ಮಹಿಳೆಯರ ಸರ ಕಳವು : ಆರೋಪಿಗಳಿಬ್ಬರ ಬಂಧನ
ಮಂಗಳೂರು, ಡಿ. 27: ಉಳ್ಳಾಲ ಮತ್ತು ಮೂಡುಬಿದಿರೆ ಪರಿಸರದಲ್ಲಿ ಮಹಿಳೆಯರಿಬ್ಬರ ಸರಗಳ್ಳತನ ನಡೆಸಿದ ಇಬ್ಬರು ಆರೋಪಿಗಳನ್ನು ಉತ್ತರ ಠಾಣಾ ಪೊಲೀಸರು ಇಂದು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮರೋಳಿಯ ವಿಮರ್ಶ ಆಳ್ವ (21) ಹಾಗೂ ಪಾಂಡೇಶ್ವರ ಶಿವನಗರದ ಸಾಹಿಲ್ ಹುಸೇನ್ (21) ಎಂದು ಗುರುತಿಸಲಾಗಿದೆ.
ಆರೋಪಿಗಳಿಂದ ಚಿನ್ನದ ಸರ, ಕೃತ್ಯಕ್ಕೆ ಬಳಸಿದ 2 ಹೋಂಡಾ ಆ್ಯಕ್ವಿವಾ ಸ್ಕೂಟರ್ ಸಹಿತ 2.26 ಲಕ್ಷ ರೂ. ಮೊತ್ತ ವೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಕಾರ್ಯಾಚರಣೆಯಲ್ಲಿ ಉತ್ತರ ಠಾಣಾ ಇನ್ಸ್‌ಪೆಕ್ಟರ್ ಶಾಂತರಾಮ್, ಎಸ್‌ಐ ಮದನ್,ಪ್ರೊಬೆಷನರಿ ಎಸ್‌ಐಗಳಾದ ಶೀತಲ್ ಅಲಗೂರ್, ರವಿಪವಾರ್, ಸಿಬ್ಬಂದಿಗಳಾದ ಎಎಸ್‌ಐ ಪದ್ಮನಾಭ, ಹರಿಯಪ್ಪ, ಗೋವರ್ಧನ್, ವಿನಾಯಕ್, ಮಲ್ಲಿಕಾರ್ಜುನ ಭಾಗವಹಿಸಿದ್ದರು.
Next Story





