ಭಾರತದ ಲೀಗ್‌ಗಳು ವಿಲೀನವಾಗಬೇಕು: ಸುನೀಲ್ ಚೆಟ್ರಿ
ಹೊಸದಿಲ್ಲಿ, ಡಿ.27: ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್) ಹಾಗೂ ಐ-ಲೀಗ್ ವಿಲೀನವಾದರೆ ಭಾರತೀಯ ಫುಟ್ಬಾಲ್ ತಂಡಕ್ಕೆ ಫಿಫಾದ ಸೌಹಾರ್ದ ಪಂದ್ಯಗಳಲ್ಲಿ ಆಡುವ ಅವಕಾಶ ಹೆಚ್ಚಾಗುತ್ತದೆ ಎಂದು ಭಾರತದ ಸ್ಟ್ರೈಕರ್ ಸುನೀಲ್ ಚೆಟ್ರಿ ಅಭಿಪ್ರಾಯಪಟ್ಟಿದ್ದಾರೆ.
‘‘ನನಗೆ ವರ್ಷವೊಂದರಲ್ಲಿ ಫಿಫಾ ಎಲ್ಲ 13 ಸೌಹಾರ್ಧ ಪಂದ್ಯಗಳಲ್ಲಿ ಆಡಬೇಕೆಂಬ ಬಯಕೆಯಿದೆ. ಇದಕ್ಕೆ ಸಂಘಟಿತ ಲೀಗ್ ಅತ್ಯಂತ ಉಪಯುಕ್ತವಾಗುತ್ತದೆ. ಭಾರತ ತಂಡ ಹೆಚ್ಚಿನ ಪಂದ್ಯಗಳನ್ನು ಆಡುವಂತಾಗಲು ಲೀಗ್‌ನ ವಿಲೀನದ ಬಗ್ಗೆ ನಾವು ಹೆಚ್ಚು ಪ್ರಾಧಾನ್ಯತೆ ನೀಡಬೇಕು. ಸೌಹಾರ್ದ ಪಂದ್ಯಗಳಲ್ಲಿ ಗೆಲುವು ಸೋಲಿಗಿಂತಲೂ ಮುಖ್ಯವಾಗಿ ಪಂದ್ಯದಲ್ಲಿ ಅಭಿವೃದ್ದಿಯಾಗಲು ಇದು ನೆರವಾಗುತ್ತದೆ ಎಂದು ಚೆಟ್ರಿ ಹೇಳಿದ್ದಾರೆ.
ಭಾರತ ಸ್ಯಾಫ್ ಚಾಂಪಿಯನ್‌ಶಿಪ್‌ನಲ್ಲಿ ಗೆಲ್ಲಲು ನೆರವಾಗಿದ್ದ ಚೆಟ್ರಿ ಬೆಂಗಳೂರು ಎಫ್‌ಸಿ ತಂಡ ಎಎಫ್‌ಸಿ ಫೈನಲ್‌ಗೆ ತಲುಪಿ ಐತಿಹಾಸಿಕ ಸಾಧನೆ ಮಾಡಲು ನೆರವಾಗಿದ್ದರು. ಐಎಸ್‌ಎಸ್‌ನಲ್ಲಿ ಚೆಟ್ರಿ ನೇತೃತ್ವದ ಮುಂಬೈ ಸಿಟಿ ಎಫ್‌ಸಿ ಸೆಮಿ ಫೈನಲ್‌ಗೆ ತಲುಪಿತ್ತು. ಒಟ್ಟಾರೆ 2016ರ ಚೆಟ್ರಿಗೆ ಯಶಸ್ವಿ ವರ್ಷವಾಗಿದೆ.





