ಪದಾಧಿಕಾರಿಗಳ ಆಯ್ಕೆ

ಕಾಪು, ಡಿ.27: ಪೊಲಿಪು ಖುವ್ವತ್ತುಲ್ ಇಸ್ಲಾಂ ಯಂಗ್‌ಮೆನ್ ಅಸೋಸಿ ಯೇಶನ್‌ನ ವಾರ್ಷಿಕ ಮಹಾಸಭೆಯು ಪೊಲಿಪು ಜಾಮೀಯ ಮಸೀದಿ ಅಧ್ಯಕ್ಷ ಎಚ್.ಮುಹಮ್ಮದ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರಗಿತು.
ಕಾಪು ಉಸ್ತಾದ್ ಪಿ.ಬಿ.ಅಹಮದ್ ಮುಸ್ಲಿಯಾರ್ ದುವಾ ನೆರವೇರಿಸಿ ದರು. ಖತೀಬ್ ಇರ್ಷಾದ್ ಸಅದಿ ಉದ್ಘಾಟಿಸಿದರು. ಕಾರ್ಯದರ್ಶಿ ಆರೀಫ್ ಉಪಸ್ಥಿತರಿದ್ದರು. ಸಂಸ್ಥೆಯ ನೂತನ ಅಧ್ಯಕ್ಷರಾಗಿ ಬಶೀರ್ ಹುಸೇನ್ ಪುನರಾಯ್ಕೆಗೊಂಡರು.
ಉಪಾಧ್ಯಕ್ಷರಾಗಿ ಆರೀಫ್ ಕಲ್ಯ, ಪ್ರಧಾನ ಕಾರ್ಯದರ್ಶಿಯಾಗಿ ಅಕ್ರಂ, ಜೊತೆ ಕಾರ್ಯದರ್ಶಿಯಾಗಿ ಶಬೀರ್ ಮುಹಮ್ಮದ್, ರಜಬ್, ಕೋಶಾ ಧಿಕಾರಿಯಾಗಿ ಅಬ್ದುಲ್ ಅಝೀಝ್, ಸಂಘಟನಾ ಕಾರ್ಯದರ್ಶಿಯಾಗಿ ಅಬ್ದುಲ್ ಮಜೀದ್, ವಾಲೆಂಟಿಯರ್ಸ್ ಉಸ್ತುವಾರಿಯಾಗಿ ಬಶೀರ್ ಅಬ್ದುಲ್ ಖಾದರ್, ಹಮೀದ್ ಪಾಂಗಾಳ, ಶಾನವಾಜ್, ನಿಹಾಲ್, ಶರೀಫ್ ಇಸ್ಮಾಯಿಲ್, ಅಜರ್, ತಮೀಮ್, ಕುಕ್ಕಿಂಗ್ ಉಸ್ತುವಾರಿಯಾಗಿ ಮುಹಮ್ಮದ್ ಉಮರಬ್ಬ, ಶರೀಫ್ ಮಡಂಬು, ದಫ್ ಉಸ್ತುವಾರಿಯಾಗಿ ಶಾಹಿದ್, ಜಲೀಲ್, ಸಲಹೆಗಾರರಾಗಿ ಕೆ.ಎಂ.ರಜಾಕ್, ಹುಸೇನಾರ್, ರಜಬ್, ಉಮ್ಮರಬ್ಬ, ಮೊಹಿದಿನಬ್ಬ ಆಯ್ಕೆಯಾದರು.





