Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಸ್ನೇಹಿತೆಯೊಂದಿಗೆ ಸುತ್ತಾಡಿದ ಆರೋಪ :...

ಸ್ನೇಹಿತೆಯೊಂದಿಗೆ ಸುತ್ತಾಡಿದ ಆರೋಪ : ಬಜರಂಗಿಗಳಿಂದ ಯುವಕರಿಬ್ಬರಿಗೆ ಹಲ್ಲೆ

ಮಡಿಕೇರಿಯಲ್ಲಿ ಶುಕ್ರವಾರ ನಡೆದ ಘಟನೆ

ವಾರ್ತಾಭಾರತಿವಾರ್ತಾಭಾರತಿ27 Dec 2016 10:16 PM IST
share
ಸ್ನೇಹಿತೆಯೊಂದಿಗೆ ಸುತ್ತಾಡಿದ ಆರೋಪ  : ಬಜರಂಗಿಗಳಿಂದ ಯುವಕರಿಬ್ಬರಿಗೆ ಹಲ್ಲೆ

 ಮಡಿಕೇರಿ, ಡಿ.27: ಸ್ನೇಹಿತೆಯೊಂದಿಗೆ ಅಬ್ಬಿಫಾಲ್ಸ್‌ಗೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಯುವಕರಿಬ್ಬರಿಗೆ ಬಜರಂಗಿಗಳು ಥಳಿಸಿ ಗಂಭೀರ ಹಲ್ಲೆ ನಡೆಸಿರುವ ಘಟನೆ ಮಡಿಕೇರಿಯಲ್ಲಿ ಕಳೆದ ಶುಕ್ರವಾರ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ವೀರಾಜಪೇಟೆಯ ಸೈಫುದ್ದೀನ್ ಮಡಿಕೇರಿಯ ಸ್ನೇಹಿತ ಇಸ್ಬುಲ್ಲಾ ಮತ್ತು ವೀರಾಜಪೇಟೆ ಸಮೀಪದ ಕೋಲ್ತೋಡು ಬೈಗೋಡು ಪರಿಸರದ ಸ್ನೇಹಿತೆಯೊಂದಿಗೆ ಮಡಿಕೇರಿಯ ಅಬ್ಬಿಫಾಲ್ಸ್ ಗೆ ತೆರಳಿ ಹಿಂದಿರುಗುತ್ತಿದ್ದ ವೇಳೆ ಮೈತಾಡಿ ಸಮೀಪದ ಸಾಮಿಯಾಲು ಎಂಬಲ್ಲಿ ಬಜರಂಗಿಗಳ ತಂಡ ಏಕಾಏಕಿ ದಾಳಿ ನಡೆಸಿದೆ.

ದೊಣ್ಣೆ ಹಾಗೂ ಸಿಮೆಂಟ್ ಶೀಟ್‌ಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಸೈಫುಲ್ಲಾ ಮಾಹಿತಿ ನೀಡಿದ್ದು, ದಾಳಿಯಿಂದ ಇಸ್ಬುಲ್ಲಾ ಅವರಿಗೆ ಗಂಭೀರ ಗಾಯವಾಗಿ ಕೈ ಮುರಿತಕ್ಕೊಳಗಾಗಿದ್ದಾರೆ ಎಂದು ತಿಳಿದು ಬಂದಿದೆ.

 ಕಳೆದ ಶುಕ್ರವಾರ ತರಗತಿಗೆ ಬಿಡುವಿದೆ. ಎಲ್ಲಾದರೂ ಸುತ್ತಾಡಿಕೊಂಡು ಬರುವ ಎಂದು ಸ್ನೇಹಿತೆ ಒತ್ತಾಯ ಪಡಿಸಿದ ಕಾರಣ ತನ್ನ ಕಾರಿನಲ್ಲಿ ಅಬ್ಬಿಫಾಲ್ಸ್‌ಗೆ ತೆರಳಿದ್ದೆವು. ಅಬ್ಬಿಫಾಲ್ಸ್‌ಗೆ ದಾರಿ ತಿಳಿದಿಲ್ಲದ ಕಾರಣ ಮಡಿಕೇರಿಯಲ್ಲಿರುವ ಸ್ನೇಹಿತ ಇಸ್ಬುಲ್ಲಾ ಅವರನ್ನು ಕರೆುಕೊಂಡು ಅಬ್ಬಫಾಲ್ಸ್‌ಗೆ ತೆರಳಿದ್ದೆೆವು. ಅಲ್ಲಿಂದ ಬೆಳಗ್ಗೆ ಸುಮಾರು 10:30ರ ಸುಮಾರಿಗೆ ಹಿಂದಿರುಗುತ್ತಿದ್ದಾಗ ಮೈತಾಡಿ ಸಮೀಪ ಬಜರಂಗದಳದವರು ನಮ್ಮ ಕಾರನ್ನು ತಡೆದು ವಿಚಾರಿಸಿದರು. ಆ ವೇಳೆ ನಾವು ಸ್ನೇಹಿತರು ಅಬ್ಬಿಫಾಲ್ಸ್‌ಗೆ ಹೋಗಿ ಬರುತ್ತಿರುವುದಾಗಿ ತಿಳಿಸಿದೆವು. ಮಾತು ಮುಗಿಸುವಷ್ಟರಲ್ಲಿ ಏಕಾ ಏಕಿ ಹಲ್ಲೆ ನಡೆಸಲು ಆರಂಭಿಸಿದ ತಂಡದವರು, ಮರದ ಸೋಂಟೆ ಹಾಗೂ ಸಿಮೆಂಟ್ ಶೀಟ್‌ಗಳಿಂದ ಹಲ್ಲೆ ನಡೆಸಿದರು. ಬಳಿಕ ಪೊಲೀಸ್ ಠಾಣೆಗೆ ಕರೆದು ಕೊಂಡು ಹೋದರು ಎಂದು ಸೈಫುದ್ದೀನ್ ಮಾಹಿತಿ ನೀಡಿದರು.

 ಬಳಿಕ ಠಾಣೆಗೆ ಮನೆಯವರನ್ನು ಕರೆಸಲಾಯಿತು. ಹೆತ್ತವರು ಬಂದ ಮೇಲೆ ಆಕೆ ನನ್ನನ್ನು ಬಲವಂತದಿಂದ ಕರೆತರಲಾಗಿದೆ ಎಂದು ಹೇಳಲಾರಂಭಿಸಿದ್ದು, ನಾವೂ ಕಂಗಾಲಾದೆವು. ಅದರಂತೆಯೇ ಪೊಲೀಸರು ದೂರು ದಾಖಲಿಸಿ ಕೊಂಡರು ಎಂದು ಸೈಫುದ್ದೀನ್ ದೂರಿದ್ದು, ಠಾಣೆಯಲ್ಲಿ ಪೊಲೀಸರೂ ಹಲ್ಲೆ ನಡೆಸಿದ್ದು, ಬೆದರಿಕೆ ಹಾಕಿ ನಮ್ಮಿಂದ ಬರೆಸಿಕೊಂಡು ಸಹಿ ಪಡೆದಿದ್ದಾರೆ. ಅಲ್ಲದೆ, ಹಲ್ಲೆ ನಡೆಸಿದ ಬಜರಂಗಿಗಳು ನನ್ನ ಮತ್ತು ಸ್ನೇಹಿತನ ಮೊಬೈಲ್‌ಗಳನ್ನು ಅಪಹರಿಸಿದ್ದಾರೆ. ಅಲ್ಲದೆ, ಮೊದಲು ನಮ್ಮ ಮೊಬೈಲ್‌ಗಳ ಮೂಲಕವೇ ವಾಟ್ಸ್‌ಆ್ಯಪ್‌ನ ಮೂಲಕ ಫೋಟೊಗಳನ್ನು ಹರಿ ಬಿಟ್ಟಿದ್ದಾರೆ ಎಂದು ದೂರಿದ್ದಾರೆ.

ಹಲ್ಲೆಗೊಳಗಾದ ಮತ್ತೋರ್ವ ಯುವಕ ಇಸ್ಬುಲ್ಲಾ ಅವರ ತಂದೆ ಪತ್ರಿಕೆಯೊಂದಿಗೆ ಮಾತನಾಡಿ, ಬೆಳಗ್ಗೆ 11 ಗಂಟೆಯ ವೇಳೆಗೆ ಹಲ್ಲೆ ನಡೆಸಿ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ನನ್ನ ಮಗ ಕೈಮುರಿತಕ್ಕೊಳಗಾಗಿದ್ದಾನೆ. ಮತ್ತೋರ್ವನ ಕಿವಿಗೆ ಪೆಟ್ಟಾಗಿ ಆತನ ಕಿವಿಯಲ್ಲಿ ರಕ್ತ ಸೋರುತ್ತಿತ್ತು. ಆದರೂ ಮಾನವೀಯತೆ ಇಲ್ಲದ ಪೊಲೀಸರು ರಾತ್ರಿ 7 ಗಂಟೆಯ ವರೆಗೂ ಅವರಿಗೆ ಪ್ರಥಮ ಚಿಕಿತ್ಸೆ ನೀಡಿಲ್ಲ. ಅಲ್ಲದೆ, ರಾತ್ರಿಯ ವರೆಗೆ ನಾನು ಅವರನ್ನು ನೋಡಲು ಅಥವಾ ಮಾತನಾಡಲು ಪೊಲೀಸರು ಅನುಮತಿಸದೆ, ಬೈದು ಠಾಣೆಯಿಂದ ಹೊರಕಳುಹಿಸುತ್ತಿದ್ದರು ಎಂದು ದೂರಿದ್ದಾರೆ.

ಹಲ್ಲೆಯ ವೇಳೆ ನನ್ನ ಮಗ ಮತ್ತು ಆತನ ಸ್ನೇಹಿತನ ಮೊಬೈಲ್‌ಗಳನ್ನು ಹಲ್ಲೆಕೋರರು ಕಳವು ಮಾಡಿದ್ದಾರೆ. ಆ ಬಗ್ಗೆ ಪೊಲೀಸರು ದೂರು ದಾಖಲಿಸಲು ಮುಂದಾಗಿಲ್ಲ ಎಂದು ದೂರಿದ್ದಾರೆ.

ಹುಡುಗಿ ದೂರು ನೀಡಿದ ಬಳಿಕ ನನ್ನ ಮಗ ಮತ್ತು ಆತನ ಸ್ನೇಹಿತನನ್ನ ಹೆದರಿಸಿ ಸಾರ್ವಜನಿಕರು ಹಲ್ಲೆ ನಡೆಸಿರುವುದಾಗಿ ಮತ್ತು ಕೈಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಬರೆಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಬಲವಂತವಾಗಿ ನನ್ನನ್ನು ಕರೆ ತಂದಿರುವುದಾಗಿ ಹುಡುಗಿ ದೂರು ನೀಡಿದ್ದಾಳೆ ಮತ್ತು ಯುವಕರು, ಸಾರ್ವಜನಿಕರು ಹಲ್ಲೆ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X