ದಿಲ್ಲಿಯ ವಿಮಾನ ನಿಲ್ದಾಣದ ರನ್ ವೇಯಲ್ಲಿ ಎರಡು ವಿಮಾನಗಳು ಮುಖಾಮುಖಿ !
ತಪ್ಪಿದ ಭಾರೀ ಅನಾಹುತ

ಹೊಸದಿಲ್ಲಿ, ಡಿ.27: ಇಲ್ಲಿನ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡು ವಿಮಾನಗಳು ರನ್ ವೇಯಲ್ಲಿ ಇಂದು ಬೆಳಗ್ಗೆ ಮುಖಾಮುಖಿಯಾಗಿದ್ದು, ಅದೃಷ್ಟವಶಾತ್ ಭಾರೀ ದುರಂತ ತಪ್ಪಿದ ಘಟನೆ ವರದಿಯಾಗಿದೆ.
ಇಂಡಿಗೋ ಮತ್ತು ಸ್ಪೈಸ್ ಜೆಟ್ ಏರ್ ಕ್ರಾಫ್ಟ್ ವಿಮಾನ ರನ್ ವೇನಲ್ಲಿ ಚಲಿಸುತ್ತಿದ್ದಾಗ ಮುಖಾಮುಖಿಯಾಗಿದೆ. ಇಂಡಿಗೋ ವಿಮಾನ ಲಕ್ನೋದಿಂದ ಆಗಮಿಸಿತ್ತು. ಸ್ಪೈಸ್ ಜೆಟ್ ಏರ್ ಕ್ರಾಫ್ಟ್ ವಿಮಾನ ನಿಲ್ದಾಣದಿಂದ ಹೊರಡುವ ತಯಾರಿಯಲ್ಲಿತ್ತು.
ದೇಶದಲ್ಲಿ ಇಂದು ಬೆಳಗ್ಗೆ ನಡೆದ ವಿಮಾನ ಪ್ರಕರಣ ಇದಾಗಿದೆ. ಇದಕ್ಕೂ ಮೊದಲು ಗೋವಾದ ದಬೊಲಿಮ್ ವಿಮಾನ ನಿಲ್ದಾಣದಲ್ಲಿ ಗೋವಾದಿಂದ ಮುಂಬೈಗೆ ಹೊರಟಿದ್ದ 9 ಡಬ್ಲ್ಯು 2374 ಜೆಟ್ ಏರ್ ವೇಸ್ ವಿಮಾನ ರನ್ ವೇಯಲ್ಲಿ ಹಠಾತ್ತನೆ ಜಾರಿತ್ತು. ಇದರಿಂದಾಗಿ ವಿಮಾನಕ್ಕೆ ಸಣ್ಣಪ್ರಮಾಣದಲ್ಲಿ ಹಾನಿಯಾಗಿತ್ತು. ಮತ್ತು ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿತ್ತು. ವಿಮಾನದಲ್ಲಿ ಏಳು ಮಂದಿ ಸಿಬ್ಬಂದಿ ಹಾಗೂ 151 ಮಂದಿ ಪ್ರಯಾಣಿಕರು ಇದ್ದರು.
Next Story





