ಶುಂಠಿ ಬೆಲೆ ಕುಸಿತ: ವಿಷ ಸೇವಿಸಿ ರೈತ ಆತ್ಮಹತ್ಯೆ
ಮೂಡಿಗೆರೆ, ಡಿ.27: ಶುಂಠಿ ಬೆಲೆ ಕುಸಿತ ಮತ್ತು ಸಾಲಬಾಧೆ ಪರಿಣಾಮ ತಳವಾರ ಗ್ರಾಮದ ರೈತ ಗಣೇಶ್ ಗೌಡ(47) ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು,ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
1ಎಕರೆ ಗದ್ದೆ ದಾಖಲಾತಿ ಜಮೀನು ಸೇರಿದಂತೆ ಸುಮಾರು 3ಎಕರೆಯಷ್ಟು ಜಮೀನು ಹೊಂದಿದ್ದಾರೆ.ಶುಂಠಿ ಬೆಳೆಗಾಗಿ ಸ್ವಸಹಾಯ ಸಂಘಗಳಿಂದ ಹಾಗೂ ಖಾಸಗಿ ವ್ಯಕ್ತಿಗಳೊಂದಿಗೆ ಸುಮಾರು 2ಲಕ್ಷ ರೂ. ಸಾಲ ಮಾಡಿದ್ದನು. ಶುಂಠಿ ಬೆಲೆ ಕುಸಿತದಿಂದಾಗಿ ಮಾರಾಟ ಮಾಡಲಾಗದೇ ಗದ್ದೆಯಲ್ಲೇ ಉಳಿದಿದ್ದ ಪರಿಣಾಮ ಚಿಂತಿತರಾಗಿದ್ದರು.
ಡಿ.26 ಸೋಮವಾರ ಮಧ್ಯಾಹ್ನ ಮನೆಯಲ್ಲಿ ಶುಂಠಿಗೆ ಸಿಂಪಡಿಸಲು ತಂದಿದ್ದ ಕಳೆ ನಾಶಕ ವಿಷ ಸೇವಿಸಿ ಅಸ್ವಸ್ಥರಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಬೆಳಗ್ಗಿನ ಜಾವ 4ಗಂಟೆಗೆ ರೈತ ಗಣೇಶ್ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





