ಭಾರತೀಯ ಮನೆಗೆಲಸದಾಕೆಯ ಮನೆಗೆ ಭೇಟಿ ನೀಡಿದ ಬಹರೈನ್ ವಿದೇಶಾಂಗ ಸಚಿವ !

ಬಹರೈನ್,ಡಿ.27: ಕೇರಳದ ಕೊಲ್ಲಂ ನಿವಾಸಿ ಲೈಲಾ ಆ ಅತಿಥಿ ತನ್ನನ್ನು ಭೇಟಿಯಾಗಲು ಬರುತ್ತಾರೆಂದು ಯಾವತ್ತೂ ಊಹಿಸಿರಲಾರರು. ತಾನು 21ವರ್ಷ ಬಹ್ರೈನ್‌ನಲ್ಲಿ ಕೆಲಸ ಮಾಡಿದ್ದ ಮನೆಯಿಂದ, ಆ ನಾಡಿನ ಗಣ್ಯವ್ಯಕ್ತಿ ತನ್ನನ್ನು ಹುಡುಕಿಕೊಂಡು ಕೊಲ್ಲಂವರೆಗೂ ಬಂದು ಭೇಟಿಯಾಗುತ್ತಾರೆಂದು ಖಂಡಿತಾ ಅವರು ಊಹಿಸಲಾರರು. ಆದರೆ, ಅವರು ಕೆಲಸ ಮಾಡಿದ್ದ ಮನೆಯ ಒಡೆಯ ಬಹ್ರೈನ್ ವಿದೇಶ ಸಚಿವ ಖಾಲಿದ್ ಬಿನ್ ಅಹ್ಮದ್ ಬಿನ್ ಮುಹಮ್ಮದ್ ಅಲ್ ಖಲೀಫ ಬಿಡುವು ಮಾಡಿಕೊಂಡು ಇತ್ತೀಚೆಗೆ ಅವರ ಮನೆಗೆ ಹೋಗಿ ಭೇಟಿ ಮಾಡಿದ್ದಾರೆ.
ಅವರು, ಕೇರಳದ ಕೊಲ್ಲಂಗೆ ಬಂದು ಒಂದು ಕಾಲದಲ್ಲಿ ತಮ್ಮ ಮನೆಕೆಲಸದ ಮಹಿಳೆಯನ್ನು ಭೇಟಿಯಾಗಿದ್ದು, ಮಹಿಳೆಯ ಜೊತೆ ಇರುವ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ್ದಾರೆ. ಇನ್ ಸ್ಟಾಗ್ರಾಂನಲ್ಲಿ ಖಾಲಿದ್ ಬಿನ್ ಅಹ್ಮದ್,ಲೈಲಾರ ಸಮೀಪ ನಿಂತಿರುವ ಫೋಟೊ ವೈರಲ್ ಆಗಿದೆ. ಅದನ್ನುಅವರು ಎರಡು ದಿವಸ ಮೊದಲು ಇನ್ ಸ್ಟಾಗ್ರಾಂನಲ್ಲಿ ಹಾಕಿದ್ದರು. ಇಪ್ಪತ್ತುವರ್ಷ ತಮ್ಮ ಮನೆಯಲ್ಲಿ ಸೇವೆ ಸಲ್ಲಿಸಿದ ಭಾರತದ ಮಹಿಳೆಯನ್ನು ಅವರ ಮನೆಗೆ ಹೋಗಿ ಭೇಟಿಯಾಗಿದ್ದೇನೆ ಎಂದು ಅವರು ಲೈಲಾ ರ ಜೊತೆಗಿರುವ ಫೋಟೊಕ್ಕೆ ಅಡಿ ಬರಹ ನೀಡಿದ್ದಾರೆ.
ಜೊತೆಗೆ ಲೈಲಾ ಅವರು 21ವರ್ಷ ತಮ್ಮ ಕುಟುಂಬದಲ್ಲಿ ಸೇವೆಸಲ್ಲಿಸಿದ್ದನ್ನು ಬಹ್ರೈನ್ ವಿದೇಶ ಸಚಿವ ಈ ಸಂದರ್ಭದಲ್ಲಿ ಸ್ಮರಿಸಿಕೊಂಡಿದ್ದಾರೆ. ಅವರು ಲೈಲಾರೊಂದಿಗಿರುವ ಫೋಟೊ ವೈರಲ್‌ಆಗಿದ್ದು, ಹಲವಾರು ಮಂದಿ ಇನ್ಸ್‌ಟ್‌ಗ್ರಾಂನಲ್ಲಿ ಕಮೆಂಟ್ ಹಾಕಿದ್ದಾರೆ ಹಾಗೂ ಮೂರುಸಾವಿರಕ್ಕೂ ಅಧಿಕ ಮಂದಿ ಲೈ ಕ್ ಮಾಡಿದ್ದಾರೆಂದು ವರದಿ ತಿಳಿಸಿದೆ.





