ಪಾಕ್‌ನಲ್ಲಿ ನೋಟು ನಿಷೇಧ ಇಲ್ಲ

ಇಸ್ಲಾಮಾಬಾದ್,ಡಿ.27: ಕಪ್ಪುಹಣಕ್ಕೆ ಕಡಿವಾಣ ಹಾಕಲು 5 ಸಾವಿರ ಪಾಕಿಸ್ತಾನಿ ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದುಪಡಿಸಬೇಕೆಂಬ ಸಂಸತ್‌ನ ಮೇಲ್ಮನೆಯ ಶಿಫಾರಸನ್ನು ಪಾಕ್ ಸರಕಾರವು ಮಂಗಳವಾರ ತಿರಸ್ಕರಿಸಿದೆ.ಕಪ್ಪುಹಣದ ಹರಿವನ್ನು ಕಡಿಮೆಗೊಳಿಸಲು, ಬ್ಯಾಂಕ್‌ಖಾತೆಗಳ ಬಳಕೆಯನ್ನು ಪ್ರೋತ್ಸಾಹಿಸಲು ಹಾಗೂ ದಾಖಲೆಗಳಿಲ್ಲದ ಆರ್ಥಿಕತೆಯ ಗಾತ್ರವನ್ನು ತಗ್ಗಿಸಲು 5 ಸಾವಿರ ಪಾಕ್ ರೂ. ಮುಖಬೆಲೆಯ ನೋಟನ್ನು ನಿಷೇಧಿಸುವಂತೆ ಆಗ್ರಹಿಸಿ ಪಾಕಿಸ್ತಾನದ ಸೆನೆಟ್ ಈ ತಿಂಗಳ ಆರಂಭದಲ್ಲಿ ನಿರ್ಣಯವೊಂದನ್ನು ಅಂಗೀಕರಿಸಿತ್ತು.
ಆದರೆ ಪಾಕಿಸ್ತಾನದ ಹಣಕಾಸು ಸಚಿವಾಲಯವು ನೋಟು ನಿಷೇಧದ ಸಾಧ್ಯತೆಯನ್ನು ಸಾರಾಸಗಟಾಗಿ ತಳ್ಳಿಹಾಕಿದೆ. ನೋಟು ನಿಷೇಧದಿಂದ ದೇಶದ ಉದ್ಯಮ, ವ್ಯವಹಾರಗಳಿಗೆ ಧಕ್ಕೆಯಾಗಲಿದೆಯೆಂದು ಅದು ಹೇಳಿದೆ. 5 ಸಾವಿರ ರೂ. ನೋಟು ಪಾಕಿಸ್ತಾನದ ಅತ್ಯಂತ ಗರಿಷ್ಠ ಮುಖಬೆಲೆಯ ಕರೆನ್ಸಿಯಾಗಿದೆ. ಕಳೆದ ವಿತ್ತ ವರ್ಷದಲ್ಲಿ ಮುದ್ರಿಸಲಾದ ಶೇ.17ರಷ್ಟು ಕರೆನ್ಸಿ ನೋಟುಗಳು 5 ಸಾವಿರ ರೂ. ಮುಖಬೆಲೆಯನ್ನು ಹೊಂದಿ
ಪಾಕಿಸ್ತಾನವು ಬಹುತೇಕ ವ್ಯವಹಾರಗಳ ನಗದುರೂಪದಲ್ಲೇ ನಡೆಯುತ್ತಿದ್ದು, ಹೆಚ್ಚಿನ ಜನರು ನಗದುರಹಿತ ವ್ಯವಹಾರಗಳನ್ನು ಅಳವಡಿಸಿಕೊಂಡಿಲ್ಲ. ತೆರಿಗೆ ಪಾವತಿಸದೆ ಅಕ್ರಮವಾಗಿ ಕೂಡಿಟ್ಟ ಸಂಪತ್ತನ್ನು ಘೋಷಿಸುವಂತೆ ಜನರನ್ನು ಉತ್ತೇಜಿಲು ಪಾಕ್ ಸರಕಾರವು ಆಗಾಗ್ಗೆ ವಿಶೇಷ ತೆರಿಗೆ ರಿಯಾಯಿತಿಗಳನ್ನು ಪ್ರಕಟಿಸುತ್ತಿರುತ್ತದೆ. ಆದರೆ ಕಳೆದ ಕೆಲವು ದಶಕಗಳಲ್ಲಿ ಅದರ ಆದಾಯತೆರಿಗೆ ಸಂಗ್ರಹ ಪ್ರಮಾಣದಲ್ಲಿ ಶೇ.10ರಷ್ಟು ಬೆಳವಣಿಗೆ ಮಾತ್ರವೇ ಆಗಿದೆ. ಈ ಮಧ್ಯೆ ಪಾಕ್ ವಿತ್ತ ಸಚಿವಾಲಯವು ಹೇಳಿಕೆಯೊಂದನ್ನು ನೀಡಿ, ದೇಶದಲ್ಲಿ ಕರೆನ್ಸಿಯ ಅವಲಂಬನೆಯನ್ನು ಕಡಿಮೆಗೊಳಿಸಲು ಡಿಜಿಟಲ್ ಬ್ಯಾಂಕಿಂಗ್‌ಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳುವುದಾಗಿ ತಿಳಿಸಿದೆ.





