ಮುಂಡಗೋಡ: ಯುವತಿ ಕಾಣೆ
ಮುಂಡಗೋಡ, ಡಿ.27: ಯುವತಿ ಕಾಣೆಯಾದ ಘಟನೆ ತಾಲೂಕಿನ ಹನಮಾಪುರ ಗ್ರಾಮದಲ್ಲಿ ನಡೆದಿದೆ.
ನಾಪತ್ತೆಯಾದವರನ್ನು ಶೀಲಾ ಹನ್ಮಂತಪ್ಪ ಮಕರವಳ್ಳಿ (19)ಎಂದು ಹೇಳಲಾಗಿದೆ. ಡಿ.25ರಂದು ರಾತ್ರಿ 8 ಗಂಟೆಗೆ ಬಹಿರ್ದೆಸೆಗೆ ಹೋಗಿ ಬರುವುದಾಗಿ ತಾಯಿಗೆ ಹೇಳಿ ಹೋದವಳು ಈವರೆಗೂ ಪತ್ತೆಯಾಗಿಲ್ಲ. ಸಂಬಂಧಿಕರು, ಹಾಗೂ ಪರಿಚಯಸ್ಥರಿಗೆ ಕೇಳಲಾಗಿ ಎಲ್ಲಿಯೂ ಇರುವಿಕೆಯ ಕುರಿತು ಮಾಹಿತಿ ಲಭ್ಯವಾಗಿಲ್ಲ ಎನ್ನಲಾಗಿದೆ.
ಇದರಿಂದ ಯುವತಿಯ ಪೋಷಕರು ಮಂಗಳವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರನ್ನು ದಾಖಲಿಸಿಕೊಂಡಿರುವ ಎಎಸ್ಸೈ ವಿಠ್ಠಲ ಮಲಕವಾಡಕರ ಮುಂದಿನ ತನಿಖೆ ಕೈಗೊಂಡಿದ್ದಾರೆ.
Next Story





