ಅಬಕಾರಿ ಮುಟ್ಟುಗೋಲು ವಾಹನಗಳ ಹರಾಜು
ಮಂಗಳೂರು, ಡಿ.27: ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 43 ಎ ರಡಿಯಲ್ಲಿ ಸರಕಾರಕ್ಕೆ ಮುಟ್ಟುಗೋಲು ಹಾಕಿಕೊಂಡು ವಿಲೇವಾರಿಗೆ ಒಳಪಡಿಸಲಾದ ವಿವಿಧ ವಾಹನಗಳನ್ನು ಬಹಿರಂಗ ಹರಾಜು ನಡೆಯಲಿದೆ.
ಬಂಟ್ವಾಳ/ಬೆಳ್ತಂಗಡಿ ತಾಲೂಕಿಗೆ ಸಂಬಂಧಿಸಿದ ಬಜಾಜ್ ಅಟೋ ರಿಕ್ಷಾ, ಬಜಾಜ್ ಪ್ಲಾಟಿನಾ ಮೋಟಾರ್ ಸೈಕಲ್, ಬಜಾಜ್ ಚೇತಕ್ ಸ್ಕೂಟರ್-2, ಹೀರೋ ಹೋಂಡಾ ಬೈಕ್, ಬಜಾಜ್ ಅಟೋ ರಿಕ್ಷಾ, ಮಾರುತಿ ಆಲ್ಟೋ ಕಾರು-2, ವಾಹನಗಳನ್ನು ಡಿಸೆಂಬರ್ 29 ರಂದು ಬಹಿರಂಗ ಹರಾಜು ನಡೆಸಲಾಗುವುದು. ಹರಾಜಿನಲ್ಲಿ ಭಾಗವಹಿಸಲು ಇಚ್ಛಿಸುವ ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ ಅಬಕಾರಿ ಉಪ ಅಧೀಕ್ಷಕರು, ಬಂಟ್ವಾಳ ಉಪ ವಿಭಾಗ (ಮೊಬೈಲ್ ನಂ: 9449597107) ಇವರನ್ನು ಸಂಪರ್ಕಿಸಬಹುದು.
ಪುತ್ತೂರು/ಸುಳ್ಯತಾಲೂಕಿಗೆ ಸಂಬಂಧಿಸಿದ 1) ಸ್ವರಾಜ್ ಮಜ್ದಾ ಲಾರಿ, ಬಜಾಜ್ ಡಿಸ್ಕವರಿ, ಬಜಾಜ್ ಚೇತಕ್ ಸ್ಕೂಟರ್, ಬಜಾಜ್ ಅಟೋ ರಿಕ್ಷಾ ವಾಹನಗಳನ್ನು ಡಿ.30ರಂದು ಬಹಿರಂಗ ಹರಾಜು ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಅಬಕಾರಿ ಉಪ ಅಧೀಕ್ಷಕರು, ಪುತ್ತೂರು ಉಪ ವಿಭಾಗ (ಮೊಬೈಲ್ ಸಂ: 9449597111) ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಅಬಕಾರಿ ಉಪ ಆಯುಕ್ತರ ಪ್ರಕಟನೆ ತಿಳಿಸಿದೆ.





