ಒಮನ್‌ನಲ್ಲಿ 2ನೆ ಹಂತದ ನಗರ ಸಭೆ ಚುನಾವಣೆಯಲ್ಲಿ 7 ಮಹಿಳೆಯರಿಗೆ ಜಯ

ಮಸ್ಕತ್,ಡಿ. 27: ರವಿವಾರ ನಡೆದ 2ನೆ ಹಂತದ ನಗರಸಭೆ ಚುನಾವಣೆಯಲ್ಲಿ 7 ಮಹಿಳೆಯರು ಜಯಗಳಿಸಿದ್ದಾರೆ. 202 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 23 ಮಹಿಳಾ ಅಭ್ಯರ್ಥಿಗಳ ಸಹಿತ 731 ಅಭ್ಯರ್ಥಿಗಳು ಕಣದಲ್ಲಿದ್ದರು. ಬುಹೈಮಿ ಗವರ್ನರೇಟ್‌ನಲ್ಲಿ ಇಬ್ಬರು, ಉತ್ತರ ಬಾತ್ತಿನದಲ್ಲಿ ಇಬ್ಬರು, ಮಸ್ಕತ್‌ನಲ್ಲಿ ಇಬ್ಬರು, ದಕ್ಷಿಣ ಬಾತ್ತಿನದಲ್ಲಿ ಓರ್ವ ಮಹಿಳಾ ಅಭ್ಯರ್ಥಿ ಜಯಗಳಿಸಿದ್ದಾರೆ. ಬುಹೈಮಿ ಗವರ್ನರೇಟ್‌ನ ಸುನೈನದಲ್ಲಿ ಮರಿಯಂ ಅಲ್ ಶಂಶಿ, ಲತೀಫಾ ಅಲ್ ಮನೈ, ಮಸ್ಕತ್ ಗವರ್ನರೇಟ್ ಅಲ್ ಅಮಿರಾತ್‌ನಲ್ಲಿ ಸನಾ ಅಲ್ ಮಝಾರಿ, ಸೀಬಿಲ್ ಅಮ್ನ ಅಲ್ ಬಲೂಶಿ, ಉತ್ತರ ಬಾತ್ತಿನದಲ್ಲಿ ರಹ್ಮ ಅಲ್ ಗುಫೈಲಿ, ಮೌಸ ಅಲ್ ಹುಸ್ನಿ, ದಕ್ಷಿಣ ಬಾತ್ತಿನದಲ್ಲಿ ರಹ್ಮ ಅಲ್ ನೌಫಲಿ ಗೆದ್ದಿದ್ದಾರೆ. 2012ರಲ್ಲಿ ನಡೆದಿದ್ದ ನಗರ ಸಭೆ ಚುನಾವಣೆಯಲ್ಲಿ ನಾಲ್ವರು ಮಹಿಳೆಯರು ವಿಜಯಗಳಿಸಿದ್ದರು ಎಂದು ವರದಿ ತಿಳಿಸಿದೆ.
Next Story





