ಬೆಂಕಿ ಅನಾಹುತಕ್ಕೆ ಮನೆ ಭಸ್ಮ , ಲಕ್ಷಾಂತರ ರೂ. ನಷ್ಟ

ಕಡಬ, ಡಿ.27. ಇಲ್ಲಿಗೆ ಸಮೀಪದ ಕುಂತೂರು ಪದವು ಎಂಬಲ್ಲಿನ ಎರ್ಮಾಲ ನಿವಾಸಿ ಸುಂದರ ಗೌಡ ಎಂಬವರ ಮನೆಯು ಬೆಂಕಿ ಆಕಸ್ಮಿಕದಿಂದಾಗಿ ಹೊತ್ತಿ ಭಸ್ಮವಾಗಿದ್ದು, ಅಡಿಕೆ, ರಬ್ಬರ್ ಸೇರಿದಂತೆ ಲಕ್ಷಾಂತರ ರೂ.ಗಳ ನಷ್ಟವುಂಟಾಗಿದೆ.
ಮಂಗಳವಾರದಂದು ಮನೆಯಲ್ಲಿ ಯಾರೂ ಇಲ್ಲದಾಗ ಈ ಘಟನೆ ನಡೆದಿದ್ದು, ಮನೆಯಲ್ಲಿದ್ದ 10 ಗೋಣಿ ಅಡಿಕೆ, ಒಂದು ಕ್ವಿಂಟಾಲ್ ಅಡಿಕೆ, 3000 ತೆಂಗಿನಕಾಯಿ, ಕೃಷಿ ಉಪಕರಣಗಳು ಸೇರಿದಂತೆ ಅಪಾರ ಸೊತ್ತುಗಳು ಬೆಂಕಿಯ ಕೆನ್ನಾಲಗೆಗೆ ಆಹುತಿಯಾಗಿವೆ.
ಸುದ್ದಿ ತಿಳಿದ ಊರವರು ಬೆಂಕಿ ನಂದಿಸಲೆತ್ನಿಸಿದರಾದರೂ ಅದಾಗಲೇ ಮನೆ ಪೂರ್ತಿ ಭಸ್ಮವಾಗಿತ್ತು.
Next Story





