಾಮೆ ಸಲ್ಲಿಸಿದ್ದಾರೆ.
ಆರೋಗ್ಯ ಸಮಸ್ಯೆಗಳಿಂದಾಗಿ ರಾಜ್ಯಸಭೆಯಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸಲು ತನಗೆ ಸಾಧ್ಯವಾಗುತ್ತಿಲ್ಲ, ಹೀಗಾಗಿ ಸದಸ್ಯತ್ವವನ್ನು ತೊರೆಯುತ್ತಿದ್ದೇನೆ ಎಂದು ಮಿಥುನ್ ಸಭಾಪತಿಗಳಿಗೆ ಸಲ್ಲಿಸಿರುವ ರಾಜೀನಾಮ ಪತ್ರದಲ್ಲಿ ಉಲ್ಲೇಖಿಸಿ ದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಮೂಲಗಳು ತಿಳಿಸಿದವು.
ಮಿಥುನ್ ಕಳೆದ ವರ್ಷ ಭಾರೀ ಸುದ್ದಿಯಾಗಿದ್ದ ಶಾರದಾ ಚಿಟ್‌ಫಂಡ್ ಹಗರಣದಲ್ಲಿ ಭಾಗಿಯಾಗಿದ್ದಾರೆಂಬ ಆರೋಪಗಳು ಕೇಳಿಬಂದಿದ್ದವು. ಅವರು ತನ್ನ ಸದಸ್ಯತ್ವದ ಅವಧಿಯಲ್ಲಿ ಕೇವಲ ಮೂರು ದಿನಗಳು ಮಾತ್ರ ರಾಜ್ಯಸಭೆಗೆ ಹಾಜರಾಗಿದ್ದರು.
2014,ಎಪ್ರಿಲ್‌ನಲ್ಲಿ ರಾಜ್ಯಸಭೆಗೆ ಆಯ್ಕೆಯಾಗಿದ್ದ ಮಿಥುನ್ ಈವರೆಗೆ ಯಾವುದೇ ಚರ್ಚೆಯಲ್ಲಿ ಭಾಗಿಯಾಗಿಲ್ಲ, ಯಾವುದೇ ಪ್ರಶ್ನೆಯನ್ನು ಕೇಳಿಲ್ಲ ಅಥವಾ ಖಾಸಗಿ ಸದಸ್ಯರ ಮಸೂದೆಯನ್ನು ಮಂಡಿಸಿಲ್ಲ.
Next Story





