ಚಿಕ್ಕಮಗಳೂರು: ಸಂಗೀತದಲ್ಲಿ ರಶ್ಮಿಗೆ ಮೂರು ಚಿನ್ನದ ಪದಕ

ಚಿಕ್ಕಮಗಳೂರು, ಡಿ.27: ಕಳೆದ ಸಾಲಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯ ನಡೆಸಿದ ಬಿ ಮ್ಯೂಸಿಕ್ ಅಂತಿಮ ವರ್ಷದ ಪರೀಕ್ಷೆಯಲ್ಲಿ ಸುಗಮ ಸಂಗೀತ ಗಂಗಾ ಸಂಸ್ಥೆ ಕಲಾವಿದೆ, ಗಾಯಕಿ ಟಿ.ರಶ್ಮಿ ಪ್ರಥಮ ರ್ಯಾಂಕ್ ಪಡೆದು ಮೂರು ಚಿನ್ನದ ಪದಕ ಹಾಗೂ ಎರಡು ನಗದು ಬಹುಮಾನ ಪಡೆದಿದ್ದಾರೆ.
ಸುಮಾರು 15 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಕೃಷಿ ಮಾಡುತಿದ್ದು ರಾಜ್ಯ ಮಟ್ಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಹಂಪಿ ಉತ್ಸವ, ಆಳ್ವಾಸ್ ನುಡಿಸಿರಿ ಮುಂತಾದ ಕಡೆಗಳಲ್ಲಿ ಸಂಗೀತ ಕಚೇರಿ ನಡೆಸಿಕೊಟ್ಟಿದ್ದಾರೆ.
ಉಪನ್ಯಾಸಕ ಎಚ್.ಎಂ.ನಾಗರಾಜ್‌ರಾವ್ ಕಲ್ಕಟ್ಟೆ ನಿರ್ದೇಶನದಲ್ಲಿ 25ಕ್ಕೂ ಹೆಚ್ಚು ಸಿಡಿಗಳಲ್ಲಿ ಹಾಡಿದ್ದಾರೆ.
Next Story





