ಸುಂಟಿಕೊಪ್ಪ: ಶ್ರೀಪುರಂ ಅಯ್ಯಪ್ಪ ಕ್ಷೇತ್ರದ ಮಂಡಲ ಪೂಜೋತ್ಸವ

ಸುಂಟಿಕೊಪ್ಪ, ಡಿ.26: ಇಲ್ಲಿನ ಶ್ರೀಪುರಂ ಅಯ್ಯಪ್ಪ ಸ್ವಾಮಿ ಕ್ಷೇತ್ರದ 46ನೆ ವಾರ್ಷಿಕ ಮಂಡಲ ಪೂಜೋತ್ಸವ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವು ನೂರಾರು ಭಕ್ತಾಧಿಗಳ ಸಮ್ಮುಖದಲ್ಲಿ ಸೋಮವಾರ ನೆರವೇರಿತು.
ಬೆಳಗ್ಗಿನಿಂದಲೇ ದೇವಸ್ಥಾನದ ಮುಖ್ಯ ಅರ್ಚಕ ಗಣೇಶ್ ಉಪಾದ್ಯಯ ನೇತೃತ್ವದಲ್ಲಿ ಪ್ರಸನ್ನ ಭಟ್, ರಾಧಾಕೃಷ್ಣ ಭಟ್, ಶ್ರೀನಿವಾಸ್ ಭಟ್, ಮಹಾಬಲಭಟ್ ದರ್ಶನ್ ಭಟ್ ಪೂಜೆ ನೆರವೇರಿಸಿದರು.
ಕೇರಳದ ಚೆಂಡೆವಾದ್ಯ ಮತ್ತು ಸಿಡಿಮದ್ದುಗಳು ಕಾರ್ಯಕ್ರಮಕ್ಕೆ ಮೆರಗು ನೀಡಿದವು.
Next Story





