ಪಿರಮಿಡ್ ಯುಗದ ಸಮಾಧಿಗಳ ಪತ್ತೆ
ಕೈರೋ,ಡಿ.26: ಈಜಿಪ್ಟ್‌ನಲ್ಲಿ ಇತ್ತೀಚಿಗೆ ಉತ್ಖನನಗೊಂಡ 4,200 ವರ್ಷಗಳಷ್ಟು ಪುರಾತನವಾದ ಗೋಡೆಯೊಂದರ ಹಿಂದೆ ಪಿರಮಿಡ್ ಯುಗದ ಸಮಾಧಿಗಳನ್ನು ಪುರಾತತ್ವ ತಜ್ಞರು ಪತ್ತೆಹಚ್ಚಿದ್ದಾರೆ.
ಕ್ಯುಬ್ಬೆಟ್ ಅಲ್-ಹವಾದಲ್ಲಿರುವ ಪ್ರವಾಸಿಗರ ಕಾಲುದಾರಿಯಲ್ಲಿ ಎರಡು ಮೀಟರ್ ಎತ್ತರದ ಈ ಪ್ರಾಚೀನ ಗೋಡೆ ಪತ್ತೆಯಾಗಿದೆ ಎಂದು ಈಜಿಪ್ಟ್‌ನ ಪುರಾತತ್ವ ಸಚಿವಾಲಯವು ತಿಳಿಸಿದೆ.
ಈ ಸಮಾಧಿಗಳು ಹರ್ಕುಫ್ ಹಾಗೂ ಹೆಕಾಯಿಬ್ ಸೇರಿದಂತೆ ಫೆರೋ ಸಾಮ್ರಾಜ್ಯದಲ್ಲಿ ಎಲಿಫೆಂಟೈನ್ ದ್ವೀಪದ ಕೆಲವು ರಾಜ್ಯಪಾಲರುಗಳದ್ದೆಂದು ಪುರಾತತ್ವ ತಜ್ಞರು ಶಂಕಿಸಿದ್ದಾರೆ.
Next Story





