ಮಂಗಳಮುಖಿಯರಿಂದ ವೈದ್ಯರ ಮೇಲೆ ಹಲ್ಲೆ
ದಾವಣಗೆರೆ, ಡಿ.27: ಮಂಗಳಮುಖಿಯೊಬ್ಬರು ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ಬಂದು ವೈದ್ಯರು ಹಾಗೂ ಪೊಲೀಸರ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಬಗ್ಗೆ ದೂರು ದಾಖಲಾಗಿದೆ. ಮಂಗಳಮುಖಿ ಮನೆಯಲ್ಲಿ ಅಸ್ವಸ್ಥರಾಗಿದ್ದ ಕಾರಣ ಅವರನ್ನು ನಗರದ ಚಿಗಟೇರಿ ಆಸ್ಪತ್ರೆಗೆ ಸೋಮವಾರ ರಾತ್ರಿ 11:30ಕ್ಕೆ ಮೂವರು ಮಂಗಳಮುಖಿಯರು ತುರ್ತು ಚಿಕಿತ್ಸಾ ಘಟಕಕ್ಕೆ ಬಂದು ಚಿಕಿತ್ಸೆ ನೀಡುವಂತೆ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ.
ರಾತ್ರಿ 11:45ಕ್ಕೆ ವೈದ್ಯರೊಬ್ಬರು ಬಂದು ಚಿಕಿತ್ಸೆ ನೀಡಲು ಮುಂದಾದಾಗ ಅನವಶ್ಯಕವಾಗಿ ವೈದ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಮಂಗಳಮುಖಿಯರು ಅವರ ಕೊಠಡಿಗೆ ತೆರಳಿ ಪೀಠೋಪಕರಣ, ಕಿಟಕಿ ಗಾಜುಗಳು ಒಡೆದು ದಾಂಧಲೆ ಮಾಡಿದ್ದಾರೆ. ಇದನ್ನು ತಡೆಯಲು ಮುಂದಾದ ಜಿಲ್ಲಾಸ್ಪತ್ರೆಯ ಪೊಲೀಸರ ಮೇಲೆಯೂ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ನಂತರ ಬಡಾವಣೆ ಪೊಲೀಸ್ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟ್ಟರ್ ಸ್ಥಳಕ್ಕೆ ದೌಡಾಯಿಸಿದರು.
ರಾತ್ರಿ ಮಂಗಳಮುಖಿಯರ ಆಭರ್ಟ ಮುಂದುವರಿದಿತ್ತು. ಇವರನ್ನು ವಶಕ್ಕೆ ತೆಗೆದುಕೊಳ್ಳಲು ಹೋದಾಗ ವೃತ್ತ ನಿರೀಕ್ಷಕರ ಮೇಲೆಯೂ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ನಂತರ ಓರ್ವ ಮಂಗಳಮುಖಿಯನ್ನು ಪೊಲೀಸ್ ಸಿಬ್ಬಂದಿ ವಶಕ್ಕೆ ಪಡೆದಿದ್ದು, ಮತ್ತಿಬ್ಬರು ಪರಾರಿಯಾಗಿದ್ದಾರೆ.
ಪ್ರಕರಣ ಬಡಾವಣೆ ಠಾಣೆಯಲ್ಲಿ ದಾಖಲಾಗಿದೆ. ವಿಷಯ ತಿಳಿದು ತಡರಾತ್ರಿಯೇ ಆಸ್ಪತ್ರೆಗೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಭೀಮಾಶಂಕರ್ ಗುಳೇದ್ ಪ್ರಕರಣದ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಬುಡಕಟ್ಟು ಜನಾಂಗದ ಹಕ್ಕುಪತ್ರದ ಅರ್ಜಿ ಸ್ವೀಕರಿಸಲು ಹಿಂದೇಟು







