ಬಿಜೆಪಿ ನಾಯಕನನ್ನು ಥಳಿಸಿ ಹತ್ಯೆ, ಓರ್ವನ ಸೆರೆ

ಅಗರ್ತಲಾ,ಡಿ.27: ತ್ರಿಪುರಾದ ಧಲಾಯಿ ಜಿಲ್ಲೆಯ ಬುಡಕಟ್ಟು ಜನರ ಪ್ರಾಬಲ್ಯದ ಗ್ರಾಮದಲ್ಲಿ ಸೋಮವಾರ ಸಂಜೆ ವ್ಯಕ್ತಿಯೋರ್ವ ಬಿಜೆಪಿ ನಾಯಕನನ್ನು ಥಳಿಸಿ ಹತ್ಯೆಗೈದಿದ್ದಾನೆ.
ಚನಮೋಹನ್ ತ್ರಿಪುರಾ ಕೊಲೆಯಾಗಿರುವ ವ್ಯಕ್ತಿ. ಆರೋಪಿ ಬಿಸ್ವದಾ ತ್ರಿಪುರಾನನ್ನು ಬಂಧಿಸಲಾಗಿದೆ. ಈತ ಮಾನಸಿಕ ಅಸ್ವಸ್ಥನಾಗಿದ್ದಾನೆ ಎಂದು ಗಂಡಚೆರ ಪೊಲೀಸ್ ಠಾಣಾಧಿಕಾರಿ ಹೇಳಿದ್ದಾರೆ.
ಬಿಜಪಿಯ ಜನಜಾತಿ ಯುವ ಮೋರ್ಚಾದ ಗಂಡಚೆರ ಮಂಡಲ ಸಮಿತಿಯ ಮುಖ್ಯಸ್ಥರಾಗಿದ್ದ ಚನಮೋಹನ್ ತ್ರಿಪುರಾ ದಳಪತಿ ಎಡಿಸಿ ಗ್ರಾಮ ಸಮಿತಿಯ ಚುನಾಯಿತ ಸದಸ್ಯರೂ ಆಗಿದ್ದರು.
ಆಡಳಿತ ಸಿಪಿಎಂ ಕಾರ್ಯಕರ್ತರು ಚನಮೋಹನ್‌ರನ್ನು ಕೊಲೆ ಮಾಡಿದ್ದಾರೆ ಎಂದು ಬಿಜೆಪಿಯು ಆಪಾದಿಸಿದೆ.
Next Story





