ಪ್ರೊ ಕುಸ್ತಿ ಲೀಗ್: ಗೀತಾ, ಬಬಿತಾರಿಂದ ‘ಯುಪಿ ದಂಗಲ್’ ಅನಾವರಣ

ಹೊಸದಿಲ್ಲಿ, ಡಿ.27: ದ್ವಿತೀಯ ಆವೃತ್ತಿಯ ಪ್ರೊಕುಸ್ತಿ ಲೀಗ್‌ಗೆ ಉತ್ತರ ಪ್ರದೇಶದ ತಂಡವೊಂದು ಸೇರ್ಪಡೆಯಾಗಿದೆ. ‘ಯುಪಿ ದಂಗಲ್’ ಹೆಸರಿನ ಹೊಸ ತಂಡವನ್ನು ಕುಸ್ತಿತಾರೆಯರಾದ ಗೀತಾ ಹಾಗೂ ಬಬಿತಾ ಫೋಗತ್, ಫೋಗತ್ ಸಹೋದರಿಯರ ತಂದೆ ಹಾಗೂ ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಮಹಾವೀರ್ ಸಿಂಗ್ ಫೋಗತ್ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಅನಾವರಣಗೊಳಿಸಿದರು.
ಯುಪಿ ದಂಗಲ್‌ನಲ್ಲಿ ಗೀತಾ, ಬಬಿತಾ ಫೋಗತ್, ಉಕ್ರೇನ್‌ನ ಆ್ಯಂಡ್ರೆ ಕ್ವಿಟ್ಕೊವ್‌ಸ್ಕಿ, ಕ್ಯೂಬಾದ ಒಲಿಂಪಿಯನ್ ಲಿವಾನ್ ಲೊಪೆಝ್, 2 ಬಾರಿಯ ಕಾಮನ್‌ವೆಲ್ತ್ ಚಾಂಪಿಯನ್ ವೌಸನ್ ಖತ್ರಿ ಸಹಿತ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕುಸ್ತಿಗಳು ಭಾಗವಹಿಸಲಿದ್ದಾರೆ.
Next Story





